ಬದಲಾವಣೆಯಿಂದ ಪಾರ್ಕಿಂಗ್ ಗೊಂದಲ ಉಲ್ಬಣ
Team Udayavani, Aug 24, 2018, 11:46 AM IST
ಪುತ್ತೂರು: ಪುತ್ತೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಮೂಲಕ ನಾಲ್ಕು ವಾರಗಳಿಂದ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿದೆ. ಆದರೆ ಬಹುತೇಕ ಆಟೋ ರಿಕ್ಷಾಗಳನ್ನೇ ಗುರಿಯಾಗಿಸಿಕೊಂಡು ಮಾಡಿದ ಬದಲಾವಣೆಗಳು ಅಸಮಾಧಾನಕ್ಕೂ ಕಾರಣವಾಗಿವೆ.
ನಗರದ ಕೇಂದ್ರ ಸ್ಥಾನದಲ್ಲಿರುವ ಗಾಂಧಿಕಟ್ಟೆಯ ಬಳಿಯಿಂದ ಕೆಎಸ್ ಆರ್‌ಟಿಸಿ ಬಸ್ಸು ನಿಲ್ದಾಣ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಪರಿವರ್ತಿಸಿ, ಸೂಪರ್ ಟವರ್ ಹಾಗೂ ಎ.ಎಂ. ಕಾಂಪ್ಲೆಕ್ಸ್‌ಗೆ ಸಂಬಂಧಪಟ್ಟ ಪಾರ್ಕಿಂಗ್ ನ್ನು ಕೆಎಸ್‌ಆರ್‌ಟಿಸಿ ನಿಲ್ದಾಣದ ಕೆಳ ಭಾಗಕ್ಕೆ ಸ್ಥಳಾಂತರಿಸಲಾಗಿತ್ತು. ಇಲ್ಲಿನ ರಸ್ತೆ ವಿಸ್ತಾರವಾಗಿರುವುದರಿಂದ ಮೇಲ್ಭಾಗದಿಂದ ಮಾತ್ರ ವಾಹನಗಳಿಗೆ ಬರಲು ಅವಕಾಶ ಕಲ್ಪಿಸಲಾಗಿತ್ತು. ಹಲವು ವರ್ಷಗಳ ಹಿಂದಿನಿಂದಲೇ ಇರುವ ಅಟೋ ರಿಕ್ಷಾ ಪಾರ್ಕಿಂಗ್ ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿತ್ತು.
ಪರಿವರ್ತಿತ ವ್ಯವಸ್ಥೆ ಆರಂಭಗೊಂಡು ನಾಲ್ಕು ವಾರಗಳು ಕಳೆಯುತ್ತಿರುವಂತೆಯೇ ಸುಪರ್ ಟವರ್ ಹಾಗೂ ಎ.ಎಂ. ಕಾಂಪ್ಲೆಕ್ಸ್‌ನಲ್ಲಿರುವ ವ್ಯಾಪಾರಸ್ಥರು ಬದಲಾದ ವ್ಯವಸ್ಥೆಯಿಂದ ತಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ತಮ್ಮ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ಗ್ರಾಹಕರಿಗೆ ಸಮಸ್ಯೆ ಆಗುತ್ತಿದೆ ಎನ್ನುವ ನೆಲೆಯಲ್ಲಿ ಪೊಲೀಸ್ ಇಲಾಖೆಯ ಮೇಲೆ ಒತ್ತಡ ತರುವ ಕ್ರಮ ಅನುಸರಿಸಿದ್ದಾರೆ. ಇದರ ನೇರ ಹೊಡೆತ ಅಟೋ ರಿಕ್ಷಾ ಚಾಲಕರ ಮೇಲೆ ಬೀಳುತ್ತಿದೆ.
ರಿಕ್ಷಾಗಳ ಮೇಲೆ ಪ್ರಹಾರ
ಪರಿವರ್ತಿತ ವ್ಯವಸ್ಥೆ ಸಾರ್ವಜನಿಕ ನೆಲೆಯಲ್ಲಿ ಪ್ರಯೋಜನಕಾರಿಯಾಗಿ ಕಾಣಿಸಿಕೊಂಡಿದೆ. ಆದರೆ ಕಟ್ಟಡಕ್ಕೆ ಸಂಬಂಧಪಟ್ಟವರ ಒತ್ತಡದಿಂದ ಪೊಲೀಸರು ರಿಕ್ಷಾ ಪಾರ್ಕಿಂಗ್ ಮೇಲೆ ಪ್ರಹಾರಕ್ಕೆ ಮುಂದಾಗಿದ್ದಾರೆ. ವಾಣಿಜ್ಯ ಕಟ್ಟಡಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದ ಸ್ಥಳೀಯಾಡಳಿತ ರಿಕ್ಷಾ ಪಾರ್ಕಿಂಗ್‌ನ್ನು ಕಡಿತಗೊಳಿಸಲು ಪರೋಕ್ಷವಾಗಿ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.