ನಿಮಗೆ ತುಂಬ ಚಂದ ಸೂಟ್ ಆಗುತ್ತೆ
Team Udayavani, Aug 24, 2018, 9:34 AM IST
ಮಹಿಳೆಯರು ಶರ್ಟ್ ಪ್ಯಾಂಟ್ ತೊಡುವುದು ಹೊಸತೇನಲ್ಲ. ಸೂಟ್ ತೊಡುವುದೂ ಹೊಸತಲ್ಲ. ಹಿಂದೆಲ್ಲ ಸೂಟ್ ರೆಡಿಮೇಡ್ ಮಾತ್ರ ಸಿಗುತ್ತಿದ್ದವು. ಅದನ್ನು ಟೈಲರ್ ಬಳಿ ಪುರುಷರು ಆಲ್ಟರ್ ಮಾಡಿಸಿಕೊಳ್ಳುತ್ತಿದ್ದರು. ನಂತರ ಟೈಲರ್‌ಮೇಡ್ ಸೂಟ್‌ಗಳು ಸಿಗಲು ಶುರುವಾದವು. ಈಗ ಮಹಿಳೆಯರ ಮೈಕಟ್ಟಿಗೆ ಒಪ್ಪುವಂಥ ಸೂಟ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಆಫೀಸಿಗೆ ಅಡ್ಜಸ್ಟ್ ಆಗುತ್ತೆ…
ಫಾರ್ಮಲ್‌ವೇರ್ ಆದ ಕಾರಣ ಇವನ್ನು ಸಾಮಾನ್ಯವಾಗಿ ಆಫೀಸ್‌ಗಳಿಗೆ ತೆರಳುವಾಗ ತೊಡಲಾಗುತ್ತದೆ. ಮಹಿಳೆಯರ ಸೂಟ್‌ಗಳಲ್ಲಿ ಹೆಚ್ಚಾಗಿ ಟೈ ಅಥವಾ ಬೋ ಇರುವುದಿಲ್ಲ. ಫಾರ್ಮಲ್ ಶರ್ಟ್ (ಅಂಗಿ), ಪ್ಯಾಂಟ್ ಮತ್ತು ಕೋಟ್ ಇರುತ್ತವೆ. ಪ್ಯಾಂಟ್ ಬದಲಿಗೆ ಸ್ಕರ್ಟ್ ಅನ್ನೂ ತೊಡಬಹುದು. ಸೂಟ್ ಜೊತೆಗಿನ ಪ್ಯಾಂಟ್‌ಗಳಲ್ಲೂ ಅನೇಕ ಆಯ್ಕೆಗಳಿವೆ. ಬೆಲ್ ಬಾಟಮ್, ಸ್ಲಿಮ್ ಫಿಟ್, ಬೂಟ್ ಕಟ್, ಆಂಕಲ್ ಲೆನ್ (ಕಾಲಗಂಟಿನ ಅಳತೆಯ ಪ್ಯಾಂಟ್), ಪ್ಯಾರಲಲ್ ಹೀಗೆ ಬಗೆಬಗೆಯ ಆಯ್ಕೆಗಳಿವೆ. ಪ್ಯಾಂಟ್ ಜೊತೆಗಿನ ಸೂಟ್ ತೊಟ್ಟಾಗ ಗೌರವ ಹೆಚ್ಚಾಗುತ್ತೆ ಎಂದು ಅನೇಕರು ನಂಬುತ್ತಾರೆ.
ಪವರ್ ಡ್ರೆಸಿಂಗ್
ಈ ಶೈಲಿಗೆ “ಪವರ್ ಡ್ರೆಸ್ಸಿಂಗ್’ ಎಂಬ ಹೆಸರೂ ಇದೆ! ಸೂಟ್ ತೊಟ್ಟರೆ ನೌಕರರ ಮಧ್ಯೆ ತಮಗೆ ಮರ್ಯಾದೆ ಜಾಸ್ತಿ ಎಂಬುದು ಅನೇಕ ಬಾಸ್‌ಗಳ ದೃಢವಾದ ನಂಬಿಕೆ. ಹಾಗಾಗಿ ಲೇಡಿ ಬಾಸ್‌ಗಳೂ ಈಗ ಸೂಟ್‌ಗಳನ್ನು ತೊಡಲು ಮುಂದಾಗಿದ್ದಾರೆ. ರಾಜಕಾರಣಿಗಳು, ಕ್ರೀಡಾಪಟುಗಳು, ಸಿನೆಮಾ ತಾರೆಯರು ಹಾಗೂ ಉದ್ಯಮಿಗಳು, ವಿದೇಶಿ ಸಚಿವರು, ರಾಜ-ರಾಣಿಯರು ಮತ್ತು ಸೆಲೆಬ್ರಿಟಿಗಳನ್ನೂ ಸೂಟ್‌ನಲ್ಲಿ ನೋಡಿರುತ್ತೀರಿ. ಈ ಟ್ರೆಂಡ್ ಎಂದಿಗೂ ಮಾಸಿ ಹೋಗದು.
ಬ್ಲ್ಯಾಕ್ ಆ್ಯಂಡ್ ವೈಟ್ ಹಳೇದಾಯ್ತು…
ಸೂಟ್ ಎಂದಾಗ ಕಪ್ಪು, ಬಿಳುಪು, ಬೂದಿ ಬಣ್ಣದ್ದೇ ಆಗಿರಬೇಕೆಂದೇನೂ ಇಲ್ಲ. ಏಕೆಂದರೆ ಸೂಟ್ ಇದೀಗ ಮೇಕ್ ಓವರ್ ಪಡೆದಿದೆ. ಹೊಸ ರೂಪದಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಕೇವಲ ಒಂದೇ ಬಣ್ಣ ಅಥವಾ ಚೆಕÕ… ಡಿಸೈನ್ ಅಲ್ಲದೆ ಫ್ಲೋರಲ್ ಪ್ರಿಂಟ್ ಅಂದರೆ ಹೂವಿನ ಆಕೃತಿ ಉಳ್ಳ ವಿನ್ಯಾಸ ಮತ್ತು ಚಿತ್ರಗಳೂ ಮೂಡಿಬಂದಿವೆ. ಬಗೆಬಗೆಯ ಬಣ್ಣದ ಮತ್ತು ಚಿತ್ರವಿಚಿತ್ರ ವಿನ್ಯಾಸದ ಸೂಟ್‌ಗಳೂ ಲಭ್ಯ ಇವೆ. ಸೂಟ್ ಮೇಲೆ ಹೂವು, ಬಳ್ಳಿ, ತಾರೆಗಳನ್ನು ಮೂಡಿಸಿದ್ದಾರೆ ಅನೇಕ ವಸ್ತ್ರವಿನ್ಯಾಸಕರು. ಇಂಥ ಕಲರ್‌ಫುಲ್ ಸೂಟ್‌ಗಳನ್ನು ಪಾರ್ಟಿ, ಶಾಪಿಂಗ್ ಮತ್ತು ಇತರ ಕ್ಯಾಶುವಲ್ ಔಟಿಂಗ್‌ಗೆ ಹಾಕಿಕೊಳ್ಳಬಹುದು. ಉದ್ಯೋಗಸ್ಥ ಮಹಿಳೆಯರನ್ನು ಈ ಉಡುಗೆ ಹೆಚ್ಚಾಗಿ ಸೆಳೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.