ಹೊರ ಜಗತ್ತಿನೊಂದಿಗೆ ಬೆಸೆಯುವ ಪ್ರಾಯೋಗಿಕ ಶಿಕ್ಷಣ


Team Udayavani, Aug 22, 2018, 1:53 PM IST

22-agust-11.jpg

ಕೇವಲ ಪುಸ್ತಕದಲ್ಲಿ ಇರುವುದನ್ನೇ ಓದಿ ಪಾಸಾಗುವುದು ಸುಲಭವಾದರೂ ಜೀವನವೆಂಬ ಅಗ್ನಿಪರೀಕ್ಷೆಯಲ್ಲಿ ಇದರಿಂದ ನಪಾಸಾಗುವುದೇ ಹೆಚ್ಚು ಎಂಬುದು ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅರಿವಿರದಿರುವ ವಿಷಯವೇನೂ ಅಲ್ಲ. ಅದಕ್ಕಾಗಿ ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ಕೊಡುವ ಶಾಲೆ-ಕಾಲೇಜುಗಳನ್ನೇ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಒಟ್ಟು ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುತ್ತಿದ್ದಾರೆ.

ಪ್ರಾಯೋಗಿಕ ಶಿಕ್ಷಣದಿಂದ ಓರ್ವ ವಿದ್ಯಾರ್ಥಿಯ ಬದುಕಿಗೆ ಒಂದು ಹೊಸ ತಿರುವು ಸಿಗುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಅದು ಪ್ರಯೋಗಾಲಯದ ಗೋಡೆಗಳಿಗೆ ಮಾತ್ರ ಸೀಮಿತವಾಗಿರಬಾರದು. ಕ್ಲಾಸ್‌ರೂಂ ಕೋಣೆಯೊಳಗಿಂದ ಹೊರಬಂದು ಪಡೆದುಕೊಳ್ಳುವ ಶಿಕ್ಷಣ ಇಡೀ ಭವಿಷ್ಯವನ್ನು ಸದೃಢವಾಗಿ ಸುವಂತಿರಬೇಕು. ಅಂತಹ ಪ್ರಾಯೋಗಿಕ ಶಿಕ್ಷಣವು ವಿದ್ಯಾರ್ಥಿಯಲ್ಲಿರುವ ಕೌಶಲವನ್ನು ಹೊರತರುವಂತಿರಬೇಕು.

ಆಸಕ್ತಿ ಗುರುತಿಸಿ
ಪ್ರಾಥ ಮಿಕ ಶಾಲಾ ಹಂತದಿಂದಲೇ ಪ್ರಾಯೋಗಿಕ ಶಿಕ್ಷಣ ನೀಡಿದರೆ ಕಾಲೇಜು ಹಂತಕ್ಕಾಗುವ ವಿದ್ಯಾರ್ಥಿಗಳಿಗೆ ಈ ಕಲಿಕೆ ಮತ್ತಷ್ಟು ಸುಲಭವಾಗುತ್ತದೆ. ಆದರೆ ಇಲ್ಲಿ ವಿದ್ಯಾರ್ಥಿಗಳ ಆಸಕ್ತಿ ಗುರುತಿಸುವಿಕೆ ಅತೀ ಅಗತ್ಯ. ಯಾವ ವಿಷಯದ ಮೇಲೆ ವಿದ್ಯಾರ್ಥಿಗೆ ಆಸಕ್ತಿ ಇದೆ ಎಂಬುದನ್ನು ಶಿಕ್ಷಕರು ಮನಗಂಡು ಆ ವಿಷಯದಲ್ಲಿ ಆತನನ್ನು ಹೆಚ್ಚು ಪಳಗಿಸುವಂತೆ ಮಾಡಿದರೆ ಮುಂದೆ ಇದು ಅವರ ಬದುಕಿಗೊಂದು ಸ್ವಾವಲಂಬನೆಯ ದಾರಿ ತೆರೆಯಬಲ್ಲದು. ಕೇವಲ ವಿಷಯಾಸಕ್ತಿ ಗುರುತಿಸಿ ಕ್ಲಾಸ್‌ರೂಂ ಶಿಕ್ಷಣ ನೀಡಿದರೆ ಪ್ರಯೋಜನವಿಲ್ಲ. ಇದರಲ್ಲೂ ಹೊಸ ಹೊಸ ಮಾದರಿಯ ಪ್ರಯೋಗಗಳನ್ನು ಮಾಡುತ್ತಾ, ಅದನ್ನು ವಿದ್ಯಾರ್ಥಿಗಳೊಂದಿಗೆ ಮಾಡಿಸುತ್ತಾ ಅವರಲ್ಲಿ ಹೊಸದೊಂದು ಕುತೂಹಲ ಹುಟ್ಟುವಂತೆ ಮಾಡಿದರೆ ಬಹುಶಃ ಎಳವೆಯಲ್ಲಿಯೇ ಸುಂದರ ಭವಿಷ್ಯಕ್ಕೊಂದು ಭದ್ರ ತಳಪಾಯ ಹಾಕಿಕೊಟ್ಟಂತಾಗುತ್ತದೆ. 

ವಿಜ್ಞಾನಾಸಕ್ತ ವಿದ್ಯಾರ್ಥಿಗಳ ಆಸಕ್ತಿಯನ್ನು ಗುರುತಿಸಿಕೊಂಡು ಅವರಿಗೆ ಶಾಲಾ ಹಂತದಲ್ಲಿಯೇ ಪ್ರಾಯೋಗಿಕ ಶಿಕ್ಷಣವನ್ನು ನೀಡುವುದರಿಂದ ಮುಂದೆ ವಿಜ್ಞಾನ ಕಲಿಕೆಯಲ್ಲಿ ಹೆಚ್ಚು ದೃಢವಾಗುತ್ತಾರೆ. ಆದರೆ ಇದು ಎಳೆಯ ಮಕ್ಕಳಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಬೇಸಿಕ್‌ ಪ್ರಾಯೋಗಿಕ ಶಿಕ್ಷಣ ಮಾತ್ರ ಇಲ್ಲಿ ಅವಶ್ಯವಾಗಿರುತ್ತದೆ. ಎಳೆ ಮಕ್ಕಳಿಗೆ ಇಷ್ಟವಾಗಿರುವ ವಿಷಯಗಳನ್ನೇ ಆರಿಸಿಕೊಂಡು ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಕನ್ನಡ ವರ್ಣಮಾಲಾಕ್ಷರ, ಇಂಗ್ಲಿಷ್‌ ಆಲ್ಫಬೆಟ್ಸ್‌ಗಳನ್ನು ಹಾಡು, ನೃತ್ಯಗಳ ಮೂಲಕ ಕಲಿಸುವುದು, ಹೋಂ ಎಜುಕೇಶನ್‌ ಪ್ರಾರಂಭಿಸಿ ಮ್ಯೂಸಿಕ್‌ ರಿಮೋಟ್‌ ಮುಖಾಂತರ ಆಂಗ್ಲ ಭಾಷಾ ಕಲಿಕೆ ಇವೆಲ್ಲವೂ ಶಿಕ್ಷಣ ಕ್ಷೇತ್ರದಲ್ಲಿ ಬಂದ ಹೊಸ ಹೊಸ ಮಾದರಿಯ ಪ್ರಯೋಗಗಳೇ ಆಗಿವೆ.

ಮ್ಯೂಸಿಕ್‌ ರಿಮೋಟ್‌ ನಲ್ಲಿ ಆಂಗ್ಲ ಕಲಿಕೆ
ಇದೊಂದು ಆಧುನಿಕ ಮಕ್ಕಳ ಆಸಕ್ತಿ ಮತ್ತು ಮನಃ ಸ್ಥಿತಿಗೆ ಪೂರಕವಾಗಿ ತಯಾರಾದ ಶಿಕ್ಷಣ ಸಾಧನವಾಗಿದೆ. ಹೋಂ ಎಜುಕೇಶನ್‌ ಎನ್ನುತ್ತಾರೆ. ಪುಸ್ತಕದ ಮೇಲೆ ಮ್ಯೂಸಿಕ್‌ ರಿಮೋಟ್‌ನ್ನು ಹಿಡಿದುಕೊಂಡರೆ, ರಿಮೋಟ್‌ನೊಳಗಿಂದ ಬರುವ ಸ್ವರವೊಂದು ಮಕ್ಕಳಿಗೆ ಇಂಗ್ಲಿಷ್‌ ಪದಗಳು, ವಾಕ್ಯರಚನೆ, ವಿವಿಧ ಜೀವಿಗಳ ಹೆಸರು ಸಹಿತ ಆಂಗ್ಲ ಮಾಧ್ಯಮದ ಸಮಗ್ರ ಪ್ರಾಥಮಿಕ ಜ್ಞಾನವನ್ನು ಮಕ್ಕಳಿಗೆ ನೀಡುತ್ತದೆ. ಆಧುನಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯೂ ಸ್ಪರ್ಧೆ ಏರ್ಪಟ್ಟಿರುವುದರಿಂದ ಇಂತಹ ಪ್ರಾಯೋಗಿಕ ಶಿಕ್ಷಣವನ್ನು ಮಕ್ಕಳಿಗೆ ನೀಡಿದರೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಪರಿಣತಿ ಹೊಂದಲು ಸಾಧ್ಯವಿದೆ. 

ಸ್ಮಾರ್ಟ್ ಕ್ಲಾಸ್‌, ಡಿಜಿಟಲ್‌ ಕ್ಲಾಸ್‌ ಗಳು ವಿದ್ಯಾರ್ಥಿಗಳಿಗೆ ಥಿಯರಿಯನ್ನು ಹೊಸ ಹೊಸ ವಿಧಾನಗಳಲ್ಲಿ ಕಲಿಸುವ ಸಾಧನವಾಗಿದೆ. ಆದರೆ ಪ್ರಾಯೋಗಿಕ ಶಿಕ್ಷಣ ಎಂಬುದು ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕರೆದುಕೊಂಡು ಹೋಗಿ ವಿಷಯದ ನೈಜ ವಿಚಾರವನ್ನು ತಿಳಿಸುವುದಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು, ವಿಷಯವನ್ನು ಉರು ಹೊಡೆದು, ಬಾಯಿಪಾಠ ಮಾಡಿ ಒಪ್ಪಿಸುವ ಕಾಲ ಈಗಿಲ್ಲ. ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಡಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಥಿಯರಿಗಿಂತಲೂ ಪ್ರಾಯೋಗಿಕ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿದೆ.

ಗದ್ದೆಯಲ್ಲಿದೆ ಶಿಕ್ಷಣ
ಕೃಷಿ ಬದುಕಿನಿಂದ ದೂರವಾಗುತ್ತಿರುವ ಈಗಿನ ಮಕ್ಕಳಿಗೆ ಕೃಷಿ ಪಾಠದ ಮೂಲಕ ಕೃಷಿ ಒಲವು ಬೆಳೆಸಲು ಸಾಧ್ಯವಿದೆ. ಇಂತಹುದೇ ಒಂದು ಚಿಂತನೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಾರ್ಯರೂಪಕ್ಕೆ ಬರುತ್ತಿದೆ. ಇವೆಲ್ಲ ವಿದ್ಯಾರ್ಥಿಗಳಿಗೆ ಪುಸ್ತಕದ ಪಾಠದ ಬದಲಾಗಿ ಪ್ರಾಯೋಗಿಕ ಶಿಕ್ಷಣವನ್ನು ನೀಡುತ್ತವೆ. ಮುಂದೆ ಇದೇ ಶಿಕ್ಷಣ ಅವರನ್ನು ಕೃಷಿ ವಿಜ್ಞಾನದಲ್ಲಿಯೋ ಉತ್ತಮ ರೈತನಾಗಿಯೋ ಕೃಷಿ ತಜ್ಞನಾಗಿಯೋ ಪರಿಣತನಾಗಿಸಬಲ್ಲದು.

ಪ್ರಾಯೋಗಿಕ ಶಿಕ್ಷಣ
ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಸ್ಮಾರ್ಟ್‌ ಶಿಕ್ಷಣವೂ ಅತೀ ಅಗತ್ಯ. ಸ್ಮಾರ್ಟ್‌ ಕ್ಲಾಸ್‌ ಶಿಕ್ಷಣವೆಂದರೆ ಮಾಮೂಲಿ ಶಿಕ್ಷಣಕ್ಕಿಂತ ವಿಭಿನ್ನವೇನೂ ಅಲ್ಲದಿದ್ದರೂ ಒಂದಷ್ಟು ಹೊಸ ವಿಧಾನಗಳನ್ನು ರೂಢಿಸಿಕೊಂಡು ಕಲಿಸುವಂಥದ್ದಾಗಿದೆ. ಪ್ರಾಯೋಗಿಕ ಕಲಿಕೆ ಜತೆಗೆ ಪ್ರಾಯೋಗಿಕ ಪರೀಕ್ಷೆಗಳನ್ನೂ ನಡೆಸಬೇಕು. ದಿನನಿತ್ಯದ ಪಾಠಗಳ ಜತೆಗೆ ಹಳ್ಳಿ ಬದುಕಿನ ಪರಿಚಯ, ಕುಲಕಸುಬು, ಪ್ರಾದೇಶಿಕ ಸಂಸ್ಕೃತಿಗಳ ಪರಿಚಯ, ಅಲ್ಲಿನ ಬದುಕಿನ ಅಧ್ಯಯನ.. ಹೀಗೆ ಸಾಮಾಜಿಕ ಜೀವನದ ನಾನಾ ಮಗ್ಗುಲುಗಳನ್ನು ಪರಿಚಯಿಸುವ ಕಾರ್ಯವಾದರೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. 

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.