‘ಬಾಂಧವ್ಯ’ದ ಮಾತ್ರೆ ಮಾರಾಟ
Team Udayavani, Aug 24, 2018, 8:05 AM IST
ಹೊಸದಿಲ್ಲಿ: ಸೆ.1ರಿಂದ ದೇಶದ ಎಲ್ಲಾ ಖಾಸಗಿ ಮೆಡಿಕಲ್‌ಗಳಲ್ಲೂ ‘ಜೀವ ಉಳಿಸುವ ಹಾರ್ಮೋನ್ ಮತ್ತು ಲವ್ ಹಾರ್ಮೋನ್’ ಎಂದೇ ಪರಿಗಣಿತವಾಗಿರುವ ಆಕ್ಸಿಟೋಸಿನ್ ಅನ್ನು ಮಾರಾಟ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ ಒಪ್ಪಿಗೆ ನೀಡಿದೆ. ಜು.1 ರಿಂದ ಜಾರಿಯಾಗುವಂತೆ ಈ ಔಷಧ ಮಾರಾಟ ನಿಷೇಧಿಸಿದ್ದ ಕೇಂದ್ರ ಸರಕಾರ, ಇದೀಗ ಆದೇಶ ಮಾರ್ಪಾಡು ಮಾಡಿದೆ. ಆದರೆ, ಈ ಔಷಧ ಕರ್ನಾಟಕ ಆ್ಯಂಟಿಬಯಾಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಷ್ಟೇ (ಕೆಎಪಿಎಲ್) ಉತ್ಪಾದನೆ ಮಾಡಬೇಕು. ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳು ಬೇಕಾದಷ್ಟು ಔಷಧಕ್ಕೆ ಬೇಡಿಕೆ ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.
ಏತಕ್ಕಾಗಿ ಇದು ಬಳಕೆ?: ಹೆರಿಗೆ ಸಂದರ್ಭದಲ್ಲಿ ಇದು ಬಳಕೆ ಆಗುತ್ತದೆ. ಗರ್ಭಿಣಿಯೊಬ್ಬರಿಗೆ ಪ್ರಸವ ದಿನ ಬಂದರೂ ಹೆರಿಗೆ ನೋವು ಕಾಣಿಸಿಕೊಳ್ಳದಿದ್ದರೆ ಇದನ್ನು ನೀಡಲಾಗುತ್ತದೆ. ಇದು ದೇಹ ಮತ್ತು ಜನನಾಂಗದ ನಡುವೆ ಸಂಪರ್ಕವೇರ್ಪಡಿಸಿ, ಹೆರಿಗೆಯಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಹೆರಿಗೆ ಅನಂತರ ತಾಯಿಯಲ್ಲಿ ಹಾಲು ಉತ್ಪತ್ತಿಯಾಗಲೂ ಈ ಹಾರ್ಮೋನ್ ಪ್ರಮುಖ ಪಾತ್ರ ವಹಿಸುತ್ತದೆ.
ದುರ್ಬಳಕೆಯಿಂದಾಗಿ ನಿಷೇಧ: ಆದರೆ, ಇದನ್ನು ಪಶುಸಂಗೋಪನೆ ಉದ್ದಿಮೆಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ರೈತರಿಗೆ ಯಾವಾಗ ಬೇಕೋ ಆ ಸಮಯದಲ್ಲಿ ಹಾಲು ಹಿಂಡಲು ಹಸುಗಳಿಗೆ ಇದನ್ನು ಹಾಕಲಾಗುತ್ತಿತ್ತು. ತರಕಾರಿಗಳ ಗಾತ್ರ ಹೆಚ್ಚಿಸಲೂ ಇದನ್ನು ರೈತರು ಬಳಸುತ್ತಿದ್ದರು. ತರಕಾರಿಗಳನ್ನು ಇನ್ನಷ್ಟು ದಪ್ಪ ಮಾಡುವ ಸಲುವಾಗಿ ಹಾಕಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.