ಬಾಟಲಿಗಳಿಂದ ಬೌದ್ಧ ದೇವಾಲಯ
Team Udayavani, Aug 23, 2018, 6:00 AM IST
ಬಾಟಲಿಗಳಿಂದಲೇ ನಿರ್ಮಿಸಿರುವ ಈ ಬೌದ್ಧ ದೇವಾಲಯವನ್ನು ಪರಿಸರ ಸ್ನೇಹಿಯೆಂದು ಕರೆದರೂ ತಪ್ಪಿಲ್ಲ. ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ಭಕ್ತರು ಬಾಟಲಿಗಳನ್ನು ದಾನವಾಗಿ ನೀಡಿರುವುದು ವಿಶೇಷ.
ಬೌದ್ಧ ಧರ್ಮದಲ್ಲಿ ಮದ್ಯಪಾನ ನಿಷಿದ್ಧ. ಅದೇ ಬಾಟಲಿಗಳನ್ನು ಬಳಸಿಕೊಂಡು ಭಿಕ್ಕುಗಳು ಬೌದ್ಧ ದೇವಾಲಯವನ್ನೇ ನಿರ್ಮಿಸಿಕೊಂಡಿದ್ದಾರೆ. ಥಾಯ್‌ಲೆಂಡಿನ ಈಶಾನ್ಯಕ್ಕೆ, ಬ್ಯಾಂಕಾಕಿನಿಂದ ಸುಮಾರು 400 ಮೈಲು ದೂರದ ಸಿಸಾಕೆಟ್ ಪ್ರಾಂತದಲ್ಲಿ ಕಾಂಬೋಡಿಯಾ ಗಡಿಯಲ್ಲಿ “ವ್ಯಾಟ್ ಪ ಮಹಾಚೇದಿ ಕೇವ್’ ಸಂಕೀರ್ಣದಲ್ಲಿ 20 ಕಟ್ಟಡಗಳಿವೆ. ಈ ಕಟ್ಟಡಗಳು ಮತ್ತು ಇದರಲ್ಲಿರುವ ಬೌದ್ಧ ದೇವಾಲಯವು ಬಹಳ ವಿಶಿಷ್ಟವಾದದ್ದು. ಇವುಗಳ ಗೋಡೆ, ಛಾವಣಿ ಎಲ್ಲದರಲ್ಲೂ ಬಾಟಲಿಗಳನ್ನೇ ಇಟ್ಟಿಗೆಯಾಗಿ ಬಳಸಿಕೊಳ್ಳಲಾಗಿದೆ. ಅಷ್ಟೇ ಯಾಕೆ? ನೆಲವನ್ನು ಬಾಟಲಿಗಳ ಮುಚ್ಚಳಗಳಿಂದ ಹಾಸಲಾಗಿದೆ.
ಒಳಗೇನಿದೆ?
ದೇವಾಲಯದಲ್ಲಿ ಒಂದು ಪ್ರಾರ್ಥನಾ ಮಂದಿರ, ಸ್ನಾನಗೃಹ, ಶೌಚಾಲಯ, ಚಿತಾಗಾರ, ನೀರಿನ ಗೋಪುರ ಮತ್ತು ವಸತಿ ಕೊಠಡಿಗಳಿವೆ. ಶೌಚಾಲಯಕ್ಕೆ ಹಸಿರು ಮತ್ತು ಚಿತಾಗಾರಕ್ಕೆ ಕಂದುವರ್ಣದ ಬಾಟಲಿಗಳು ಬಳಕೆಯಾಗಿವೆ. ಇದರಿಂದಾಗಿ ಬೆಳಕಿನ ಪ್ರತಿಫಲನಕ್ಕೆ ಅನುಕೂಲವಾಗಿದೆ. ಸುಮಾರು ಹದಿನೈದು ಲಕ್ಷ ಮದ್ಯದ ಬಾಟಲಿಗಳನ್ನು ಬಳಸಲಾಗಿದೆಯಂತೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬಾಟಲಿಗಳನ್ನು ಸಂಗ್ರಹಿಸಿದ್ದು ಬೌದ್ಧ ಸನ್ಯಾಸಿಗಳೇ. ಇದಕ್ಕಾಗಿ ತಗುಲಿದ ಸಮಯ ಸುಮಾರು ಮೂವತ್ತು ವರ್ಷಗಳು!
ಬಾಟಲಿಯ ಭಿತ್ತಿಚಿತ್ರಗಳು
1984ರಲ್ಲಿ ಕೆಲಸ ಪ್ರಾರಂಭಗೊಂಡ ದೇವಾಲಯ ನಿರ್ಮಾಣ ಕೆಲಸ ಎರಡು ವರ್ಷಗಳಲ್ಲಿ ಪೂರ್ಣಗೊಂಡಿತು. ನಮ್ಮಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಥವಾ ಜೀರ್ಣೋದ್ಧಾರಕ್ಕೆ ಭಕ್ತಾದಿಗಳು ತಮ್ಮ ಕೈಲಾದಷ್ಟು ಧನವನ್ನು ನೀಡುತ್ತಾರೆ. ಈ ಬೌದ್ಧ ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ಭಕ್ತರು ಬಾಟಲಿಗಳನ್ನು ದಾನವಾಗಿ ನೀಡಿರುವುದು ವಿಶೇಷ. ಲೋಕಾರ್ಪಣೆಗೊಂಡ ನಂತರ ಈ ಮಂದಿರ ಬಾಟಲಿ ಮಂದಿರ ಎಂದೇ ಪ್ರಖ್ಯಾತವಾಗಿದೆ. ಬೇರೆ ಬೇರೆ ಬಣ್ಣದ ಬಾಟಲಿಗಳನ್ನು ಜೋಡಿಸಿ ರಚಿಸಿದ ಭಿತ್ತಿಚಿತ್ರಗಳನ್ನೂ ಒಳಗೆ ನೋಡಬಹುದು.
– ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.