ಜಾಹೀರಾತು ನೀತಿಗೆ ವಿದೇಶಿ ಮಾದರಿ
Team Udayavani, Aug 23, 2018, 10:45 AM IST
ಬೆಂಗಳೂರು: ರಾಜಧಾನಿಯಲ್ಲಿ ಒಂದು ವರ್ಷ ಜಾಹೀರಾತು ಪ್ರದರ್ಶನ ನಿಷೇಧಿಸಿರುವ ಬಿಬಿಎಂಪಿ, ಇದೀಗ ಜಾಗತಿಕ ನಗರಗಳ ಮಾದರಿಯಲ್ಲಿ ಜಾಹೀರಾತು ನೀತಿ’ ಅನುಷ್ಠಾನಗೊಳಿಸಲು ಮುಂದಾಗಿದೆ. ಈಗಾಗಲೇ ವಿಶ್ವದ ಏಳು ಪ್ರಮುಖ ಮಹಾನಗರಗಳು ಹಾಗೂ ದೇಶದ ಮೂರು ನಗರಗಳ ಜಾಹೀರಾತು ನೀತಿಗಳನ್ನು ಅಧ್ಯಯನ ನಡೆಸಿರುವ ಪಾಲಿಕೆ ಅಧಿಕಾರಿಗಳು ಕರಡು ನೀತಿ ಸಿದ್ಧಪಡಿಸಿದ್ದು, ಜಾಹೀರಾತು ಅಳವಡಿಸಬೇಕಾದ ಸ್ಥಳಗಳು, ಶುಲ್ಕ, ಅನುಮತಿ, ಪ್ರಾಧಿಕಾರ ರಚನೆ, ಏಜೆನ್ಸಿಗಳು ಅನುಸರಿಸಬೇಕದ ನಿಯಮಗಳು, ಜಾಹೀರಾತು ಫಲಕಗಳ ನಿಯಂತ್ರಣ ಸೇರಿ ಹತ್ತಾರು ವಿಷಯಗಳು ನೀತಿಯಲ್ಲಿವೆ.
ಹೈಕೋರ್ಟ್ ಪಾಲಿಕೆಯಿಂದ ಜಾರಿಗೊಳಿಸಲು ಉದ್ದೇಶಿಸಿರುವ ಜಾಹೀರಾತು ನೀತಿಯನ್ನು ಆಗಸ್ಟ್ 31ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದೆ. ಆ ಹಿನ್ನೆಲೆಯಲ್ಲಿ ಜಾಹೀರಾತು ನೀತಿಗಳನ್ನು ರಚಿಸಲಾಗುತ್ತಿದ್ದು, ಈಗಾಗಲೇ ಕರಡು ಪ್ರತಿ ಸಿದ್ಧವಾಗಿದೆ. ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವ ಮೊದಲು ಪಾಲಿಕೆಯ ಕೌನ್ಸಿಲ್ ಸಭೆಯ ಮುಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು
ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ದೆಹಲಿ ಮಾದರಿ ನೀತಿಗೆ ಕೊಕ್: ಪಾಲಿಕೆಯ ವ್ಯಾಪ್ತಿಯಲ್ಲಿ ಈ ಮೊದಲು ದೆಹಲಿ ಮಾದರಿಯ ಜಾಹೀರಾತು ನೀತಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಸಿದ್ಧಪಡಿಸಲಾಗಿದ್ದ ಕರಡು ಪ್ರತಿ ನ್ಯಾಯಾಲಯಕ್ಕೆ ಸಲ್ಲಿಸಲು ಸಹ ಸಿದ್ಧತೆ ನಡೆದಿತ್ತು. ಆದರೆ, ದೆಹಲಿ ನೀತಿಯಲ್ಲಿನ ಕೆಲವೊಂದು ನಿಯಮಗಳು ಬೆಂಗಳೂರಿಗೆ ಅನ್ವಯವಾಗುವುದಿಲ್ಲ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ದೆಹಲಿ ಮಾದರಿಯನ್ನು ಕೈಬಿಡಲಾಗಿದ್ದು, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ದರ್ಜೆಯ ಜಾಹೀರಾತು ನೀತಿ ಜಾರಿಗೊಳಿಸಲು ಪಾಲಿಕೆ ಸಜ್ಜಾಗಿದೆ.
ಜಾಹೀರಾತು ಅಕ್ರಮ ತಡೆಗೆ ಪ್ರಾಧಿಕಾರ ರಚನೆ: ಜಾಹೀರಾತು ಅಕ್ರಮಗಳ ತಡೆ ಹಾಗೂ ಏಜೆನ್ಸಿಗಳ ನಿಯಂತ್ರಣಕ್ಕಾಗಿ ಹಲವಾರು ನಗರಗಳಲ್ಲಿ ಪ್ರತ್ಯೇಕ ಪ್ರಾಧಿಕಾರವಿದ್ದು, ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಅದೇ ರೀತಿ ನಗರದಲ್ಲಿಯೂ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಪ್ರಾಧಿಕಾರ ರಚಿಸಲಾಗುತ್ತದೆ. ಪ್ರಾಧಿಕಾರದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಜಾಹೀರಾತು ಫಲಕಗಳಿಗೆ ಅನುಮತಿ ನೀಡುವ ಅಥವಾ ಅನುಮತಿ ರದ್ದುಗೊಳಿ ಸುವ ಅಧಿಕಾರ ಪ್ರಾಧಿಕಾರ ಹೊಂದಿರುತ್ತದೆ.
ಜಾಹೀರಾತು ಫಲಕಗಳ ವಿಚಾರದಲ್ಲಿ ಹೈಕೋರ್ಟ್ ಪಾಲಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನಂತರ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಸೇರಿ ಇತರೆ ಜಾಹೀರಾತು ಪ್ರದರ್ಶನ ನಿಷೇಧಿಸಿ ಕೌನ್ಸಿಲ್ ಸಭೆ ನಿರ್ಣಯ ಕೈಗೊಂಡಿತ್ತು. ಜತೆಗೆ ಪಾಲಿಕೆಯಲ್ಲಿ ಹೊಸ ಜಾಹೀರಾತು ಉಪವಿಧಿಗಳನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಿತ್ತು. ಅದರಂತೆ ಹೊಸ ಜಾಹೀರಾತು ನೀತಿ ಸಿದ್ಧಗೊಂಡಿದ್ದು, ಮುಂದಿನ ಪಾಲಿಕೆ ಸಭೆಯಲ್ಲಿ ನೀತಿಯ ಕುರಿತು ಚರ್ಚೆಯಾಗಲಿದೆ.
ಸಿಂಗಾಪುರ ನೀತಿಗೆ ಹೆಚ್ಚಿನ ಆದ್ಯತೆ ಸಿಂಗಾಪುರದಲ್ಲಿ ಜಾಹೀರಾತಿಗಾಗಿಯೇ ಅಡ್ವರ್ಟೈಸಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಸಿಂಗಾಪುರ್ (ಎಎಸ್‌ಎಎಸ್) ರಚಿಸಲಾಗಿದ್ದು, ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಿದೆ. ಅದರಂತೆ ಜಾಹೀರಾತು ಅಳವಡಿಕೆದಾರರು ಪ್ರಮುಖವಾಗಿ ಸಾಮಾಜಿಕ ಹಾಗೂ ಕುಟುಂಬ ಮೌಲ್ಯಗಳಿಗೆ ಧಕ್ಕೆಯಾಗದಂತಹ ಮತ್ತು ಮದ್ಯಪಾನ, ಧೂಮಪಾನ ಪ್ರಚೋದನಾತ್ಮಕ ಜಾಹೀರಾತು ಅಳವಡಿಸಬಾರದು. ಅದರಲ್ಲಿಯೂ ಮಕ್ಕಳು ಹಾಗೂ ಯುವ ಜನರ ಮೇಲೆ ದುಷ್ಪರಿಣಾಮ ಬೀರುವ ಹಾಗೂ ಉಚಿತ ಹಾಗೂ ರಿಯಾಯಿತಿ ಎಂಬ ಪದಗಳ ಬಳಕೆ ಮೇಲೆ ಪ್ರಾಧಿಕಾರ ವಿಶೇಷ ನಿಗಾ ವಹಿಸಿದೆ. ಜತೆಗೆ ಆದಾಯ ವೃದ್ಧಿಗೂ ನೀತಿ ಸಹಕಾರಿಯಾಗಿದ್ದು, ಸಿಂಗಾಪುರ ನೀತಿಯಿಂದ ಹೆಚ್ಚಿನ ಅಂಶಗಳನ್ನು ತೆಗೆದುಕೊಳ್ಳಲು ಪಾಲಿಕೆ ಅಧಿಕಾರಿಗಳು ಆಸಕ್ತಿ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂದ ಬೆಳಕಿನಲ್ಲಿ ಜಾಹೀರಾತು ಪ್ರದರ್ಶನ ಜಾಹೀರಾತು ಫಲಕಗಳಿಂದ ಅಪಘಾತಗಳು ಹೆಚ್ಚುತ್ತಿವೆ ಎಂಬ ಕಾರಣದಿಂದ ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅದರಂತೆ ಜನರಿಗೆ ಅನುಕೂಲವಾಗುವ ಜಾಹೀರಾತುಗಳನ್ನು ಪ್ರಕಟಿಸಲು ನಿಗದಿತ ಸ್ಥಳ ಗುರುತಿಸಲಾಗುತ್ತದೆ. ಅದರಂತೆ ಮುಖ್ಯರಸ್ತೆ, ಹೊರ ಹಾಗೂ ಒಳವರ್ತುಲ ರಸ್ತೆಗಳಲ್ಲಿ ರಾತ್ರಿ 11 ಗಂಟೆ ನಂತರ 0.5 ಕ್ಯಾಡೆಲ್ ಬಲ್ಬ್ನ ಬೆಳಕಲ್ಲಿ ಜಾಹೀರಾತು ಪ್ರದರ್ಶಿಸಬೇಕು ಅಥವಾ ಜಾಹೀರಾತು ಫಲಕಕ್ಕೆ ಅಳವಡಿಸಲಾಗಿರುವ ವಿದ್ಯುತ್ ಕಡಿತಗೊಳಿಸುವ ಕುರಿತು ನಿಯಮ ರಚಿಸಲಾಗುತ್ತಿ¨
ಭಿತ್ತಿಪತ್ರ ಅಂಟಿಸಿದವರ ವಿರುದ್ಧ ಪ್ರಕರಣ ನಗರದಲ್ಲಿ ಅನಧಿಕೃತ ಜಾಹೀರಾತು ಫಲಕ ಅಳವಡಿಕೆ ಹಾಗೂ ಭಿತ್ತಿಪತ್ರ ಅಂಟಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ, ಬುಧವಾರ ಬಿಜೆಪಿ ಮುಖಂಡ ಚಿ.ನಾ.ರಾಮು ವಿರುದ್ಧ ದೂರು ದಾಖಲಿಸಿದೆ. ದಾಸರಹಳ್ಳಿ ವಲಯದಲ್ಲಿ ಇನ್ಫ್ರಾಕಾನ್ ಎಂಬ ಸಂಸ್ಥೆಯು ಅನಧಿಕೃತವಾಗಿ ಜಾಹೀರಾತು ಫಲಕ (ಸ್ಟ್ರಕ್ಚರ್) ಅಳವಡಿಸಿದ್ದು, ಫಲಕವನ್ನು ತೆರವುಗೊಳಿಸಿರುವ ಅಧಿಕಾರಿಗಳು ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿಯ ಗೋಡೆಗಳ ಮೇಲೆ “ನನ್ನ ಜನ ಅನಾಥ” ಎಂಬ ಪುಸ್ತಕ ಬಿಡುಗಡೆ ಸಮಾರಂಭದ ಭಿತ್ತಿಪತ್ರಗಳನ್ನು ಅಂಟಿಸಿದ ಕಾರಣಕ್ಕಾಗಿ ಬಿಜೆಪಿ ಮುಖಂಡ ಚಿ.ನಾ.ರಾಮು ವಿರುದ್ಧ ದೂರು ದಾಖಲಿಸಲಾಗಿದೆ.
ಎಲ್ಲಿಂದ ಎರವಲು?
ಸಾವೊ ಪಾಲೊ (ಬ್ರೆಜಿಲ್), ಪ್ಯಾರಿಸ್ (ಫ್ರಾನ್ಸ್), ನ್ಯೂಯಾರ್ಕ್ (ಅಮೆರಿಕ), ಲಂಡನ್ (ಇಂಗ್ಲೆಂಡ್), ಸಿಂಗಾಪುರ, ಕೊಟೋ (ಜಪಾನ್), ನ್ಯೂ ಸೌತ್ ವೇಲ್ಸ್ (ಆಸ್ಟ್ರೇಲಿಯಾ) ಹಾಗೂ ದೆಹಲಿ, ಚೆನ್ನೈ ಹಾಗೂ ಮುಂಬೈ ನಗರಗಳಿಂದ ಜಾಹೀರಾತು ನಿಯಮಗಳನ್ನು ಎರವಲು ಪಡೆಯಲಾಗುತ್ತಿದೆ
ಎಲ್ಲೆಲ್ಲಿ ನಿಷೇಧ
ರಾಷ್ಟ್ರೀಯ ಉದ್ಯಾನ, ಅರಣ್ಯ ಪ್ರದೇಶ, ನೀರಿನ ಮೂಲ, ಐತಿಹಾಸಿಕ ಸ್ಥಳ, ಸ್ಮಶಾನ, ಧಾರ್ಮಿಕ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ಇಲ್ಲ. ಜೋಡಿ ರಸ್ತೆ ಮಧ್ಯಭಾಗದಲ್ಲಿ, ಫುಟ್ ಪಾತ್, ರಸ್ತೆ ಜಂಕ್ಷನ್‌ಗಳ 75 ಮೀ. ವ್ಯಾಪ್ತಿಯಲ್ಲಿ ಹೋರ್ಡಿಂಗ್ಸ್ ಅಳವಡಿಕೆ ನಿಷೇಧ, ವಸತಿ ಪ್ರದೇಶಗಳಲ್ಲಿ ಫಲಕ ಅಳವಡಿಕೆಗೆ ಅವಕಾಶ ನೀಡದಿರಲು ನೀತಿಯಲ್ಲಿ ಉಲ್ಲೇಖೀಸಲಾಗಿದೆ.
ಕಠಿಣ ಕ್ರಮಕ್ಕೆ ನಿಯಮ ಭಿತ್ತಿಪತ್ರಗಳಿಂದ ನಗರದ ಸೌಂದರ್ಯ ಹಾಳಾಗಿರುವ ಹಿನ್ನೆಲೆಯಲ್ಲಿ ಮರಗಳು, ಮೆಟ್ರೋ ಪಿಲ್ಲರ್, ವಿದ್ಯುತ್ ಕಂಬಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸುವುದನ್ನು ನಿಷೇಧಿಸಲಾಗಿದ್ದು, ನಿಯಮ ಉಲ್ಲಂ ಸುವವರ ಮೇಲೆ ಕಠಿಣ ಕ್ರಮಕೈಗೊಳ್ಳುವ ಕುರಿತು ನಿಯಮ ರೂಪಿಸಲಾಗುತ್ತಿದೆ.
ವಿಶ್ವದ ಏಳು ಪ್ರಮುಖ ನಗರಗಳು ಹಾಗೂ ದೇಶ ಮೂರು ನಗರ ಗಳಲ್ಲಿನ ಜಾಹೀರಾತು ನೀತಿ ಅಧ್ಯಯನ ಮಾಡಿ ಹೊಸ ಜಾಹೀರಾತು ನೀತಿ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಸಭೆಯಲ್ಲಿ ನೀತಿ ಮಂಡಿಸಲಾಗುವುದು.
ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.