ದಿಲ್ಲಿ : ಹಿಂಸೆಗೆ ತಿರುಗಿದ ರೇಪ್ ಪ್ರತಿಭಟನೆ; 10 ಪೊಲೀಸರಿಗೆ ಗಾಯ
Team Udayavani, Aug 25, 2018, 3:54 PM IST
ಹೊಸದಿಲ್ಲಿ : ದಿಲ್ಲಿಯ ವಸಂತ ಕುಂಜ ಪ್ರದೇಶದಲ್ಲಿ ನಡೆಯಿತೆನ್ನಲಾದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಯು ಹಿಂಸೆಗೆ ತಿರುಗಿದ ವಿದ್ಯಮಾನದಲ್ಲಿ ಪ್ರತಿಭಟನಕಾರರು ಕೆಲವು ಕಾರುಗಳನ್ನು ಪುಡಿಗುಟ್ಟಿ ಪೊಲೀಸ್ ಸಿಬಂದಿಗಳ ಮೇಲೆ ಕಲ್ಲೆಸೆದಿರುವುದು ವರದಿಯಾಗಿದೆ.
ಉದ್ರಿಕ್ತ ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಲಘುವಾಗಿ ಬಲ ಪ್ರಯೋಗಿಸಿದರೂ ಕನಿಷ್ಠ 10 ಮಂದಿ ಪೊಲೀಸ್ ಸಿಬಂದಿಗಳು ತಿಕ್ಕಾಟದಲ್ಲಿ ಗಾಯಗೊಂಡರು.
ಸುಮಾರು 20 ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದರು. ಇವರ ಕಲ್ಲೆಸೆತಕ್ಕೆ ಸಿಲುಕಿ ಗಾಯಗೊಂಡ ಪೊಲೀಸರಲ್ಲಿ ಇಬ್ಬರು ಸಹಾಯಕ ಕಮಿಷನರ್ ಕೂಡ ಸೇರಿದ್ದಾರೆ.
11 ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಯಿತೆಂಬ ವದಂತಿಯನ್ನು ಅನುಸರಿಸಿ ದಿಲ್ಲಿಯ ರಂಗಾಪುರಿ ಪಹಾಡಿ ಪ್ರದೇಶದಲ್ಲಿನ ಝುಗ್ಗಿ ಸಮೂಹದ ಜನರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು ಎಂದು ದಿಲ್ಲಿ ನೈಋತ್ಯ ಪೊಲೀಸ್ ಡೆಪ್ಯುಟಿ ಕಮಿಷನರ್ ದೇವೇಂದರ್ ಆರ್ಯ ತಿಳಿಸಿದರು.
ಘಟನಯನ್ನು ಅನುಸರಿಸಿ ವಸಂತ ಕುಂಜ ಪ್ರದೇಶದಲ್ಲಿನ ರಯಾನ್ ಇಂಟರ್ನ್ಯಾಶನಲ್ ಸ್ಕೂಲ್ ಬಳಿ ಟ್ರಾಫಿಕ್ ಜಾಮ್ ಉಂಟಾಯಿತು. ಸುದ್ದಿ ತಿಳಿದ ಪೊಲೀಸರು ಒಡನೆಯೇ ಸ್ಥಳಕ್ಕೆ ಧಾವಿಸಿದರು.
ಅಷ್ಟರೊಳಗಾಗಿ ಹೋತಿ ಕ್ಯಾಂಪ್ ಜುಗ್ಗಿ ಸಮೀಪದ ಛತ್ತರ್ಪುರ ಮಹಿಳಾಪುರ ರಸ್ತೆಯ ಕ್ಯಾರೇಜ್ವೇ ಗಳನ್ನು ಪ್ರತಿಭಟನಕಾರರು ತಡೆದಿದ್ದರು. ರೇಪ್ ಆರೋಪಿಯನ್ನು ಅದಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ ಹೊರತಾಗಿಯೂ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲೆಸೆಯಲು ಆರಂಭಿಸಿದರು. ಪರಿಣಾಮವಾಗಿ ಸುಮಾರು 10 ಪೊಲೀಸರು ಗಾಯಗೊಂಡರು.
ತತ್ಕ್ಷಣ ಸ್ಥಳದಿಂದ ಚದುರುವಂತೆ ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದರೂ ಫಲಕಾರಿಯಾಗಲಿಲ್ಲ. ಆಗ ಅನಿವಾರ್ಯವಾಗಿ ಪೊಲೀಸರು ಕಾನೂನು ಮತ್ತು ಶಿಸ್ತನ್ನು ಪಾಲಿಸಲು ಲಘುವಾದ ಬಲ ಪ್ರಯೋಗ ನಡೆಸಿ ಪರಿಸ್ಥಿತಿ ಕೈ ಮೀರುವುದನ್ನು ತಪ್ಪಿಸಿದರು ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.