ಅಭಿವೃದ್ಧಿ ನಿರೀಕ್ಷೆಯಲ್ಲಿ ಪಂಜಿಕಲ್ಲು- ಮೂಡನಡುಗೋಡು-ಕಡಂಬಳಿಕೆ ರಸ್ತೆ
Team Udayavani, Aug 22, 2018, 12:51 PM IST
ಬಂಟ್ವಾಳ: ಪಂಜಿಕಲ್ಲು ಗ್ರಾ.ಪಂ. ವ್ಯಾಪ್ತಿಯ ಮೂಡನಡುಗೋಡು ಸೇರುವ ಹನುಮಾನ್ ಕ್ರಾಸ್ ಕಡಂಬಳಿಕೆ ರಸ್ತೆ ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆ. ಮಣಿಹಳ್ಳ ಕ್ರಾಸ್‌ನಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಈ ರಸ್ತೆ ಅಗಲ ಕಿರಿದಾದ ಕಾರಣ ರಿಕ್ಷಾ ಚಾಲಕರು ಸಂಚರಿಸಲು ಹಿಂದೇಟು ಹಾಕುವಂತಾಗಿದೆ.
ಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲವಾದ್ದರಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಈ ರಸ್ತೆಯ ಮೂಲಕ ಹೆಚ್ಚಿನ ಜನರು ತಮ್ಮ ನಿತ್ಯ ಕಾರ್ಯಗಳಿಗೆ ತೆರಳುತ್ತಾರೆ. ರಸ್ತೆಯು ತೀರಾ ಹದಗೆಟ್ಟಿರುವುದರಿಂದ ವಾಹನಗಳ ಸಂಚಾರ ತೀರಾ ಕಷ್ಟಕರವಾಗಿದೆ. ವಾಹನಗಳಿಗೆ ಸೈಡ್ ಕೊಡುವಾಗ ರಸ್ತೆಯಿಂದ ಕೆಳಗಿಳಿದ ವಾಹನಗಳು ಹೂತು ಹೋಗುವ ಸಂದರ್ಭಗಳು ಎದುರಾಗುತ್ತಿವೆ.
ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿತ್ತು. ಆದರೆ ಸ್ಪಂದನೆ ದೊರಕಿಲ್ಲ. ಕೆಲವು ದಿನಗಳ ಹಿಂದೆ ಇದೇ ರಸ್ತೆಯನ್ನು ಸ್ಥಳೀಯ ರಿಕ್ಷಾ ಮಾಲಕ-ಚಾಲಕರ ಸಂಘದವರು ಶ್ರಮದಾನದ ಮೂಲಕ ದುರಸ್ಥಿ ಮಾಡಿದ್ದರು. ಸರಕಾರದ ಮಟ್ಟದಿಂದ ಇದರ ಅಭಿವೃದ್ದಿ ಕೆಲಸ ನಡೆಯಬೇಕು ಎಂಬುದು ಸಾರ್ವಜನಿಕ ಆಶಯವಾಗಿದೆ.
ಶಾಸಕರಿಂದ ಭರವಸೆ
ಪಂಜಿಕಲ್ಲು ಗ್ರಾಮ ಸಂಪರ್ಕದ ಮೂಡನಡುಗೋಡು -ಹನುಮಾನ್ ಕ್ರಾಸ್ -ಕಡಂಬಳಿಕೆ ರಸ್ತೆಗೆ ಕಳೆದ ಅವಧಿಯಲ್ಲಿ ಯಾವುದೇ ಅನುದಾನವಿಲ್ಲದೆ ಅಭಿವೃದ್ದಿ ಕೆಲಸ ಸ್ಥಗಿತವಾಗಿತ್ತು. ಕಡಂಬಳಿಕೆ ಸಂಪರ್ಕ ರಸ್ತೆಯು ಪುರಸಭೆಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಅಭಿವೃದ್ಧಿ ಮಾಡಿ ಗ್ರಾ.ಪಂ. ರಸ್ತೆಯನ್ನು ಹಾಗೇ ಬಿಡಲಾಗಿತ್ತು. ಕಳೆದ ಅವಧಿಯಲ್ಲಿ ಸಚಿವರಲ್ಲಿ ಈ ಬಗ್ಗೆ ಕೇಳಲಾಗಿತ್ತು. ಆದರೆ ಎಂಜಿನಿಯರ್‌ಗೆ ಒಪ್ಪಿಗೆ ಸಿಗದೆ ಡಾಮರು ಹಾಕಿಲ್ಲ. ಪ್ರಸ್ತುತ ಶಾಸಕರಲ್ಲಿ ಮನವಿ ಮಾಡಿದೆ. ಬೇಸಗೆಯಲ್ಲಿ ರಸ್ತೆ ದುರಸ್ತಿಯ ಬಗ್ಗೆ ತಿಳಿಸಿದ್ದಾರೆ.
-ಪೂವಪ್ಪ ಮೆಂಡನ್
ಪಂಜಿಕಲ್ಲು ಗ್ರಾ.ಪಂ. ಸ್ಥಳೀಯ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.