ಹೂಡಿಕೆ ಆಕರ್ಷಣೆಗೆ ರಸ್ತೆ ದುಸ್ಥಿತಿಯೇ ಅಡ್ಡಿ 


Team Udayavani, Aug 25, 2018, 3:14 PM IST

25-agust-18.jpg

ಹುಬ್ಬಳ್ಳಿ: ಒಂದಿದ್ದ ವಿಮಾನ ಎರಡು, ನಾಲ್ಕಾಯಿತು. ಇದೀಗ ಸುಮಾರು 16 ವಿಮಾನಗಳು ಬಂದು ಹೋಗುತ್ತಿವೆ. ವಿವಿಧ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತಿವೆ. ಸ್ಟಾರ್‌ ಮಾದರಿ ಹೋಟೆಲ್‌ ನಾಲ್ಕೈದು ಆಗಿವೆ. ಇಷ್ಟಾದರೂ ಅವಳಿನಗರ ಉದ್ಯಮ, ಹೂಡಿಕೆದಾರರ ಆಕರ್ಷಿಸುವಲ್ಲಿ ನಿರೀಕ್ಷಿತ ಯಶ ಕಾಣದಿರುವುದಕ್ಕೆ ಇಲ್ಲಿನ ರಸ್ತೆ ದುಸ್ಥಿತಿಯೇ ಕಾರಣವೇ? ಉದ್ಯಮದ ಮೂಲಗಳು ಹಾಗೂ ವಿದೇಶಿ ಹೂಡಿಕೆದಾರರ ಪ್ರಕಾರ ಹೌದು ಎನ್ನುವ ಬೇಸರದ ಉತ್ತರ ಬರುತ್ತಿದೆ. ಇಲ್ಲಿನ ರಸ್ತೆಗಳು, ಕೊಳಗೇರಿಗಳಿಗೆ ಸವಾಲು ರೂಪದಲ್ಲಿರುವ ಕೈಗಾರಿಕಾ ವಲಯಗಳನ್ನು ನೋಡಿ ಯಾವ ಮುಖ ಹೊತ್ತು ಹೂಡಿಕೆದಾರರು, ಉದ್ಯಮಗಳನ್ನು ಇಲ್ಲಿಗೆ ಕರೆತರಬೇಕು ಎಂಬ ಪ್ರಶ್ನೆ ಮೂಡಿ ಬರತೊಡಗಿದೆ.

ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರ, ವಾಣಿಜ್ಯ ನಗರಿ, ಶೈಕ್ಷಣಿಕ-ಸಾಂಸ್ಕೃತಿಕ ತವರು ಎಂದೆಲ್ಲ ಬಣ್ಣಿಸಿಕೊಳ್ಳುವ ಹುಬ್ಬಳ್ಳಿ-ಧಾರವಾಡದಲ್ಲಿ ಇಂದಿಗೂ ಹೇಳಿಕೊಳ್ಳುವಂತಹ ದೊಡ್ಡ ಉದ್ಯಮಗಳು ಬೆರಳೆಣಿಕೆಯಷ್ಟು ಸಹ ಇಲ್ಲ. ಉದ್ಯಮ ಸ್ಥಾಪನೆ ಹಾಗೂ ಬಂಡವಾಳ ಹೂಡಿಕೆಗೆ ಬರುವವರು ಮೊದಲು ನೋಡುವುದೇ ಇಲ್ಲಿನ ಮೂಲಸೌಕರ್ಯ ಹಾಗೂ ಈಗಾಗಲೇ ಇರುವ ಕೈಗಾರಿಕಾ ವಲಯದ ಸ್ಥಿತಿ ಏನಾಗಿದೆ ಎಂಬುದಾಗಿದೆ.

ರಸ್ತೆ ದುಸ್ಥಿತಿಯ ಮೆಗಾ ಧಾರವಾಹಿ: ಅವಳಿ ನಗರದ ರಸ್ತೆಗಳ ದುಸ್ಥಿತಿ ನೋಡಿದರೆ ಟಿವಿಗಳ ಮೆಗಾ ಧಾರವಾಹಿಗಳನ್ನೇ ಮೀರಿಸುವ ನಿಟ್ಟಿನಲ್ಲಿನಲ್ಲಿದೆ. ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ-ಪ್ರತ್ಯಾರೋಪ ಮಾಡುತ್ತ ಬರಲಾಗುತ್ತಿದೆಯಾದರೂ, ರಸ್ತೆಗಳ ದುರಸ್ತಿಗೆ ಕನಿಷ್ಠ ಇಚ್ಛಾಶಕ್ತಿ ತೋರುತ್ತಿಲ್ಲ ಎಂಬುದಕ್ಕೆ ಇಲ್ಲಿನ ರಸ್ತೆಗಳೇ ಸಾಕ್ಷಿಯಾಗಿವೆ.

ಯಾವುದೇ ಬಡಾವಣೆಗೆ ಹೋದರೂ ಹೊಂಡವಿಲ್ಲದ ರಸ್ತೆಗಳು ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ರಸ್ತೆಗಳಲ್ಲಿ ಹೊಂಡಗಳು ಎನ್ನುವುದಕ್ಕಿಂತ ಹೊಂಡಗಳಲ್ಲಿ ರಸ್ತೆಗಳು ಇದೆ ಎಂಬುವಷ್ಟರ ಮಟ್ಟಿಗೆ ಇಲ್ಲಿನ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಹದಗೆಡಲು ಒಳಚರಂಡಿ, ಬಿಆರ್‌ಟಿಎಸ್‌, ದಾಭೋಲ್‌-ಬೆಂಗಳೂರು ಅಡುಗೆ ಅನಿಲ ಮಾರ್ಗ, ವಿವಿಧ ಕೇಬಲ್‌ಗ‌ಳ ಅಳವಡಿಕೆ, ನೀರಿನ ಸಂಪರ್ಕ, ಭೂಗತ ವಿದ್ಯುತ್‌ ಸಂಪರ್ಕ ಹೀಗೆ ವಿವಿಧ ಯೋಜನೆಗಳು ತಮ್ಮದೇ ಕೊಡುಗೆ ನೀಡಿವೆ.

ಅಭಿವೃದ್ಧಿ ಹಾಗೂ ಭವಿಷ್ಯದ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಕೈಗೊಂಡಿದ್ದರೂ, ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿಡುವ ಕಾರ್ಯ ಮಾಡುವಲ್ಲಿ ಸ್ಥಳೀಯ ಆಡಳಿತ ಹಾಗೂ ಸರಕಾರಗಳು ವಿಫ‌ಲವಾಗಿವೆ ಎಂಬ ಮಾತು ಹಲವು ವರ್ಷಗಳದ್ದಾಗಿದೆ. ಮಳೆ ಬಂದರೆ ರಾಡಿ, ರಸ್ತೆ ಒಣಗಿದರೆ ಧೂಳು ಎಂಬ ಸ್ಥಿತಿ ಇಲ್ಲಿನದು.

ರಾತ್ರಿ ರಸ್ತೆ ಸುಧಾರಿಸಿದರೆ, ಬೆಳಗ್ಗೆ ಕೆಲವರು ಅದೇ ರಸ್ತೆಯಲ್ಲಿ ಅಗೆತ ಶುರುವಿಟ್ಟುಕೊಂಡಿರುತ್ತಾರೆ. ರಸ್ತೆಗಳ ಅಗೆತ ವಿಚಾರದಲ್ಲಿ ಪರವಾನಗಿ ನೀಡಿದ್ದೆಷ್ಟು, ಅಗೆದಿದ್ದೆಷ್ಟು ಎಂಬುದಕ್ಕೆ ಪಾಲಿಕೆಯಲ್ಲಿ ಸ್ಪಷ್ಟ ಚಿತ್ರಣವೇ ಇಲ್ಲದ ಸ್ಥಿತಿ ಇದೆ. ವಿವಿಧ ಇಲಾಖೆ ಹಾಗೂ ಕಂಪೆನಿಗಳು ರಸ್ತೆ ಅಗೆತಕ್ಕೆ ಸಂದಾಯ ಮಾಡುವ ಶುಲ್ಕಕ್ಕೆ ಪ್ರತ್ಯೇಕ ಖಾತೆಯೇ ಪಾಲಿಕೆಯಲ್ಲಿ ಇತ್ತೀಚೆಗಿನವರೆಗೆ ಇರಲಿಲ್ಲ.

ರಸ್ತೆಗಳ ದುಸ್ಥಿತಿಗೆ ರೋಸಿ ಜನರು ರಾಡಿಯಲ್ಲಿಯೇ ರಸ್ತೆ ಮೇಲೆ ಉರುಳು ಸೇವೆ ಮಾಡಿಯಾಯಿತು, ವಿವಿಧ ಸಸ್ಯಗಳನ್ನು ನಾಟಿ ಮಾಡಿದ್ದಾಯಿತು, ಹೋಮ ಮಾಡಿದ್ದಾಯಿತು. ಇಷ್ಟಾದರೂ ರಸ್ತೆಗಳ ಸುಧಾರಣೆ ಮಾತ್ರ ನಿರೀಕ್ಷಿತ ಮಟ್ಟಿಗೆ ಆಗಿಲ್ಲ ಎಂಬುದು ವಾಸ್ತವ.

ಹೂಡಿಕೆದಾರರ ಹಿಂದೇಟು: ಅವಳಿನಗರದಲ್ಲಿ ಗೋಕುಲ, ತಾರಿಹಾಳ, ಲಕಮನಹಳ್ಳಿ, ಬೇಲೂರು, ಗಾಮನಗಟ್ಟಿ ಹೀಗೆ ವಿವಿಧ ಕೈಗಾರಿಕಾ ವಲಯಗಳು ಇದ್ದು, ಯಾವುದೇ ಕೈಗಾರಿಕಾ ವಲಯಕ್ಕೆ ಹೋದರೂ ಮೂಲಸೌಕರ್ಯಗಳ ಕೊರತೆಯೇ ಕಾಣಸಿಗುತ್ತದೆ.

ಕೈಗಾರಿಕಾ ವಲಯಗಳಲ್ಲಿನ ಉದ್ಯಮಿಗಳು ಇಂದಿಗೂ ಕುಡಿಯುವ ನೀರು, ಚರಂಡಿ ಇನ್ನಿತರ ಮೂಲಸೌಕರ್ಯಗಳ ಕೊರತೆಯಲ್ಲಿಯೇ ಉದ್ಯಮ ನಡೆಸುವಂತಾಗಿದೆ. ಇದ್ದ ಉದ್ಯಮಿಗಳೇ ಬೇರೆಲ್ಲಾದರೂ ಉತ್ತಮ ಅವಕಾಶ ಸಿಕ್ಕರೆ ಹೋಗಿ ಬಿಡೋಣ ಅನ್ನುವ ಸ್ಥಿತಿಯಲ್ಲಿದ್ದಾರೆ. ಇಂತಹದ್ದರಲ್ಲಿ ಹೊರಗಿನಿಂದ ಉದ್ಯಮಿಗಳು ಬರುವುದು ದೂರದ ಮಾತೇ ಆಗಿದೆ.

ಅವಳಿ ನಗರದ ಪ್ರಮುಖ ರಸ್ತೆಗಳೇ ಚಿಂದಿಯಾದ ಸ್ಥಿತಿಯಲ್ಲಿವೆ. ಇನ್ನು ಒಳ ರಸ್ತೆಗಳ ಸ್ಥಿತಿ ಆ ದೇವರಿಗೆ ಪ್ರೀತಿಯಂತಿವೆ. ರಸ್ತೆಗಳ ಸುಧಾರಣೆ ಹಾಗೂ ಮೂಲಸೌಕರ್ಯಗಳ ಇಚ್ಛಾಶಕ್ತಿ ಪ್ರದರ್ಶನ ಮೂಲಕ ಅವಳಿ ನಗರಕ್ಕೆ ದೊಡ್ಡ ಉದ್ಯಮಗಳ ಆಕರ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ಯಾರೂ ಮುಂದೆ ಬರೋಲ್ಲ
ವಿದೇಶಿ ಉದ್ಯಮಿಗಳನ್ನು ಇಲ್ಲಿಗೆ ಕರೆತಂದು ಹೂಡಿಕೆಗೆ ಮನವೊಲಿಸಲು ಅವಕಾಶಗಳಿದ್ದರೂ, ಇಲ್ಲಿಗೆ ಅವರನ್ನು ಕರೆ ತಂದರೆ ರಸ್ತೆ ಸ್ಥಿತಿ ನೋಡಿದರೆ ಯಾವ ಹೂಡಿಕೆದಾರರು ಮುಂದೆ ಬರಲಾರರು ಎಂಬುದು ಹಲವರ ಅನಿಸಿಕೆ. ಉದ್ಯಮದಾರರೊಂದಿಗೆ ನಡೆದ ಸಂವಾದದಲ್ಲಿ ಬೆಲ್ಜಿಯಂ ಫ್ಲಾಂಡರ್ ಪ್ರಾಂತೀಯ ಸರಕಾರದ ವ್ಯಾಪಾರ ಮತ್ತು ಹೂಡಿಕೆ ಆಯುಕ್ತ ಜಯಂತ ನಾಡಿಗೇರ ಅವರು ಬೆಲ್ಜಿಯಂನ ಹೂಡಿಕೆದಾರರನ್ನು ಇಲ್ಲಿಗೆ ಕರೆತರಬಹುದು. ಆದರೆ, ಇಲ್ಲಿನ ರಸ್ತೆ, ಕೈಗಾರಿಕಾ ವಲಯಗಳ ಸ್ಥಿತಿ ನೋಡಿಯೂ ಅವರನ್ನು ಕರೆತರುವುದಾದರು ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

Rajbhavana

Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್‌- ಸಿ.ಟಿ.ರವಿ ವಾಗ್ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.