ಸೆಪಕ್ ಟಕ್ರಾ: ಭಾರತಕ್ಕೆ ಚೊಚ್ಚಲ ಪದಕ
Team Udayavani, Aug 22, 2018, 6:00 AM IST
ಪಾಲೆಂಬಾಂಗ್: ಏಶ್ಯನ್ ಗೇಮ್ಸ್ನ ಸೆಪಕ್ ಟಕ್ರಾ ಸ್ಪರ್ಧೆಯಲ್ಲಿ ಭಾರತ ಚೊಚ್ಚಲ ಪದಕ ಗೆದ್ದು ಸಂಭ್ರಮಿಸಿದೆ. ಸೆಮಿಫೈನಲ್ನಲ್ಲಿ ಪುರುಷರ ರೆಗು ತಂಡ ಸ್ಪರ್ಧೆಯಲ್ಲಿ ಭಾರತ ತಂಡವು ಹಾಲಿ ಚಾಂಪಿಯನ್ ಥೈಲಂಡ್ ತಂಡದೆದುರು 0-2 ಅಂತರದಿಂದ ಸೋತಿದೆ. ಸೆಮಿಫೈನಲ್ನಲ್ಲಿ ಸೋತ ತಂಡಗಳಿಗೆ ಪದಕ ನೀಡುವ ಕಾರಣ ಭಾರತ ಕಂಚಿನ ಪದಕ ಪಡೆದಿದೆ. ಭಾರತ ಮೊದಲ ಪಂದ್ಯದಲ್ಲಿ ಇರಾನ್ ತಂಡವನ್ನು ಸೋಲಿಸುವ ಮೂಲಕ ಉತ್ತಮ ಆರಂಭ ಪಡೆದಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ಇಂಡೋನೇಶ್ಯಕ್ಕೆ ಶರಣಾಗಿತ್ತು. ತನ್ನ ಬಣದಲ್ಲಿ ಎರಡನೇ ಶ್ರೇಷ್ಠ ತಂಡವಾಗಿ ಭಾರತ ಅಂತಿಮ ನಾಲ್ಕರ ಸುತ್ತಿಗೇರಿತ್ತು.
ಏನಿದು ಸೆಪಕ್ ಟಕ್ರಾ?
ವಾಲಿಬಾಲ್ ಅಥವಾ ಬೀಚ್ ವಾಲಿಬಾಲ್ ಅನ್ನು ಹೋಲುವ ಕ್ರೀಡೆ. ಇಲ್ಲಿ ಕೈಯಿಂದ ಚೆಂಡನ್ನು ಮುಟ್ಟಿ ಆಡುವಂತಿಲ್ಲ. ಕಾಲು, ಎದೆ, ತಲೆ ಮತ್ತು ಮಂಡಿಯನ್ನು ಬಳಸಿಯೇ ಆಡಬೇಕು. ಇದಕ್ಕಾಗಿ ಸಿಂಥೆಟಿಕ್ ರಬ್ಬರ್ ಮಿಶ್ರಿತ ಪ್ಲಾಸ್ಟಿಕ್ನ ಚೆಂಡು ಬಳಕೆ ಮಾಡಲಾಗುತ್ತದೆ. ಮಲೇಶ್ಯ ಹಾಗೂ ಥಾçಲಂಡ್ನಲ್ಲಿ ಈ ಕ್ರೀಡೆ ಹೆಚ್ಚು ಜನಪ್ರಿಯ. “ಸೆಪಕ್’ ಎಂದು ಮಲೇಶ್ಯದಲ್ಲಿ ಕರೆಯುತ್ತಾರೆ. ಥಾçಲಂಡ್ನಲ್ಲಿ ಇದೇ ಕೂಟವನ್ನು “ಟಕ್ರಾ’ ಎಂದು ಕರೆಯುತ್ತಾರೆ. ಹೀಗಾಗಿ ಎರಡು ದೇಶಗಳು ಕರೆಯುವ ಹೆಸರಿನಿಂದ ಸೆಪಕ್ ಟಕ್ರಾ ಆಗಿದೆ. ಒಲಿಂಪಿಕ್ಸ್ ಕೂಟದಲ್ಲಿ ಈ ಸ್ಪರ್ಧೆಗೆ ಇನ್ನೂ ಮಾನ್ಯತೆ ನೀಡಲಾಗಿಲ್ಲ. 2022ರ ಒಲಿಂಪಿಕ್ಸ್ನಲ್ಲಿ ಮಾನ್ಯತೆ ಸಿಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.