ಅತಿವೃಷ್ಟಿ ಸಂತ್ರಸ್ತರ ಪರಿಹಾರ ಕೇಂದ್ರ: ನೊಂದವರ ಮನದಾಳದ ಮಾತು


Team Udayavani, Aug 23, 2018, 6:00 AM IST

z-parihara-1.jpg

ಮಡಿಕೇರಿ: ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ನಾವು ನಮ್ಮ ಮನೆ, ಆಸ್ತಿ-ಪಾಸ್ತಿಯನ್ನು ಕಳೆದುಕೊಂಡಿದ್ದು, ಸರ್ಕಾರದಿಂದ ಪ್ರಾರಂಭಿಸಿರುವ ಪರಿಹಾರ ಕೇಂದ್ರದಲ್ಲಿ ನಮಗೆ ಹೊತ್ತಿಗೆ ಸರಿಯಾಗಿ ಊಟೋಪಹಾರ ಹಾಗೂ ಪರಿಹಾರ ಸಾಮಗ್ರಿಗಳು ಕೂಡ ಸಮರ್ಪಕವಾಗಿ ದೊರೆಯುತ್ತಿದ್ದು, ಆತಂಕದಲ್ಲಿದ್ದ ನಮ್ಮ ಕುಟುಂಬಕ್ಕೆ ಪರಿಹಾರ ಕೇಂದ್ರ ಭರವಸೆಯ ಹೊಂಗಿರಣ ಮೂಡಿಸಿದೆ. 

ಇದು ಅತಿವೃಷ್ಠಿಯಿಂದ ಸಂತ್ರಸ‚ರಾದವರಿಗೆ ಸರ್ಕಾರದ ವತಿಯಿಂದ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿರುವ ಮನು ಎಂಬ ಮಹಿಳೆ ಹೇಳಿಕೊಂಡ ಮನದಾಳದ ಮಾತುಗಳು.

ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಮಡಿಕೇರಿ, ಕುಶಾಲನಗರ, ಮುಳಸೋಗೆ, ಕೂಡಿಗೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸಾವಿರಾರು ಜನರು ತಮ್ಮ ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡು ಅಕ್ಷರಶಃ ನಿರಾಶ್ರಿತರಾಗಿದ್ದಾರೆ. ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಕುಶಾಲನಗರವೂ ಒಂದಾಗಿದ್ದು, ಸಂತ್ರಸ್ತರಿಗಾಗಿ ಇಲ್ಲಿನ ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ. ಇದರ ಜೊತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಂತ್ರಸ್ತರಿಗಾಗಿ ನೆರವಿನ ಮಹಾಪೂರವನ್ನೇ ಹರಿಸಿದ್ದು, ಇವುಗಳನ್ನು ಸ್ವೀಕರಿಸಿ, ವ್ಯವಸ್ಥಿತವಾಗಿ ನಿಜವಾದ ಸಂತ್ರಸ್ತರಿಗೆ ವಿತರಿಸಲು ಕೂಡ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. 

ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಪರಿಹಾರ ಸಾಮಗ್ರಿಗಳನ್ನು ಸ್ವೀಕರಿಸುವ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಸಂತ್ರಸ‚ರಾಗಿರುವ ವಿಶ್ವನಾಥ್‌ ಎಂಬುವವರು ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಇಂತಹ ಭಾರಿ ಮಳೆ ಸುರಿದಿರುವುದನ್ನು ನಾನು ಕಂಡಿಲ್ಲ. ಈ ಬಾರಿ ಪ್ರಕೃತಿಯ ಅವಕೃಪೆಗೆ ನಾವು ಒಳಗಾಗಬೇಕಾಯಿತು. ತೀವ್ರ ಅತಿವೃಷ್ಠಿಯಿಂದಾಗಿ ನಾವು ತೊಂದರೆಗೆ ಒಳಗಾಗಿದ್ದೇವೆ. ಆದರೆ ನಮ್ಮ ಕಣ್ಣೀರು ಒರೆಸಲು ಇಡೀ ರಾಜ್ಯದ ಜನ ಒಂದಾಗಿ, ನೆರವಿನ ಮಹಾಪೂರವನ್ನೇ ಹರಿಸಿರುವುದು ಸಂತಸದ ಸಂಗತಿಯಾಗಿದೆ. 

ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರೇ ಖುದ್ದು ಕೊಡಗು ಜಿಲ್ಲೆಗೆ ಜೊತೆಗೆ ಕುಶಾಲನಗರಕ್ಕೂ ಬಂದು, ನಮ್ಮ ನೋವನ್ನು ಆಲಿಸಿದ್ದಾರೆ. ಅಲ್ಲದೆ ಪರಿಹಾರ ದೊರಕಿಸುವ ಮಾತುಗಳನ್ನಾಡಿದ್ದಾರೆ. ಮನೆಗಳನ್ನು ಕಳೆದುಕೊಂಡವರಿಗೆ ಹೊಸ ಸೂರು ಒದಗಿಸುವ ಭರವಸೆ ನೀಡಿದ್ದಾರೆ. ಇದು ಹೊಸದಾಗಿ ನಮ್ಮ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದೆ ಎಂದರು.

ಸಮರ್ಪಕ ವ್ಯವಸ್ಥೆ
ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸ ಲಾಗಿರುವ ಪರಿಹಾರ ಕೇಂದ್ರದಲ್ಲಿ ಸುಮಾರು 250 ರಿಂದ 300 ಜನರು ಆಶ್ರಯವನ್ನು ಪಡೆದಿದ್ದು, ಇವರಿಗೆ ಬೆಳಗಿನ ಉಪಹಾರಕ್ಕಾಗಿ ಇಡ್ಲಿ, ಸಾಂಬಾರ್‌, ಉಪ್ಪಿಟ್ಟು ಸೇರಿದಂತೆ ವಿವಿಧ ಉಪಹಾರ ನೀಡಲಾಗುತ್ತಿದೆ. ಪರಿಹಾರ ಕೇಂದ್ರಕ್ಕೆ ಹಲವು ಸಂಘಟನೆಗಳು, ಸ್ವಯಂ ಪ್ರೇರಿತರಾಗಿ ಆಹಾರ, ತರಕಾರಿ, ಬ್ರೆಡ್‌ ಇತ್ಯಾದಿಗಳನ್ನು ಪೂರೈಸುತ್ತಿರುವುದು, ಕನ್ನಡಿಗರ ವಿಶಾಲ ಹೃದಯಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಮುಖ್ಯೋಪಾಧ್ಯಾಯರಾದ ಗಾಯತ್ರಿ ಅವರು ಹೇಳುವಂತೆ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗಾಗಿ ಮಧ್ಯಾಹ್ನದ ಊಟ, ರಾತ್ರಿಯ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಅನ್ನ ಸಾಂಬಾರ್‌, ರೈಸ್‌ ಬಾತ್‌ ಸೇರಿದಂತೆ ವಿವಿಧ ಅಡುಗೆ ಊಟ ಬಡಿಸಲಾಗುತ್ತಿದೆ. ಊಟ ಪೂರೈಕೆಗಾಗಿ ಅಗತ್ಯ ಸಿಬ್ಬಂದಿಗಳನ್ನೂ ಕೂಡ ನೇಮಿಸಲಾಗಿದೆ. ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಆಶ್ರಯ ಪಡೆಯಲು, ರಾತ್ರಿ ತಂಗಲು ಕೂಡ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಕುಡಿಯಲು ಶುದ್ಧ ನೀರಿನ ಬಾಟಲ್‌ ಪೂರೈಕೆ ವ್ಯವಸ್ಥೆಯೂ ಇದೆ. ಪರಿಹಾರ ಕೇಂದ್ರದಲ್ಲಿ ಅರ್ಹ ಸಂತ್ರಸ್ಥರಿಗೆ ಪರಿಹಾರ ಸಾಮಗ್ರಿಗಳಾದ ಹೊಸ ಉಡುಪುಗಳು, ತಟ್ಟೆ, ಬಿಸ್ಕೆಟ್‌, ಮಕ್ಕಳ ಉಡುಪುಗಳನ್ನು ವಿತರಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ಬಹಳಷ್ಟು ಸಂತ್ರಸ್ತರು ಊಟ, ಉಪಹಾರದ ಸಮಯಕ್ಕೆ ಪರಿಹಾರ ಕೇಂದ್ರಕ್ಕೆ ಬಂದು ಊಟ ಉಪಹಾರ ಸೇವಿಸಿ, ಪುನಃ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿರುವುದೂ ಕಂಡುಬಂದಿದೆ. 

ಇಂತಹವರಿಗೂ ಕೂಡ ಊಟ ಉಪಹಾರ ಸೇವನೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಪರಿಹಾರ ಕೇಂದ್ರದ ಆವರಣದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಕೂಡ ಮಾಡಲಾಗಿದೆ ಎಂದರು.

ಪ್ರಥಮ ಚಿಕಿತ್ಸಾ ಕೇಂದ್ರ
ಸಂತ್ರಸ್ತರಾದವರ ಆರೋಗ್ಯ ಕಾಪಾಡಲು, ಪರಿಹಾರ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನೂ ಕೂಡ ಪ್ರಾರಂಭಿಸಲಾಗಿದೆ. ಪ್ರಥಮ ಚಿಕಿತ್ಸಾ ಕೇಂದ್ರದಲ್ಲಿ ಒಬ್ಬರು ವೈದ್ಯರು, 02 ರಿಂದ 03 ನರ್ಸ್‌ಗಳನ್ನು ನೇಮಿಸಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಜೀವರಕ್ಷಕ ಔಷಧಿಗಳು, ರಕ್ತದೊತ್ತಡ, ಮಧುಮೇಹ ಪರೀûಾ ಉಪಕರಣಗಳನ್ನೂ ಕೂಡ ಒದಗಿಸಲಾಗಿದೆ. ಇವರಿಗೆ ಆಶಾ ಕಾಯಾಕರ್ತೆಯರೂ ಕೂಡ ನೆರವಾಗುತ್ತಿದ್ದಾರೆ.

ಸಚಿವರು, ಅಧಿಕಾರಿಗಳು ಮೊಕ್ಕಾಂ 
ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಪರಿಣಾಮವಾಗಿ ಸಂತ್ರಸ‚ರಾದವರಿಗೆ ಸೂಕ್ತ ಪರಿಹಾರೋಪಾಯ ಕಲ್ಪಿಸುವ ಸಲುವಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ.ಮಹೇಶ್‌ ಅವರು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಖುದ್ದು ನಿಗಾ ವಹಿಸಿದ್ದಾರೆ. ಇವರ ಜೊತೆಗೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರಾದ ಆರ್‌.ವಿ.ದೇಶಪಾಂಡೆ ಅವರು ಕೂಡ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಾಥ್‌ ನೀಡಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಸರ್ಕಾರದ ಹಿರಿಯ ಅಧಿಕಾರಿಗಳು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಅಧೀನ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. 

ಒಟ್ಟಾರೆ ಕೊಡುಗು ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರಿ ಮಳೆಯಿಂದ ಸಂತ್ರಸ್ತರಾದವರ ಹಿತಕಾಯಲು ಸರ್ಕಾರ ಹಲವಾರು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ, ಎದುರಾಗಿರುವ ಸಂಕಷ್ಟ ಪರಿಹರಿಸಲು ಮುಂದಾಗಿದೆ.

ಪರಿಹಾರ ಕೇಂದ್ರಮೂಲಕ ವ್ಯವಸ್ಥೆ
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಹಲವು ಗ್ರಾಮಗಳಲ್ಲಿ ಗುಡ್ಡ ಕುಸಿತ ಉಂಟಾಗಿ ಮನೆಗಳು ನಾಶವಾಗಿವೆ. ಸಾವಿರಾರು ಜನ ತಾವು ವಾಸಿಸುತ್ತಿದ್ದ ಮನೆಗಳನ್ನು ಕಳೆದುಕೊಂಡು, ವಾಸಕ್ಕೆ ಇದ್ದ ಸೂರು ಇಲ್ಲದಂತಾಗಿದೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು, ಸುರಕ್ಷಿತ ಪ್ರದೇಶಗಳಿಗೆ ತೆರಳುವುದು ಕೂಡ ಸವಾಲಿನ ಸಂಗತಿಯಾಗಿತ್ತು. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸರ್ಕಾರ, ಸಂತ್ರಸ್ತ ಜನರ ಜೀವನ ಉಳಿಸಲು ಸೇನೆಯ ನೆರವು ಪಡೆದಿದ್ದು, ಅಲ್ಲದೆ, ಸಂತ್ರಸ್ತರಿಗಾಗಿ ಆಸರೆ ವ್ಯವಸ್ಥೆ ಮತ್ತು ಊಟೋಪಹಾರದ ವ್ಯವಸ್ಥೆಗಾಗಿ ಕೊಡಗು ಜಿಲ್ಲೆಯಲ್ಲಿ 41 ಪರಿಹಾರ ಕೇಂದ್ರಗಳನ್ನು ತೆರೆದು, ಸಮರ್ಪಕ ವ್ಯವಸ್ಥೆ ಕೈಗೊಂಡಿದೆ. ರಕ್ಷಣಾ ಸಿಬಂದಿ ಜೀವದ ಹಂಗನ್ನು ತೊರೆದು ಜನರ ಜೀವ ಕಾಪಾಡುವಲ್ಲಿ ತೋರಿರುವ ನಿಷ್ಠೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಬಿಬಿಎಂಪಿಯಿಂದ ಸ್ವಚ್ಛತೆಗಾಗಿ ಸಿಬಂದಿ    
ಭಾರಿ ಮಳೆಯಿಂದ ಜಿಲ್ಲೆ ಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ನೈರ್ಮಲ್ಯದ ಕೊರತೆ ಕಂಡುಬಂದಿದ್ದರಿಂದ, ಇಲ್ಲಿನ ನಗರ, ಪಟ್ಟಣ ಪ್ರದೇಶಗಳಲ್ಲಿ ನೈರ್ಮಲ್ಯ ವ್ಯವಸ್ಥೆ ತಹಬದಿಗೆ ತರುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆ ವತಿಯಿಂದ ಸುಮಾರು 300 ಜನ ಪೌರ ಕಾರ್ಮಿಕರನ್ನು ನೇಮಿಸಿದೆ. ಪೌರ ಕಾರ್ಮಿಕರನ್ನು ಹೊತ್ತ ಬಸ್‌ಗಳು ಕುಶಾಲ ನಗರ ಮತ್ತು ಮಡಿಕೇರಿಯತ್ತ ಧಾವಿಸಿದವು.ಕಾರ್ಮಿಕರು ಸ್ವತ್ಛತಾ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂತು.

ಟಾಪ್ ನ್ಯೂಸ್

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ

Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ

ಫೆ.28ರಿಂದ 3 ದಿನ ಹಂಪಿ ಉತ್ಸವ: ಸಚಿವ ಜಮೀರ್‌ ಅಹ್ಮದ್‌

ಫೆ.28ರಿಂದ 3 ದಿನ ಹಂಪಿ ಉತ್ಸವ: ಸಚಿವ ಜಮೀರ್‌ ಅಹ್ಮದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-

Madikeri: ದೇಗುಲದಲ್ಲಿ ಸಮಾನತೆಯೇ ಉದ್ದೇಶ ; ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ವಿವಾದ

Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್‌ ಆಸ್ಪತ್ರೆ

Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್‌ ಆಸ್ಪತ್ರೆ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Untitled-1

Kasaragod ಅಪರಾಧ ಸುದ್ದಿಗಳು: ಅಂಗಡಿಗೆ ಲಾರಿ ಢಿಕ್ಕಿ

Kodagu: ಕಾಫಿ ತೋಟಕ್ಕೆ ಅಕ್ರಮ ಪ್ರವೇಶ; ವ್ಯಕ್ತಿ ಮೇಲೆ ಹಲ್ಲೆ

Kodagu: ಕಾಫಿ ತೋಟಕ್ಕೆ ಅಕ್ರಮ ಪ್ರವೇಶ; ವ್ಯಕ್ತಿ ಮೇಲೆ ಹಲ್ಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Brahmavar

Kumbhashi: ಅಪಘಾತದ ಗಾಯಾಳು ಆತ್ಮಹ*ತ್ಯೆ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.