ಜೋಡುಪಾಲ ಫಾಲೋ-ಅಪ್‌ : ಕಣ್ಣೆದುರೇ ಸುನಾಮಿಯಂತೆ ಅಪ್ಪಳಿಸಿತು


Team Udayavani, Aug 22, 2018, 3:45 AM IST

jodupala-kutumba-21-8.jpg

ಸುಳ್ಯ: ಶುಕ್ರವಾರ ಬೆಳಗ್ಗೆ 8.30ರ ಹೊತ್ತು. ಮನೆ ಮೇಲಿನ ಗುಡ್ಡದಿಂದ ಸದ್ದು ಕೇಳಿತಷ್ಟೆ, ಸುನಾಮಿಯಂತೆ ನೀರು ಬಸಪ್ಪನ ಮನೆ ಮೇಲೆರಗಿತ್ತು. ಅಪಾಯ ಅರಿತು ಉಟ್ಟ ಬಟ್ಟೆಯಲ್ಲೇ ಓಡಿದ್ದರಿಂದ ಬದುಕಿದ್ದೇವೆ! ಜೋಡುಪಾಲ ಗುಡ್ಡದ ಮಣ್ಣಿನಲ್ಲಿ ಜೀವಂತ ಸಮಾಧಿಯಾದ ಬಸಪ್ಪ ಹಾಗೂ ಸಹೋದರ ಉಮೇಶ್‌ ಮತ್ತು ರವಿ ಮನೆಗಳು ಅಕ್ಕಪಕ್ಕದಲ್ಲೇ ಇದ್ದವು. ಗುಡ್ಡ ಸೀಳಿ ಬಂದ ನೀರು ಬಸಪ್ಪನ ಮನೆಯನ್ನು ನುಂಗಿತು. ಗುಡ್ಡದತ್ತ  ಓಡಿ ಪ್ರಾಣ ಉಳಿಸಿಕೊಂಡೆವು ಎಂದರು ಉಮೇಶ್‌ ಅವರ ಪತ್ನಿ ಭೋಜಮ್ಮ.

ಒಂದೇ ಮನೆಯಲ್ಲಿ ರಾತ್ರಿ ವಾಸ!
ರವಿ ಒಂದೂವರೆ ತಿಂಗಳ ಹಿಂದೆ ತೀರಿಕೊಂಡಿದ್ದು, ಅವರ ಪತ್ನಿ ಹಾಗೂ ಮಗಳು ಮಾತ್ರ ಇರುವುದರಿಂದ ಉಳಿದೆರಡು ಮನೆಯವರೂ ಅಲ್ಲೇ ರಾತ್ರಿ ಕಳೆಯುತ್ತಿದ್ದರು. ಘಟನೆಯ ಹಿಂದಿನ ದಿನವೂ ಅಲ್ಲೇ ಇದ್ದರು.

ರಜೆ ಹಾಕಿದ್ದರು
ಬಸಪ್ಪ ಪ್ರತಿದಿನ ಬೆಳಗ್ಗೆ 8ಕ್ಕೆ ಸುಳ್ಯ ಆಸ್ಪತ್ರೆಗೆ ತೆರಳುತ್ತಿದ್ದರು. ಶುಕ್ರವಾರ ಮಳೆ ಕಾರಣ ರಜೆ ಹಾಕಿದ್ದರು. ಮಂಜುಳಾಗೂ ಶಾಲೆಗೆ ರಜೆ. ವಿಧಿ ಅವರ ಮೇಲೆ ಎರಗಿತು ಎಂದು ಮೌನವಾದರು ಸುಳ್ಯ ಕೆವಿಜಿ ಸಂಸ್ಥೆಯ ಉದ್ಯೋಗಿ. ಉಮೇಶ್‌. ಅಂದು ಅವರು ಸುಳ್ಯದಲ್ಲಿದ್ದರು. ಸಂಪಾಜೆ – ಮಡಿಕೇರಿ ರಸ್ತೆಯಿಂದ ಅರ್ಧ ಕಿ.ಮೀ. ದೂರದಲ್ಲಿ 25ಕ್ಕೂ ಅಧಿಕ ಮನೆಗಳಿವೆ. ವಸಂತ ಅವರ ಮನೆಯವರನ್ನು ಗುಡ್ಡ ಜರಿಯುವ ಮುನ್ನಾದಿನ ಸ್ಥಳಾಂತರಿಸಲಾಗಿತ್ತು ಎನ್ನುತ್ತಾರೆ ರವಿ ಅವರ ಪುತ್ರಿ ರೇವತಿ.

ಸುಳ್ಯದಲ್ಲಿ ಆಶ್ರಯ
ಗುಡ್ಡ ಅಲೆದು ಮದೆನಾಡಿನ ಸಂತ್ರಸ್ತರ ಕೇಂದ್ರ ತಲುಪಿದ ರೇವತಿ, ತಾಯಿ ಪೂವಿ, ಮಾವ ರಾಜೇಶ್‌, ಭೋಜಮ್ಮ, ಮೋಹಿತ್‌ ಹಾಗೂ ಮಕ್ಕಳಾದ ವಿವೇಕ್‌, ಕುಮಾರೇಶ್‌ ಸುಳ್ಯದ ಉಮೇಶರ ವಸತಿಗೃಹದ ಕೊಠಡಿಯಲ್ಲಿದ್ದಾರೆ. 

ಮನೆಯೊಳಗೆ ಇದ್ದೆವು ಶುಕ್ರವಾರ ಬೆಳಗ್ಗೆ 
6 ಗಂಟೆಗೆ ಎದ್ದು ನಮ್ಮ ನಮ್ಮ ಮನೆಗೆ ಬಂದಿದ್ದೆವು. ಎಲ್ಲರೂ ಮನೆಯೊಳಗೆ ಇದ್ದ ಸಂದರ್ಭ 8.30ರ ಹೊತ್ತಿಗೆ ದುರ್ಘ‌ಟನೆ ನಡೆಯಿತು ಅನ್ನುತ್ತಾರೆ ಭೋಜಮ್ಮ ಅವರ ಪುತ್ರ ವಿವೇಕ್‌.

ಮೇಮಲೆ ಬೆಟ್ಟದ ನೀರು!
ಸುನಾಮಿಯಂತೆ ಎರಗಿದ ನೀರು ಎಲ್ಲಿಂದ ಬಂತು ಅನ್ನುವುದೇ ಎಲ್ಲರ ಪ್ರಶ್ನೆ. ಈ ಕುಟುಂಬದವರು ಹೇಳುವ ಪ್ರಕಾರ, ಮನೆಯಿಂದ ಮೇಲ್ಭಾಗದಲ್ಲಿನ ಮೇಮಲೆ ಬೆಟ್ಟ ಭಾಗದಲ್ಲಿ ನೀರು ತುಂಬಿದ ಪ್ರದೇಶ ಒಡೆದು ಜೋಡುಪಾಲದತ್ತ ನುಗ್ಗಿದೆ. ಇದನ್ನು ಸ್ಥಳೀಯರೂ ಪುಷ್ಟೀಕರಿಸುತ್ತಾರೆ.

ಏಳು ತಾಸು ಗುಡ್ಡ ಅಲೆದೆವು!
ಮನೆ ಬಿಟ್ಟು ಒಂದೇ ಸವನೆ ಓಟ ಕಿತ್ತೆವು. ಎಲ್ಲಿದ್ದೇವೆ ಅನ್ನುವುದು ಗೊತ್ತಾಗುತ್ತಿರಲಿಲ್ಲ. ನನಗಂತೂ ಒಂದು ಹೆಜ್ಜೆ ಇಡಲು ಸಾಧ್ಯವಾಗದ ಸ್ಥಿತಿ, ಆದರೂ ಅಪರಾಹ್ನ 3.30ರ ತನಕ ನಡೆದೆವು. ಎರಡು-ಮೂರು ಕಡೆ ಪ್ರವಾಹ ಕೊಚ್ಚಿಕೊಂಡು ಹೋಗುವ ಅಪಾಯ ಎದುರಾಯಿತು. ಆ ಕಷ್ಟ ಶತ್ರುವಿಗೂ ಬೇಡ ಎನ್ನುತ್ತ ಪಟ್ಟ ಪಾಡನ್ನು ವಿವರಿಸಿದರು ರವಿಯವರ ಪತ್ನಿ, 56 ವರ್ಷ ವಯಸ್ಸಿನ ಪೂವಿ. ಪಟ್ಟ ಕಷ್ಟಕ್ಕೆ ಸಾಕ್ಷಿಯಂತೆ ಅವರ ಕಾಲಿನಲ್ಲಿ ಗಾಯ ಇದೆ.

— ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Puttur: ಅಪರಿಚಿತರಿಂದ ಬಾಲಕನಿಗೆ ಹಲ್ಲೆ

16

Belthangady: ಸಾರಿಗೆ ಬಸ್‌ ಢಿಕ್ಕಿ: ಪಾದಚಾರಿ ಗಂಭೀರ

17

Belthangady: ಕಾಶಿಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

5

Maninalkur: ಶಿಥಿಲಾವಸ್ಥೆಯಲ್ಲಿ ಹಳೆ ಶಾಲಾ ಕಟ್ಟಡ; ಕ್ರಮಕ್ಕೆ ಆಗ್ರಹ

4

Puttur: ಬೀದಿ ಬದಿ ವ್ಯಾಪಾರಿಗಳಿಗೆ ನೆರವಾದ ಪಿಎಂ ಸ್ವನಿಧಿ ಯೋಜನೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.