ಮಸ್ತ್ ಮಲಯಾಳಿ ಹಬ್ಬದೂಟ:  ಓಣಂ ಬಂತು ಬಾಳೆಲೆ ಹರಡು 


Team Udayavani, Aug 25, 2018, 3:26 PM IST

2554.jpg

ಕೇರಳಿಗರ ಸುಗ್ಗಿ ಹಬ್ಬ “ಓಣಂ’ ಎಂದರೆ ಮಲಯಾಳಿಗಳು ಮಾತ್ರವೇ ಅಥವಾ ಕೇರಳದಲ್ಲಿ ಮಾತ್ರ ಆಚರಿಸಲ್ಪಡುವ ಹಬ್ಬವಾಗಿ ಉಳಿದಿಲ್ಲ. ರಾಜ್ಯ, ಭಾಷೆ, ಧರ್ಮಗಳನ್ನು ಮೀರಿ ಜನರನ್ನು ಒಗ್ಗೂಡಿಸುವ ಕೆಲಸ ಓಣಂನಿಂದಾಗುತ್ತಿದೆ. ಮಲಯಾಳಿಗಳು ಭೂಮಿಯ ಯಾವುದೇ ಮೂಲೆಗೆ ಹೋದರೂ ತಮ್ಮತನವನ್ನೂ ಜೊತೆಯಲ್ಲೇ ಕೊಂಡೊಯ್ಯುತ್ತಾರೆ ಎನ್ನುವುದು ಯಾರಿಗೂ ಗೊತ್ತಿಲ್ಲದ ಸಂಗತಿಯೇನಲ್ಲ. ಓಣಂ ನಮಗೆಲ್ಲರಿಗೂ ಆಪ್ತವಾಗುವುದರ ಹಿಂದೆ ಹೂವಿನ ರಂಗೋಲಿ “ಪೂಕಳಂ’, ಕೇರಳದಲ್ಲಿ ನಡೆಯುವ ದೋಣಿ ಸ್ಪರ್ಧೆ ಮುಂತಾದ ಆಚರಣೆಗಳಷ್ಟೇ ಮುಖ್ಯವಾಗಿ ಓಣಂ ಹಬ್ಬದೂಟವೂ ಕಾರಣವಾಗಿದೆ. ಓಣಂ ಹಬ್ಬದೂಟವನ್ನು ಬೆಂಗಳೂರಿಗರಿಗೆ ಉಣಬಡಿಸುವ ಕೆಲ ಸ್ಥಳಗಳನ್ನು ಇಲ್ಲಿ ನೀಡಿದ್ದೇವೆ. 

1. ಎಂಟೆ ಕೇರಳಂ
ಬೆಂಗಳೂರಿನ ಹಳೆ ಕೇರಳ ರೆಸ್ಟೋರೆಂಟುಗಳಲ್ಲಿ ಇದೂ ಒಂದು. ಒಳಕ್ಕೆ ಕಾಲಿಡುತ್ತಿದ್ದಂತೆ ಕೇರಳದ ಸಾಂಪ್ರದಾಯಿಕ ದೊಡ್ಡ ಮನೆಯೊಂದರೊಳಗೆ ಕಾಲಿಟ್ಟ ಅನುಭವವಾಗುತ್ತದೆ. ಗೋಡೆ ಮೇಲೆ ತೂಗು ಹಾಕಿರುವ ಪೇಂಟಿಂಗುಗಳು. ಮಧ್ಯದಲ್ಲಿ ದೊಡ್ಡ ದೀಪದ ಸ್ತಂಭ, ಮರದ ಕೆತ್ತನೆಗಳು ಕೇರಳದ ನೆನಪು ತರಿಸುತ್ತವೆ. ಇನ್ನು ಓಣಂ ಸ್ಪೆಷಲ್‌ ಮೆನುವಂತೂ ಬಾಯಲ್ಲಿ ನೀರು ತರಿಸುತ್ತದೆ. ಕಡೆಯಲ್ಲಿ ನೀಡುವ ರುಚಿಕರ ಪಾಯಸ ಕುಡಿದಾಗಲೇ ಓಣಂ ಹಬ್ಬದೂಟ ಪೂರ್ತಿಯಾಗುವುದು. ಅಂದ ಹಾಗೆ ಮುಂಚಿತವಾಗಿ ಬುಕ್ಕಿಂಗ್‌ ಮಾಡಿ ಹೋಗುವುದು ಸೂಕ್ತ.
ಎಲ್ಲಿ?: ಎಂಟೆ ಕೇರಳಂ, ಹಲಸೂರು ರಸ್ತೆ, ಸುಲ್ತಾನ್‌ ಜುವೆಲರ್ ಬಳಿ
ಸಂಪರ್ಕ: 080- 4113 3707

2. ಕುಮಾರಕೋಮ್‌
ನಗರದಲ್ಲಿ ವಾಸಿಸುತ್ತಿರುವ ಕೇರಳ ಕುಟುಂಬಗಳು ಇಷ್ಟಪಡುವ ರೆಸ್ಟೋರೆಂಟಿದು. ಕೀರಳದ ಅಡುಗೆಯನ್ನು ಅಪ್ಪಟ ಕೇರಳೀಯ ಶೈಲಿಯಲ್ಲೇ ಸಾಂಪ್ರದಾಯಿಕವಾಗಿ ತಯಾರಿಸುತ್ತದೆ ಎನ್ನುವುದು ಈ ರೆಸ್ಟೋರೆಂಟಿನ ಹೆಗ್ಗಳಿಕೆ. ಕಣ್ಣಿಗೆ ಹಿತ ನೀಡುವ ಮಂದ ಬೆಳಕಿನಲ್ಲಿ ಆಪ್ತರೊಂದಿಗೆ ಹರಟುತ್ತಾ ಓಣಂ ವಿಶೇಷ ಖಾದ್ಯಗಳನ್ನು ಸವಿಯುವುದು ಒಳ್ಳೆಯ ಅನುಭವ. 
ಎಲ್ಲಿ?: ಕುಮಾರಕೋಮ್‌, 14ನೇ ಮುಖ್ಯರಸ್ತೆ, 4ನೇ ಹಂತ, ಬಿಡಿಎ ಕಾಂಪ್ಲೆಕ್ಸ್‌ ಎದುರು, ಎಚ್‌ಎಸ್‌ಆರ್‌ ಲೇಔಟ್‌
ಸಂಪರ್ಕ: 7349272227

3. ಅಂಜೂಸ್‌ ಕೆಫೆ
ರಂಗಶಂಕರಕ್ಕೆ ನಾಟಕ ನೋಡಲು ಬಂದವರೆಲ್ಲರೂ ತಾವು ನೋಡಿದ ನಾಟಕ ಎಷ್ಟು ಚೆನ್ನಾಗಿತ್ತು ಎಂದು ಹೇಳುವುದರ ಜೊತೆಗೆ ಅಲ್ಲಿನ ಕೆಫೆಯಲ್ಲಿ ಸಿಕ್ಕ ಸಾಬೂದಾನ ವಡೆ, ಟೀಯ ರುಚಿಯನ್ನು ಕೂಡಾ ನೆನಪಿಸಿಕೊಂಡು ಮೆಚ್ಚುಗೆ ಸೂಚಿಸುತ್ತಾರೆ. ರಂಗಶಂಕರದಲ್ಲಿ ಇರುವ ಕೆಪೆಯೇ ಅಂಜೂಸ್‌ ಕೆಫೆ. ರಂಗಾಸಕ್ತರನ್ನು ಸೆಳೆಯುವ ಜಾಗದಲ್ಲಿ ಯಶಸ್ವಿಯಾಗಿ ಕೆಫೆ ನಡೆಸುವುದು ಸುಲಭದ ಮಾತಲ್ಲ. ಅದರಲ್ಲೂ ಕೇರಳ ಶೈಲಿಯ ಕೆಫೆ! ಓಣಂ ಸಮಯದಲ್ಲಿ ಕೆಫೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟುತ್ತದೆ. ಕೇರಳದ ಸಾಂಪ್ರದಾಯಿಕ ಓಣಂ ಹಬ್ಬದೂಟವನ್ನು ಆಂಜೂಸ್‌ ಕೆಫೆ ಗ್ರಾಹಕರಿಗೆ ಬಡಿಸುತ್ತದೆ
ಎಲ್ಲಿ?: ಅಂಜೂಸ್‌ ಕೆಫೆ, ರಂಗಶಂಕರ, 8ನೇ ಕ್ರಾಸ್‌, 23ನೇ ಮುಖ್ಯರಸ್ತೆ, ಜೆ.ಪಿ.ನಗರ 2ನೇ ಹಂತ
ಸಂಪರ್ಕ: 

4. ಮಲಬಾರ್‌ ಬೇ
ಇಲ್ಲಿನ ಕೇರಳದ ಖಾದ್ಯಗಳನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ ನಿಜ, ಅದರಷ್ಟೇ ಮೆಚ್ಚುಗೆಯನ್ನು ಪಡೆದಿವೆ ಇಲ್ಲಿನ ಶರಬತ್ತುಗಳು. ನನ್ನರಿ ಶರಬತ್ತು, ಚುಕ್‌ ಕಾಪಿಯನ್ನೊಳಗೊಂಡಂತೆ ಹಲವೂ ಬಗೆಗಳ ಶರಬತ್ತುಗಳು ಇಲ್ಲಿ ಸಿಗುತ್ತವೆ. ಕ್ರೈಸ್ಟ್‌ ಕಾಲೇಜಿನ ಬಳಿಯಿರುವುದರಿಂದ ಈ ರೆಸ್ಟೋರೆಂಟು ಅಲ್ಲಿನ ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. 
ಎಲ್ಲಿ?: ಮಲಬಾರ್‌ ಬೇ, ನಂ. 43, ಕೃಷ್ಣಾನಗರ, ಎಸ್‌.ಜಿ. ಪಾಳ್ಯ ರಸ್ತೆ, ಕ್ರೈಸ್ಟ್‌ ಕಾಲೇಜು ಬಳಿ, ಬಿ.ಟಿ.ಎಂ. ಲೇಔಟ್‌
ಸಂಪರ್ಕ: 7829999500

5. ಚೇಟಾಸ್‌ ಕಿಚನ್‌ 
ಮಲಯಾಳಂನಲ್ಲಿ “ಚೇಟಾ’ ಎಂದರೆ “ಅಣ್ಣ’. ಅದರ ಸ್ಪಷ್ಟಾರ್ಥಕ್ಕೆ ಹೋಗದೆ ಚೇಟಾ ಎನ್ನುವ ಪದ ಅಲ್ಲಿ ತಮಗೆ ಆತ್ಮೀಯರಾದವರನ್ನು ಕರೆಯಲು ಬಳಸುತ್ತಾರೆ. ಹೆಸರಿಗೆ ತಕ್ಕಂತೆ ಇಲ್ಲಿ ಸಿಬ್ಬಂದಿ ವರ್ಗ ಗ್ರಾಹಕ ಸ್ನೇಹಿಯೆಂದು ಹೆಸರು ಪಡೆದಿದೆ. ಈ ಹೋಟೆಲ್‌ನ ವ್ಯಾಪ್ತಿ ಅಷ್ಟೇನೂ ದೊಡ್ಡದಲ್ಲದಿದ್ದರೂ ಕೇರಳ ಶೈಲಿಯ ಅಡುಗೆಯನ್ನು ಅಲ್ಲಿನದೇ ಆತ್ಮೀಯತೆಯಿಂದ ಬಡಿಸುವುದರಿಂದ ಗ್ರಾಹಕರು ಪದೇ ಪದೆ ಇಲ್ಲಿಗೆ ಭೇಟಿ ನೀಡುತ್ತಾರೆ. 
ಎಲ್ಲಿ?: ಚೇಟಾಸ್‌ ಕಿಚನ್‌, ನಂ. 12, 1ನೇ ಕ್ರಾಸ್‌, ಸಪ್ತಗಿರಿ ಲೇಔಟ್‌, ವಿದ್ಯಾರಣ್ಯಪುರ
ಸಂಪರ್ಕ: 9980137432

ಟಾಪ್ ನ್ಯೂಸ್

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

1-SL

Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.