ಸಂಸ್ಕೃತಿಯ ಜೀವಾಳ ಜಾನಪದ: ಡಾ| ಗವಿಸಿದ್ದಪ್ಪ
Team Udayavani, Aug 25, 2018, 11:04 AM IST
ಹುಮನಾಬಾದ: ಜಾನಪದ ಕೇವಲ ಕಲೆಯಲ್ಲ, ಸಂಸ್ಕೃತಿಯ ಜೀವಾಳ. ಅದನ್ನು ಉಳಿಸಿ ಬೆಳೆಸುವುದು ಬಹು ಸಂಸ್ಕೃತಿ ನೆಲೆಗಟ್ಟಿನ ಭಾರತ ಭೂಮಿಯಲ್ಲಿ ಜೀವಿಸುವ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಸಾಹಿತಿ ಡಾ| ಗವಿಸಿದ್ದಪ್ಪ ಪಾಟೀಲ ಹೇಳಿದರು. ಮಾಣಿಕನಗರದಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ ಶುಕ್ರವಾರ ಆಯೋಜಿಸಿದ್ದ ವಿಶ್ವಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಇಂಗ್ಲೆಂಡಿನ ವಿಲಿಯಮ್ ಥಾಮ್ಸ್ ಎಂಬಾತ ಜಾನಪದಕ್ಕೆ 1846ರ ಆಗಸ್ಟ್ 22ರಂದು ಫೂಕ್‌ಲೋರ್ ಎಂದು ಹೆಸರಿಸಿದ. ಬದುಕಿನ ಅವಿಭಾಜ್ಯ ಅಂಗವಾಗಿರುವ ಈ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸುವಂತೆ ವಿಶ್ವವಿದ್ಯಾಲಯಗಳಿಗೆ ಸಲಹೆ ನೀಡಿದ. ಅಂದಿನಿಂದ ಪ್ರತೀ ವರ್ಷ ಆ.22ಕ್ಕೆ ವಿಶ್ವಜಾನಪದ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಇಡೀ ಭಾರತದಲ್ಲೇ ಕರ್ನಾಟಕ ಜನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಹಳ್ಳಿಗರ ಬಾಯಿಯಿಂದ ಬಾಯಿಗೆ ಹರಿದು ಬಂದ ಇದು ಕೇವಲ ಜನಪದವಲ್ಲ, ಜನಪರ ಸಿರಿನುಡಿ ಎಂದರೂ ತಪ್ಪಾಗದು ಎಂದ ಅವರು, ಅಳಿವಿನ ಅಂಚಿನಲ್ಲಿ ಇರುವ ಅದನ್ನು ಉಳಿಸುವುದಕ್ಕಾಗಿ ವಿವಿಧ ಜಾನಪದ ಕಲೆ, ಕಲಾವಿದರನ್ನು ದಾಖಲಿಸುವ ಕೆಲಸವಾಗಬೇಕು ಎಂದರು.
ತಾಳಮಡಗಿ ಕನಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವರಾಜ ಚೀನಕೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾವಿದರಿಗೆ ಸಾಹಿತಿಗಳು ಧೈರ್ಯ ಹೇಳಬಹುದು. ಆದರೆ ಆರ್ಥಿಕವಾಗಿ ಸಹಕಾರ ನೀಡುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಜಾನಪದ ಕಲೆಯ ಜೊತೆಗೆ ಕಲಾವಿದರಿಗೆ ಆರ್ಥಿಕ ನೆರವು ನೀಡಿ, ಪೋಷಿಸುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಮತ್ತು ಸಚಿವರಾದ ರಾಜಶೇಖರ ಪಾಟೀಲ ಮತ್ತು ಬಂಡೆಪ್ಪ ಕಾಶೆಂಪೂರ ಅವರಿಗೆ ಒತ್ತಾಯಿಸುವುದಾಗಿ ಹೇಳಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಶರದ್‌ಕುಮಾರ ನಾರಾಯಣಪೇಟಕರ್ ಮಾತನಾಡಿ, ಒಂದು
ದಶಕದಿಂದ ತಾಲೂಕಿನಲ್ಲಿರುವ ಸಾಕಷ್ಟು ಜನ ಜಾನಪದ ಕಲಾವಿದರನ್ನು ಗುರುತಿಸಿ, ಸರ್ಕಾರದಿಂದ ನೆರವು ಕೊಡಿಸಲು ಶಕ್ತಿಮೀರಿ ಯತ್ನಿಸಲಾಗಿದೆ. ಭವಿಷ್ಯದಲ್ಲೂ ಅದರಿಂದ ಯಾವತ್ತೂ ಹಿಂಜರಿಯುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶೀಲಾಬಾಯಿ, ಮನ್ನಾಎಖೆಳ್ಳಿ ವಲಯ ಕಜಾಪ ಅಧ್ಯಕ್ಷ
ವಿನೋದಕುಮಾರ ರೊಡ್ಡಾ, ರಾಷ್ಟ್ರೀಯ ಜಾನಪದ ಶಿಷ್ಯವೇತನ ಪುರಸ್ಕೃತ ಅಂಬಾದಾಸ ಪೋಳ್ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ 10ಕ್ಕೂ ಅಧಿಕ ತಂಡಗಳ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಈಶ್ವರ ತಡೋಳಾ, ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದ ಕಾರ್ಯದರ್ಶಿ ಜಿ.ಟಿ. ದೊಡ್ಮನಿ ಮೊದಲಾದವರು ಇದ್ದರು. ರಮೇಶ ಕಲ್ಯಾಣ ಸ್ವಾಗತಿಸಿದರು. ಮಹಾವೀರ ಜಮಖಂಡಿ ಪಾಸ್ತಾವಿಕ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.