ಹಾಕಿ: ಭಾರತ ಸಿಡಿಸಿತು 26 ಗೋಲು!
Team Udayavani, Aug 23, 2018, 6:00 AM IST
ಜಕಾರ್ತಾ: ಏಶ್ಯಾಡ್ ಹಾಕಿ ಕೂಟದ ಬುಧವಾರದ ಲೀಗ್ ಪಂದ್ಯದಲ್ಲಿ ಪುರುಷರ ತಂಡ ಹಾಂಕಾಂಗ್ ವಿರುದ್ಧ 26-0 ಗೋಲುಗಳ ಪ್ರಚಂಡ ಗೆಲುವು ಸಾಧಿಸಿದೆ. ಇದು ಭಾರತೀಯ ಹಾಕಿ ಇತಿಹಾಸದ ಅತ್ಯಂತ ದೊಡ್ಡ ಗೆಲುವು ಎಂಬುದು ವಿಶೇಷ.
ಇದರೊಂದಿಗೆ ಭಾರತ 86 ವರ್ಷಗಳ ಗೆಲುವಿನ ದಾಖಲೆಯನ್ನು ಮುರಿಯಿತು. 1932ರ ಒಲಿಂಪಿಕ್ಸ್‌ನಲ್ಲಿ ಯುಎಸ್‌ಎ ವಿರುದ್ಧ 24-1 ಅಂತರದ ಗೆಲುವು ಸಾಧಿಸಿದ್ದು ಭಾರತದ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಭಾರತ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಆತಿಥೇಯ ಇಂಡೋನೇಶ್ಯವನ್ನು 17-0 ಅಂತರದಿಂದ ಹಿಮ್ಮೆಟ್ಟಿಸಿತ್ತು. ಇದರೊಂದಿಗೆ ಕೇವಲ 2 ಲೀಗ್ ಪಂದ್ಯಗಳಲ್ಲಿ ಶ್ರೀಜೇಶ್ ಪಡೆ 43 ಗೋಲು ಬಾರಿಸಿ ಮೆರೆಯಿತು!
ಇದು ಭಾರತದ ಸತತ 2ನೇ ಅತೀ ದೊಡ್ಡ ಗೆಲುವು. ಹಿಂದಿನ ಪಂದ್ಯದಲ್ಲಿ ಇಂಡೋನೇಶ್ಯವನ್ನು 17 ಗೋಲುಗಳಿಂದ ಮಣಿಸಿದ್ದು ಭಾರತದ ಏಶ್ಯಾಡ್ ದಾಖಲೆ ಯಾಗಿತ್ತು. ಇದನ್ನು ಎರಡೇ ದಿನಗಳಲ್ಲಿ ಉತ್ತಮಪಡಿಸಿತು. ಭಾರತದ ಇದಕ್ಕೂ ಹಿಂದಿನ ಏಶ್ಯಾಡ್ ದಾಖಲೆ 1982ರಲ್ಲಿ ಬರೆಯಲ್ಪಟ್ಟಿತ್ತು. ಅಂದು ಬಾಂಗ್ಲಾದೇಶವನ್ನು 12-0 ಅಂತರದಿಂದ ಮಣಿಸಿತ್ತು. ಅಂತಾರಾಷ್ಟ್ರೀಯ ಹಾಕಿಯಲ್ಲಿ ಬೃಹತ್ ಗೆಲುವಿನ ದಾಖಲೆ ನ್ಯೂಜಿ ಲ್ಯಾಂಡ್ ಹೆಸರಲ್ಲಿದೆ. 1994ರಲ್ಲಿ ಅದು ಸಮೋವಾವನ್ನು 36-1 ಅಂತರದಿಂದ ಪರಾಭವಗೊಳಿಸಿತ್ತು.
ರೂಪಿಂದರ್ ಪಾಲ್ 5 ಗೋಲು
ಭಾರತದ ಪರ ರೂಪಿಂದರ್ ಪಾಲ್ ಸಿಂಗ್ ಸರ್ವಾಧಿಕ 5 ಗೋಲು ಬಾರಿಸಿದರು. ಹರ್ಮನ್‌ಪ್ರೀತ್ ಸಿಂಗ್ 4, ಆಕಾಶ್‌ದೀಪ್ ಸಿಂಗ್ 3, ಲಲಿತ್ ಉಪಾಧ್ಯಾಯ, ವರುಣ್ ಕುಮಾರ್ ಮತ್ತು ಮನ್‌ಪ್ರೀತ್ ಸಿಂಗ್ ತಲಾ 2 ಗೋಲು ಹೊಡೆದರು. ಉಳಿದ ಗೋಲು ಸಿಡಿಸಿದವರು ಸುನೀಲ್ ಎಸ್.ವಿ., ಸುರೇಂದರ್ ಕುಮಾರ್, ವಿವೇಕ್ ಸಾಗರ್ ಪ್ರಸಾದ್, ಅಮಿತ್ ರೋಹಿದಾಸ್, ಚಿಂಗ್ಲೆನ್ಸನ ಕಾಂಗುಜಮ್, ಮನ್‌ದೀಪ್ ಸಿಂಗ್, ಸಿಮ್ರನ್‌ಜಿàತ್ ಸಿಂಗ್ ಮತ್ತು ದಿಲ್‌ಪ್ರೀತ್ ಸಿಂಗ್. ವಿರಾಮದ ವೇಳೆ ಭಾರತ 14-0 ಗೋಲುಗಳಿಂದ ಮುಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.