ಕನಿಷ್ಠ ವೇತನವಿಲ್ಲದೆ ದುಡಿವ ಗಾರ್ಮೆಂಟ್‌ ಮಹಿಳೆಯರು


Team Udayavani, Aug 22, 2018, 12:24 PM IST

kanishta.jpg

ಸಿಲಿಕಾನ್‌ ಸಿಟಿ ಸುತ್ತಮುತ್ತ ಗಾರ್ಮೆಂಟ್ಸ್‌ ಉದ್ಯಮ ಬೃಹತ್ತಾಗಿ ಬೆಳೆದಿದೆ. ಆದರೆ, ಆ ಉದ್ಯಮದಲ್ಲಿ ಕೆಲಸ ಮಾಡುವ ಸಾವಿರಾರು ಮಹಿಳೆಯರ ಜೀವನ ಅಕ್ಷರಶಃ ನರಕವಾಗಿದೆ. ಕನಿಷ್ಠ ವೇತನ, ಮೂಲಸೌಕರ್ಯ ಸೇರಿ ಯಾವುದೇ ಸವಲತ್ತು-ಸೌಲಭ್ಯ ಇಲ್ಲದೆ ಜೀವನ ನಡೆಸುವ ದುಸ್ಥಿತಿ ಅವರದು. ಉದ್ಯೋಗಕ್ಕಾಗಿ ಊರು ತೊರೆದು ನಗರದ ಗಾರ್ಮೆಂಟ್ಸ್‌ಗಳನ್ನು ಜೀವನೋಪಾಯವನ್ನು ನಂಬಿದ್ದಾರೆ. ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸ್ಥಿತಿ-ಗತಿ ಕುರಿತ “ಸರಣಿ’ ಇಂದಿನಿಂದ ನಿಮ್ಮ ಮುಂದೆ.  

ಬೆಂಗಳೂರು: ಕನಿಷ್ಠ ವೇತನ, ವೇತನ ಸಹಿತ ರಜೆ, ಹೆಚ್ಚುವರಿ ಸೌಲಭ್ಯಕ್ಕೆ ಹೆಚ್ಚು ವೇತನ ಸೇರಿದಂತೆ ಇತರೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ದುಡಿಯುವ ಸ್ಥಿತಿ ಗಾರ್ಮೆಂಟ್ಸ್‌ ಮಹಿಳೆಯರದ್ದು. ನಗರ ಹಾಗೂ ಹೊರವಲಯದಲ್ಲಿ ನೂರಾರು ಗಾರ್ಮೆಂಟ್ಸ್‌ಗಳಲ್ಲಿ ದುಡಿಯುತ್ತಿರುವ ಸಾವಿರಾರು ಮಹಿಳೆಯರಿಗೆ ಕನಿಷ್ಠ ವೇತನ ಎಂದರೇನು ಎಂದು ತಿಳಿಯದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಕೇವಲ 8 ರಿಂದ 9 ಸಾವಿರ ರೂ. ಸಂಬಳ ನೀಡಲಾಗುತ್ತಿದೆ.

ಅದರಲ್ಲೂ ಪಿಎಫ್ ಇಎಸ್‌ಐ ಎಂದು ಒಂದವರೆಯಿಂದ ಎರಡು ಸಾವಿರದಷ್ಟು ರೂ. ಕಡಿತಗೊಳಿಸಲಾಗುತ್ತದೆ. ಹೀಗಾಗಿ ಅವರಿಗೆ ತಿಂಗಳಿಗೆ 7 ರಿಂದ 8 ಸಾವಿರ ರೂ. ಸಂಬಳ ಸಿಗಲಿದೆ. ಕಾರ್ಮಿಕ ಇಲಾಖೆಗೆ ಗಾರ್ಮೆಂಟ್ಸ್‌ ಮಾಲೀಕರು ಸರಿಯಾಗಿ ಪಿಎಫ್ ಪಾವತಿಸದಿದ್ದರೆ ಅದು ಕೂಡ ದೊರೆಯುವುದಿಲ್ಲ ಎಂಬ ಆತಂಕದಲ್ಲಿ ಬದುಕುವ ಪರಿಸ್ಥಿತಿ ಗಾರ್ಮೆಂಟ್ಸ್‌ ಮಹಿಳೆಯರಿಗಿದೆ.

ಗಾರ್ಮೆಂಟ್ಸ್‌ನಲ್ಲಿ ದುಡಿಯುವವರಿಗೆ ಒಂದು ದಿನಕ್ಕೆ ಅತಿಕುಶಲ ವರ್ಗದವರಿಗೆ  240 ರೂ., ಕುಶಲ ವರ್ಗದವರಿಗೆ 232 ರೂ., ಅರೆ ಕುಶಲ ವರ್ಗದವರಿಗೆ 229 ರೂ. ಹಾಗೂ ಅಪರಿಣಿತರಿಗೆ 220 ರೂ. ವೇತನ ನೀಡಬೇಕೆಂದು ಸರ್ಕಾರ ನಿಗದಿಪಡಿಸಿದೆ. ಆದರೆ ಇವುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಗಾರ್ಮೆಂಟ್ಸ್‌ ನೌಕರರು ಮೇಲಧಿಕಾರಿಗಳು ಯಾವ ಸಂಬಳ ನಿಗದಿಪಡಿಸುತ್ತಾರೋ ಅದಕ್ಕೆ ಕಣ್ಮುಚ್ಚಿ ದುಡಿಯುತ್ತಿದ್ದಾರೆ.

ಬೆಳಗ್ಗೆ 9ಕ್ಕೆ ಫ್ಯಾಕ್ಟರಿಯೊಳಗೆ ಪ್ರವೇಶ, ತಡವಾದರೆ ಪ್ರವೇಶ ನಿರ್ಬಂಧ. ಹೀಗಾಗಿ ಕೆಲವೊಂದು ಫ್ಯಾಕ್ಟರಿಗಳು ಸಿಬ್ಬಂದಿಗಳನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ ಮಾಡಿವೆ. ವಾಹನ ಫ್ಯಾಕ್ಟರಿ ಆವರಣ ಪ್ರವೇಶಿಸುತ್ತಿದ್ದಂತೆ ಭದ್ರತಾ ಸಿಬ್ಬಂದಿ ಗೇಟ್‌ ಹಾಕಿಕೊಂಡು ಒಳಹೋಗುತ್ತಾರೆ. ಎಷ್ಟೇ ಕೂಗಿ ಕೇಳಿಕೊಂಡರೂ ಒಳಗೆ ಬಿಡುವುದಿಲ್ಲ. ತಡವಾಗಿ ಫ್ಯಾಕ್ಟರಿಗೆ ಬಂದ ಕಾರಣಕ್ಕಾಗಿ ಆ ದಿನದ ಸಂಬಳವನ್ನು ಕಡಿತವಾಗುವ ವ್ಯವಸ್ಥೆಯೂ ಇದೆ.

ಬಹುತೇಕ ಗಾರ್ಮೆಂಟ್ಸ್‌ ನೌಕರರು ಬೆಳಗ್ಗೆ 7.45ಕ್ಕೆ ಫ್ಯಾಕ್ಟರಿ ವಾಹನದಲ್ಲಿ ಹೊರಟು ಬಿಡುತ್ತಾರೆ. ಹೀಗಾಗಿ ಅವರಿಗೆ ಬೆಳಗ್ಗಿನ ಉಪಹಾರಕ್ಕೆ ಸಮಯ ಸಿಗುವುದಿಲ್ಲ. ನಂತರ ಫ್ಯಾಕ್ಟರಿಗೆ ಹೋದರೂ ಬೆಳಗ್ಗಿನ ಉಪಹಾರ ಸೇವಿಸಲು ಮೇಲಧಿಕಾರಿಗಳು ಅವಕಾಶ ನೀಡುವುದಿಲ್ಲ. ಹೀಗಾಗಿ ಬೆಳಗ್ಗೆ ಮತ್ತು ಮಧ್ಯಾಹ್ನದ ಊಟ ಒಟ್ಟಿಗೆ ಸೇವಿಸುವ ಅನಿವಾರ್ಯತೆಯಿದೆ.

ವೇತನರಹಿತ ರಜೆ: ವಾರದ ರಜೆ ಹೊರತುಪಡಿಸಿ ವರ್ಷಕ್ಕೆ 14 ವೇತನ ಸಹಿತ ರಜೆಗಳಿವೆ. ಅದೂ ಸಿಗುವುದು ಕಷ್ಟ. ಮೇಲಧಿಕಾರಿಗಳ ಬಳಿ ಕಾಡಿ, ಬೇಡಿ ಪಡೆದರೆ ಅದೃಷ್ಟ. ಕೆಲವೊಮ್ಮೆ ಈ ರಜೆ ವಿಚಾರಕ್ಕೆ ಮೇಲಧಿಕಾರಿಗಳ ಜತೆ ಜಗಳವಾಡುವುದು, ಅವರಿಂದ ಬೈಸಿಕೊಳ್ಳುವುದು ಅನಿವಾರ್ಯ ಎಂದು ಹಲವು ಗಾರ್ಮೆಂಟ್ಸ್‌ ಮಹಿಳೆಯರು ತಮ್ಮ ಅಳಲನ್ನು ಉದಯವಾಣಿಯೊಂದಿಗೆ ತೊಡಿಕೊಂಡಿದ್ದಾರೆ.

ಇಎಸ್‌ಐ ಮೂಲಕ ರಜೆ ತೆಗೆದುಕೊಳ್ಳಬೇಕೆಂದರೆ ರಾಜಾಜಿನಗರದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಂದ ಅನಾರೋಗ್ಯ ಪತ್ರವನ್ನು ವೈದ್ಯರಿಂದ ಪಡೆದು, ಗಾರ್ಮೆಂಟ್ಸ್‌ಗೆ ಸಲ್ಲಿಸಬೇಕು. ಆಗಲೂ ರಜೆ ಸಿಗುವ ಖಾತ್ರಿಯಿಲ್ಲ. ಇಎಸ್‌ಐ ಆಸ್ಪತ್ರೆಯಲ್ಲೂ 3ದಿನಕ್ಕಿಂತ ಹೆಚ್ಚು ರಜೆ ಬರೆದುಕೊಡುವುದಿಲ್ಲ. ಹೀಗಾಗಿ ಕೆಲವು ಬಾರಿ ತಿಂಗಳಿಗೆ ವೇತನ 4ರಿಂದ 5 ಸಾವಿರ ರೂ. ಸಿಕ್ಕಿದ್ದೂ ಇದೆ ಎನ್ನುತ್ತಾರೆ ಗಾರ್ಮೆಂಟ್ಸ್‌ನಲ್ಲಿ ದುಡಿಯುವ ಮಹಿಳೆಯರು.

ಓಟಿಗೆ ಇಲ್ಲ ವೇತನ: ಗಾರ್ಮೆಂಟ್ಸ್‌ ಕೆಲಸದ ಸಮಯ ಬೆಳಗ್ಗೆ 9 ರಿಂದ ಸಂಜೆ 5.30. ಆನಂತರ ನಮ್ಮ ಬಳಿ ಓಟಿ ಎಂದು ದುಡಿಸಿಕೊಳ್ಳುತ್ತಾರೆ. ಇದಕ್ಕೆ ಯಾವುದೇ ವೇತನವಿರುವುದಿಲ್ಲ. ಕಾಂಪ್‌ಆಫ್ ಎಂದು ಕೊಡುತ್ತಾರೆ. ಕೆಲವೊಮ್ಮೆ ಕೆಲವು ಬ್ಯಾಚ್‌ಗಳಿಗೆ ಆರ್ಡರ್‌ ಬಂದಿಲ್ಲ ಎಂಬ ಕಾರಣಕ್ಕೆ ಮೇಲಧಿಕಾರಿಗಳು ರಜೆ ನೀಡುತ್ತಾರೆ. ಆ ರಜಾದಿನಕ್ಕೆ ವೇತನ ಇರುವುದಿಲ್ಲ. ನಂತರ ಹೆಚ್ಚಿನ ಆರ್ಡರ್‌ ಬಂದರೆ ಫ್ಯಾಕ್ಟರಿ ಅವಧಿ ಮುಗಿದ ನಂತರ ದಿನಕ್ಕೆ ಒಂದೂವರೆ ಗಂಟೆಯಂತೆ ಆರು ದಿನಗಳ ಕಾಲ ಓಟಿ ಮಾಡಬೇಕು. ಇದಕ್ಕೆ ನಿರಾಕರಿಸಿದರೆ ಮರುದಿನದಿಂದ ಕೆಲಸವೇ ಇರುವುದಿಲ್ಲ.

ನರಕ  ದರ್ಶನ: ಟೈಲರ್‌ಗಳ ಮೇಲುಸ್ತುವಾರಿ ಚಕ್ಕರ್‌ಗಳದ್ದಾದರೆ ನಮ್ಮನ್ನು ನೋಡಿಕೊಳ್ಳಲು ಕ್ವಾಲಿಟಿ ಇನ್‌ಚಾರ್ಜ್‌ (ಕ್ಯೂಸಿ) ಹಾಗೂ ಪ್ರೊಡಕ್ಷನ್‌ ಮ್ಯಾನೆಜರ್‌ (ಪಿಎಂ)ಗಳಿರುತ್ತಾರೆ. ಅವರಂತೂ ಫ್ಯಾಕ್ಟರಿಯಲ್ಲೇ  ಜೀವನದ ನರಕ ತೋರಿಸುತ್ತಾರೆ. ಚೆಕ್ಕಿಂಗ್‌ ವರ್ಗ ದಿನಕ್ಕೆ 100ರಿಂದ 150ಬಟ್ಟೆಗಳನ್ನು ನೋಡಬೇಕು. ಯಾವ ಟೈಲರ್‌ಗಳು ಸರಿಯಾಗಿ ಬಟ್ಟೆ ಹೊಲಿದಿದ್ದಾರೆ? ಯಾರು ಹೊಲಿದ ಬಟ್ಟೆಯಲ್ಲಿ ಹೆಚ್ಚು ಆಲೆಷನ್‌ ಇದೆ? ಎಷ್ಟು ಬಟ್ಟೆಗಳು ತಯಾರಾಗಿವೆ? ಎಂದು ಗಂಟೆಗೊಮ್ಮೆ ವರದಿ ತಯಾರಿಸಬೇಕು.

ಸತತ ಒಂಭತ್ತೂವರೆ ಗಂಟೆಗಳ ನಿಂತೇ ಇರುವುದರಿಂದ ಸುಸ್ತಾಗಿ ಬಟ್ಟೆಗಳನ್ನು ಸರಿಯಾಗಿ ಗಮನಿಸದೇ ಕಳುಹಿಸಿದರೆ ಕ್ವಾಲಿಟಿ ಇನ್‌ಚಾರ್ಜ್‌ನಿಂದ ಅವಾಚ್ಯ ಶಬ್ದ ಕೇಳಲು ಸಿದ್ಧವಿರಬೇಕು. ಹೆಚ್ಚು ಬಟ್ಟೆಗಳನ್ನು ಏಕೆ ತಯಾರಿಸಿಲ್ಲ ಎಂದು ಪ್ರೊಡಕ್ಷನ್‌ ಮ್ಯಾನೇಜರ್‌ ಕೂಗಾಡಿದರೆ, ಗುಣಮಟ್ಟದ ಬಟ್ಟೆಗಳನ್ನು ರೆಡಿ ಮಾಡಿ ಎಂದು ಕ್ವಾಲಿಟಿ ಇನ್‌ಚಾರ್ಜ್‌ ರೇಗುತ್ತಾರೆ ಎನ್ನುತ್ತಾರೆ ಕಳೆದ 26 ವರ್ಷಗಳಿಂದ ಗಾರ್ಮೆಂಟ್ಸ್‌ನಲ್ಲಿ ದುಡಿಯುತ್ತಿರುವ ವೇದಾವತಿ. (ಹೆಸರು ಬದಲಾಯಿಸಲಾಗಿದೆ)

* ಶ್ರುತಿ ಮಲೆನಾಡತಿ

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Namma Metro: ಹಳದಿ ಮಾರ್ಗ ಪೂರ್ಣಗೊಂಡಿದ್ದರೂ ಬೋಗಿಗಳ ಕೊರತೆ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Kidnapping Case: ವ್ಯಕ್ತಿಯ ಅಪಹರಿಸಿ ಸುಲಿಗೆಗೈದ 8 ಮಂದಿ ಬಂಧನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Younis Zaroora: ಎಂಜಿ ರಸ್ತೇಲಿ ಇನ್‌ಸ್ಟಾಗ್ರಾಮ್‌ ಸ್ಟಾರ್‌ ಯೂನಿಸ್‌ ನೋಡಲು ಕಿಕ್ಕಿರಿದ ಜನ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

Private bus: ಖಾಸಗಿ ಬಸ್‌ಗಳಿಂದ ಬೇಕಾಬಿಟ್ಟಿ ದರ ವಸೂಲಿ

2-bng

Bengaluru: ನಗರದೆಲ್ಲೆಡೆ ಟ್ರಾಫಿಕ್ ಜಾಮ್‌, ಮೆಜೆಸ್ಟಿಕ್‌ ರಷ್‌! ‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.