ನೆರೆ ಸಂತ್ರಸ್ತರಿಗೆ ಮಂಗಳೂರಿನಿಂದ ತರಕಾರಿ;
Team Udayavani, Aug 21, 2018, 10:07 AM IST
ಮಂಗಳೂರು: ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿ ಒದಗಿಸುವ ನಿಟ್ಟಿನಲ್ಲಿ ಮಂಗಳೂರಿನಿಂದ ತರಕಾರಿಗಳು ಯಥೇತ್ಛವಾಗಿ ದಾನಿಗಳ ಮೂಲಕ ಸರಬರಾಜು ಆಗುತ್ತಿವ. ಇದೇ ವೇಳೆ ಮಂಗಳೂರಿಗೆ ತರಕಾರಿ ಪೂರೈಕೆಯಾಗುವ ಬೆಂಗಳೂರು ಮತ್ತು ಬಯಲು ಸೀಮೆಯಿಂದ ನೇರ ರಸ್ತೆ ಸಾರಿಗೆ ಸಂಪರ್ಕ ಕಡಿತಗೊಂಡ ಕಾರಣ ಕೆಲವು ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಮುಖ್ಯವಾಗಿ ಎರಡು ದಿನಗಳಿಂದ ಈರುಳ್ಳಿ, ಬಟಾಟೆ, ಟೊಮೆಟೊ, ಬೀಟ್ ರೂಟ್, ಅಲಸಂಡೆ ದರ ಸರಾಸರಿ 5 ರೂ. ನಂತೆ ಏರಿಕೆಯಾಗಿದೆ. ಸೋಮವಾರ ಈ ತರಕಾರಿಗಳ ಬೆಲೆ: ಈರುಳ್ಳಿ- 25, ಬಟಾಟೆ- 30, ಟೊಮೆಟೊ- 20, ಬೀಟ್‌ರೂಟ್- 40, ಅಲಸಂಡೆ- 50 ರೂ. ಗಳಷ್ಟಿತ್ತು.
ನೆರೆ ಸಂತ್ರಸ್ತರಿಗಾಗಿ ಅಧಿಕ ಪ್ರಮಾಣ
ದಲ್ಲಿ ತರಕಾರಿ ಸಾಗಿಸುತ್ತಿದ್ದರೂ ಮಾರ್ಕೆಟ್‌ನಲ್ಲಿ ತರಕಾರಿ ಕೊರತೆ ಕಂಡು ಬಂದಿಲ್ಲ. ಸಂತ್ರಸ್ತರಿಗೆ ನೀಡುವುದಕ್ಕಾಗಿ ಖರೀದಿಸಲು ಬರುವ ನೈಜ ದಾನಿಗಳಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ ಎಂದವರು ವಿವರಿಸಿದ್ದಾರೆ.
ಮಂಗಳೂರಿಗೆ ಈರುಳ್ಳಿ ಹುಬ್ಬಳ್ಳಿಯಿಂದ ಹಾಗೂ ಬಟಾಟೆ ಮಹಾರಾಷ್ಟ್ರದ ಪುಣೆಯಿಂದ ಸರಬರಾಜು ಆಗುತ್ತಿದೆ. ಇತರ ತರಕಾರಿಗಳು ಬೆಂಗಳೂರು ಮತ್ತು ರಾಜ್ಯದ ಬಯಲು ಸೀಮೆಯಿಂದ ಬರುತ್ತಿವೆ. ಶಿರಾಡಿ ಘಾಟಿ, ಚಾರ್ಮಾಡಿ ಮತ್ತು ಮಡಿಕೇರಿ ಮಾರ್ಗಗಳು ಮುಚ್ಚಿದ್ದರಿಂದ ಎಸ್‌ಕೆ ಬಾರ್ಡರ್ ಮೂಲಕ ಮಂಗಳೂರಿಗೆ ತರಿಸಲಾಗುತ್ತದೆ. ಹಾಗಾಗಿ ಮಾರ್ಕೆಟ್‌ಗೆ ತರಕಾರಿ ತಲಪುವಾಗ 2- 3 ಗಂಟೆ ವಿಳಂಬವಾಗುತ್ತಿದೆ.
ಕೇರಳಕ್ಕೆ ರವಾನೆ
ಮಂಗಳೂರಿನಿಂದ ಕೊಡಗಿಗಿಂತಲೂ ಹೆಚ್ಚಾಗಿ ಕೇರಳಕ್ಕೆ ತರಕಾರಿ ರವಾನೆಯಾಗುತ್ತದೆ. ದಾನಿಗಳು ಈರುಳ್ಳಿ ಮತ್ತು ಬಟಾಟೆ ಅಧಿಕ ಪ್ರಮಾಣದಲ್ಲಿ ಖರೀದಿಸಿ ಸಾಗಾಟ ಮಾಡುತ್ತಿದ್ದಾರೆ. ಸೋಮವಾರ ಮಂಗಳೂರಿಗೆ ಎಂದಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ತರಿಸಿದ್ದು, ಎಲ್ಲವೂ ಖಾಲಿಯಾಗಿದೆ ಎನ್ನುತ್ತಾರೆ ನಗರದ ಸೆಂಟ್ರಲ್ ಮಾರ್ಕೆಟ್‌ನ ವ್ಯಾಪಾರಿ ಡೇವಿಡ್ ಡಿ’ಸೋಜಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.