ಟೆನಿಸ್: ಅಂಕಿತಾ, ಬೋಪಣ್ಣ-ದಿವಿಜ್ ಸೆಮಿಗೆ
Team Udayavani, Aug 23, 2018, 6:00 AM IST
ಪಾಲೆಂಬಾಂಗ್: ವನಿತೆಯರ ಟೆನಿಸ್ ಸ್ಪರ್ಧೆಯ ಸಿಂಗಲ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಅಂಕಿತಾ ರೈನಾ ಸೆಮಿಫೈನಲ್ಗೆ ಲಗ್ಗೆಯಿರಿಸಿದ್ದಾರೆ. ಬುಧವಾರ ನಡೆದ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಹಾಂಕಾಂಗ್ನ ಯುಡೀಸ್ ಚಾಂಗ್ ಅವರನ್ನು 6-4, 6-1 ಸೆಟ್ಗಳಿಂದ ಸೋಲಿಸಿದರು. ಭಾರತದ ಅಗ್ರ ಶ್ರೇಯಾಂಕಿತ ವನಿತಾ ಸಿಂಗಲ್ಸ್ ಆಟಗಾರ್ತಿ ಅಂಕಿತಾ ಮೊದಲ ಸೆಟ್ ಅನ್ನು 54 ನಿಮಿಷಗಳಲ್ಲಿ ಮುಗಿಸಿದರೆ, ಎರಡನೇ ಸೆಟ್ ಅನ್ನು ಕೇವಲ 27 ನಿಮಿಷದಲ್ಲಿ ಗೆದ್ದರು. ಅಂಕಿತಾ ಅವರ ಸೆಮಿಫೈನಲ್ನಲ್ಲಿ ಎದುರಾಳಿ ಚೀನದ ಝುಂಗ್ ಸುಯಿ.
ಕ್ವಾ. ಫೈನಲ್ ಪ್ರವೇಶಿಸಿದ ಪ್ರಜ್ಞೆಶ್
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಜ್ಞೆಶ್ ಗುಣೇಶ್ವರನ್ ಅವರು ಪ್ರೀ ಕ್ವಾರ್ಟರ್ನಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಅವರು ವಿಯೆಟ್ನಾಮ್ನ ಲೀ ಹೊವಾಂಗ್ ನಾಮ್ ವಿರುದ್ಧ 6-3, 5-7, 6-4 ಅಂತರದ ಜಯ ಸಾಧಿಸಿದರು. ಕ್ವಾರ್ಟರನಲ್ಲಿ ಪ್ರಜ್ಞೆಶ್ ಅವರು ಕೊರಿಯಾದ ವನ್ ಸೋನೊ ವಿರುದ್ದ ಸೆಣಸಲಿದ್ದಾರೆ.
ಬೋಪಣ್ಣ-ದಿವಿಜ್ ಸೆಮಿಗೆ
ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ರೋಹನ್ ಬೋಪಣ್ಣ-ದಿವಿಜ್ ಶರಣ್ ಜೋಡಿ ಸೆಮಿ ಪ್ರವೇಶಿಸಿದರೆ, ರಾಮ್ಕುಮಾರ್ ರಾಮ್ನಾಥನ್-ಸುಮಿತ್ ನಗಾಲ್ ಜೋಡಿ ಸೋಲನುಭವಿಸಿದೆ. ಬೋಪಣ್ಣ-ದಿವಿಜ್ ಚೈನಿಸ್ ತೈಪೆಯ ಚೆಂಗ್ಪೆಂಗ್ ಸೀ-ಸುಂಗ್ ಹು ಯಾಂಗ್ ಜೋಡಿಯನ್ನು 6-3, 5-7 (10-1) ಅಂತರದಿಂದ ಸೋಲಿಸಿ ಸೆಮಿ ಪ್ರವೇಶಿಸಿದರು. ಇಲ್ಲಿ ಅವರು ಜಪಾನ್ನ ಯಿಸುಗಿ ಕೆ-ಶಿಮಬುಕೂರೋಸ್ ಜೋಡಿಯನ್ನು ಎದುರಿಸಲಿದ್ದಾರೆ. ರೋಹನ್ ಬೋಪಣ್ಣ-ಅಂಕಿತಾ ರೈನಾ ಪ್ರಿ ಕ್ವಾರ್ಟರ್ಫೈನಲ್ನಲ್ಲಿ ಹಾಂಕಾಂಗ್ನ ಯುಡೀಸ್ ವಾಂಗ್ ಚುಂಗ್-ಚುನ್ ಹುನ್ ವಾಂಗ್ ಜೋಡಿಯನ್ನು 6-4, 6-4 ನೇರ ಸೆಟ್ಗಳಿಂದ ಸೋಲಿಸಿ ಮುನ್ನಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
Childhood: ಬಾಲ್ಯವೆಂಬ ನೆನೆದಷ್ಟು ಮುಗಿಯದ ಪಯಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.