ಫೋರ್ಟ್‌ ಕನ್ನಡ ಭವನದಲ್ಲಿ 72ನೇ ಸ್ವಾತಂತ್ರ್ಯೋತ್ಸವ ಸಮಾರಂಭ

Team Udayavani, Aug 23, 2018, 1:22 PM IST

2108mum05.jpg

ಮುಂಬಯಿ: ಕನ್ನಡ ಭವನ ಎಜುಕೇಶನ್‌ ಸೊಸೈಟಿಯ ವಠಾರದಲ್ಲಿ 72ನೇ ಸ್ವಾತಂತ್ರ್ಯೋತ್ಸವ ಸಮಾರಂಭವು ಆ. 15 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಸಂಸ್ಥೆಯ ಕಾರ್ಯಾಧ್ಯಕ್ಷ ಎ. ಬಿ. ಶೆಟ್ಟಿ ಅವರು ನೆರೆದ ಗಣ್ಯರ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಿ ತದನಂತರ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಪ್ರಾಮುಖ್ಯವಾಗಿರುವುದು ತಮ್ಮ ಮುಂದಿನ ಭವಿಷ್ಯ.  ಇದನ್ನು ತಾವು ಶಿಸ್ತು ಮತ್ತು ಉತ್ತಮ ಶಿಕ್ಷಣದಿಂದಲೇ ಗಳಿಸುವುದು ಸಾಧ್ಯವಿದೆ. ಇಂದಿನ ತೀವ್ರಗತಿಯಲ್ಲಿ ಬದಲಾಗುತ್ತಿರುವ ಜಾಗತೀಕರಣದ ನೆಲೆಯಲ್ಲಿ ಶಿಕ್ಷಣಕ್ಕೆ  ಪ್ರಾಮುಖ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರವು ಶಿಕ್ಷಣ ಪದ್ಧತ್ತಿಯನ್ನು ಕಾಲಕ್ಕೆ ಅನುಗುಣವಾಗಿ ನಿರಂತರವಾಗಿ ಪರಿಶೀಲಿಸುವ ಅಗತ್ಯವಿದೆ. ಸ್ವಾತಂತ್ರÂ ದೊರಕಿದ 72 ವರ್ಷಗಳಲ್ಲಿ ದೇಶವು ಹಂತ ಹಂತವಾಗಿ ಪ್ರಗತಿಯನ್ನು ಸಾಧಿಸುತ್ತಲೇ ಇದೆ. ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಸಾಧಿಸಬೇಕಿರುವುದು ತುಂಬಾ ಇದೆ. ಇದಕ್ಕೆ ಪ್ರತಿಯೊಬ್ಬ ನಾಗರಿಕನ ಸಹಕಾರ ಅಗತ್ಯವಿದೆ. ಸದ್ಯ ಕನ್ನಡ ಭವನ ಶಾಲೆಯಲ್ಲಿ ಪ್ರವೇಶ ಪಡೆಯುವ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸವಲತ್ತು ದೊರಕಿಸುತ್ತಿದ್ದೇವೆ. ಈಗಾಗಲೇ ಕನ್ನಡ ಭವನಕ್ಕೆ ಉದಾರ ದಾನಿಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ  ಸವಲತ್ತು ದೊರಕುತ್ತಿದ್ದು ಇಂತಹ ಮಹನೀಯರಿಗೆ  ಕೃತಜ್ಞತೆಗಳು. ಪ್ರಸ್ತುತ ವರ್ಷದಲ್ಲಿ  50 ವರ್ಷಗಳ ನಂತರ ಶಾಲಾ ಸಮವಸ್ತ್ರವನ್ನು ಬದಲಿಸಲಾಗಿದೆ.    ಹಾಗೂ ಶಾಲೆಯ ನಾಲ್ಕು ಮಹಡಿಗಳಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಒದಗಿಸಿದ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ದಯಾನಂದ ಬಿ. ಅಮೀನರಿಗೆ  ವಿಶೇಷವಾದ ಕೃತಜ್ಞತೆ ಸಲ್ಲಿಸಿದರು.

ಶಾಲಾ ಕಾಲೇಜಿನ  ಪ್ರಾಂಶುಪಾಲ ಎಲ್‌. ರಾಧಾಕೃಷ್ಣನ್‌ ಸ್ವಾಗತಿಸಿದರು.  ವಿದ್ಯಾರ್ಥಿಗಳಿಂದ ಸ್ವಾತಂತ್ರೊÂàತ್ಸವದ ನಿಮಿತ್ತ ಭಾಷಣ ಹಾಗೂ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆಯಿತು. ಶಾಲಾ ಶಿಕ್ಷಕರ ಪರವಾಗಿ ನಿರೀಕ್ಷಕಿ ಪ್ರಭಾ ಎಸ್‌. ನೈಕ್‌ ಹಾಗೂ ವಿಟuಲ ಮಣೂರೆ ಮಾತನಾಡಿದರು.  ವಿದ್ಯಾರ್ಥಿಗಳು ಎಲ್ಲ ಸಂದರ್ಭ ಗಳಲ್ಲಿ ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆಯನ್ನು ತಮ್ಮದಾಗಿಸಿಕೊಳ್ಳಬೇಕು ಎನ್ನುತ್ತಾ ದೈನಂದಿನ ಜೀವನದಲ್ಲಿ ಪಾಲಿಸಬೇಕಾದ ಹಲವಾರು ಮಾರ್ಗದರ್ಶನವನ್ನು ನೀಡಿದರು. ಕಾಲೇಜಿನ ಶಿಕ್ಷಕರ ಪರವಾಗಿ ಗುಲಾಬ್‌ರಾವ್‌ ಪಾಟೀಲ್‌ ಮಾತನಾಡಿದರು.  ದೇಶಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿದ ಕೆಲವು ವೀರ ಯೋಧರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ಹೇಳಿದರು.

ಗೌ. ಪ್ರ. ಕಾರ್ಯದರ್ಶಿ ಶೇಖರ ಎ. ಅಮೀನ್‌ ಇವರು ಮಾತ ನಾಡಿ, ವಿದ್ಯಾರ್ಥಿಗಳು ತಮ್ಮ ದೈನಂದ ವ್ಯವಹಾರಗಳಲ್ಲಿ ಪಾಲಿಸಬೇಕಾದ ಶಿಸ್ತು ಹಾಗೂ ತಮ್ಮ ಮನೆ, ಶಾಲೆ ಹಾಗೂ ಪರಿಸರದಲ್ಲಿ ಸ್ವತ್ಛತೆಯನ್ನು ಕಾಪಾಡಿಕೊಳ್ಳುವಂತೆ ಒತ್ತು ನೀಡಿದರು.  ವಿದ್ಯಾರ್ಥಿಗಳು ತಾನು ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವುದರ ಬಗ್ಗೆ ಕೀಳರಿಮೆಯನ್ನು ತಾಳದೇ, ರಾತ್ರಿ ಶಾಲೆ ಹಾಗೂ ಮಾತƒಭಾಷೆಯಲ್ಲಿ ಕಲಿತು ಉನ್ನತ ಮಟ್ಟವನ್ನು ಏರಿದ ಹಲವಾರು ವ್ಯಕ್ತಿಗಳ ನಿದರ್ಶನವನ್ನು ನೀಡಿದರು. ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಶಾಲೆಗೆ ಸೇರ್ಪಡೆಗೊಳ್ಳುವಂತೆ ಸರ್ವರೂ ಪ್ರಯತ್ನಿಸಬೇಕಾಗಿ ಕೇಳಿಕೊಂಡರು. ಅಲ್ಲದೆ ಕನ್ನಡ ವಿದ್ಯಾರ್ಥಿಗಳಿಂದಲೇ ಮುಂಬರುವ ದಿನಗಳಲ್ಲಿ ಮುಂಬಯಿಯಲ್ಲಿ ಕನ್ನಡ ಉಳಿಯಬೇಕಾಗಿದೆ, ಆದ್ದರಿಂದ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ ಎಂದು ನುಡಿದರು.

ಸೊಸೈಟಿಯ ಉಪ ಕಾರ್ಯಾಧ್ಯಕ್ಷ ಕೇಶವ ಕೆ. ಕೋಟ್ಯಾನ್‌ ಇವರು ಸಂದಭೋìಚಿತವಾಗಿ ಮಾತನಾಡಿ,  ಜೀವನದಲ್ಲಿ ಸಹಕಾರಿಯಾಗುವ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. 

ಇದೇ ಸಂದರ್ಭದಲ್ಲಿ ಪ್ರಸ್ತುತ ವರ್ಷದ ಎಸ್‌.ಎಸ್‌.ಸಿ  ಪರೀಕ್ಷೆಯಲ್ಲಿ ಕನ್ನಡ ಭವನ ಶಾಲೆಯ ಸುಮಾ ಗೌಡ ಶೇ. 94 ಅಂಕ ಪಡೆದು ಮುಂಬಯಿಯ ಎಲ್ಲಾ ಹಗಲು ಹಾಗೂ ರಾತ್ರಿ ಕನ್ನಡ ಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆದಿರುವುದನ್ನು ನೆನಪಿಸುತ್ತಾ, ವಿದ್ಯಾರ್ಥಿಯನ್ನು ಹರಸುವುದರೊಂದಿಗೆ ಶಾಲಾ ಶಿಕ್ಷಕ ವೃಂದ ಮತ್ತು ಪಾಲಕರ ಸಹಕಾರ ಹಾಗೂ ಪ್ರಯತ್ನವನ್ನು ಸ್ಮರಿಸಲಾಯಿತು. ವೇದಿಕೆಯಲ್ಲಿ  ಕೋಶಾಧಿಕಾರಿ ಪುರುಷೋತ್ತಮ ಎಂ. ಪೂಜಾರಿ ಜತೆ ಕೊಶಾಧಿಕಾರಿ ಸತೀಶ ಎನ್‌. ಬಂಗೇರ, ಸಮಿತಿಯ ಸದಸ್ಯ ಎನ್‌.  ವಿ. ಮೆಂಡನ್‌ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿ ಅಮೃತಾ ಎ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
 
ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.