ದೀಪಾಗೆ ಕಾಡಿತು ಮಂಡಿ ನೋವು
Team Udayavani, Aug 23, 2018, 6:00 AM IST
ಜಕಾರ್ತಾ: ತರಬೇತಿ ಸಂದರ್ಭದಲ್ಲಿ ಭಾರತದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರಿಗೆ ಮಂಡಿ ನೋವು ಕಾಣಿಸಿಕೊಂಡಿದ್ದು, ಇದರಿಂದ ಬುಧವಾರ ನಡೆದ ಏಶ್ಯಾಡ್ ಆರ್ಟಿಸ್ಟಿಕ್ ಟೀಮ್ ಫೈನಲ್ ಸ್ಪರ್ಧೆಯಿಂದ ಹೊರಗುಳಿದರು. ತೀವ್ರ ಗಾಯದ ಸಮಸ್ಯೆಯಿಂದಾಗಿ ದೀಪಾಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. “ಗುಂಪು ವಿಭಾಗದ ಸ್ಪರ್ಧೆಯಿಂದ ಆಕೆಗೆ ವಿಶ್ರಾಂತಿ ನೀಡಿದ್ದೇವೆ. ಆದರೆ ಆಕೆ ಬೀಮ್ ಫೈನಲ್ನಲ್ಲಿ ಖಂಡಿತವಾಗಿ ಉತ್ತಮ ಪ್ರದರ್ಶನ ನೀಡುತ್ತಾಳೆ’ ಎಂದು ದೀಪಾ ಅವರ ಕೋಚ್ ಬಿಶ್ವೇಶ್ವರ್ ನಂದಿ ತಿಳಿಸಿದ್ದಾರೆ. ಬ್ಯಾಲೆನ್ಸಿಂಗ್ ಬೀಮ್ನಲ್ಲಿ ಲ್ಯಾಂಡಿಂಗ್ ಕಠಿನವೇನಲ್ಲ. ಆಕೆಯ ಕಾಲಿಗೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲ ಎಂದು ನಂದಿ ಹೇಳಿದ್ದಾರೆ. ಈ ನೋವಿನಿಂದಾಗಿ ಸಾಕಷ್ಟು ಕುಗ್ಗಿರುವ ದೀಪಾ ಕರ್ಮಾಕರ್ ಸರಿಯಾಗಿ ಆಹಾರ ಸೇವನೆ ಮಾಡು ತ್ತಿಲ್ಲವೆಂದು ಕೋಚ್ ನಂದಿ ದೂರಿದ್ದಾರೆ.
2016ರ ರಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲದಿದ್ದರೂ ಎಲ್ಲರ ಹೆಗ್ಗಳಿಕೆ ಪಾತ್ರವಾಗಿದ್ದ ದೀಪಾ ಕರ್ಮಾಕರ್ ಏಶ್ಯಾಡ್ನಲ್ಲಿ ನೆಚ್ಚಿನ ಸ್ಪರ್ಧಿಯಾಗಿದ್ದರು. ಅವರು ವಾಲ್ಟ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಲು ವಿಫಲರಾಗಿದ್ದರೆ, ಬ್ಯಾಲೆನ್ಸ್ ಬೀಮ್ನ ಅರ್ಹತೆ ಸುತ್ತಿನಲ್ಲಿ 7ನೇ ಸ್ಥಾನ ಪಡೆದು ಫೈನಲ್ಗೇರಿದ್ದಾರೆ. ಈ ಸ್ಪರ್ಧೆ ಶುಕ್ರವಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.