ಸಿಖ್‌ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್‌ ಪಾತ್ರವಿಲ್ಲ: ರಾಹುಲ್‌

Team Udayavani, Aug 26, 2018, 6:00 AM IST

z-18.jpg

ಲಂಡನ್‌: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, 1984ರ ಸಿಖ್‌ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್‌ ಪಾತ್ರವಿಲ್ಲ ಎಂದಿದ್ದಾರೆ. ಇದು ಈಗ ತೀವ್ರ ರಾಜಕೀಯ ವಾಗ್ಧಾಳಿಗೆ ಕಾರಣವಾಗಿದೆ. 3 ಸಾವಿರಕ್ಕೂ ಹೆಚ್ಚು ಸಿಖ್ಬರು ಹತ್ಯೆಗೀಡಾದ ಈ ದಂಗೆಯ ಆರೋಪಿಗಳಲ್ಲಿ ಪ್ರಮುಖವಾಗಿ ಕಾಂಗ್ರೆಸ್‌ ಮುಖಂಡ ಸಜ್ಜನ್‌ ಕುಮಾರ್‌ ಕೂಡ ಇದ್ದಾರೆ. ಆದರೆ, ರಾಹುಲ್‌ ಅವರು, ಸಿಖ್‌ ವಿರೋಧಿ ದಂಗೆಯನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ. ಅಷ್ಟೇ ಅಲ್ಲ, ಹಿಂಸಾಚಾರದಲ್ಲಿ ತೊಡಗಿಸಿಕೊಂಡವರಿಗೆ ಶಿಕ್ಷೆಯೂ ಆಗಬೇಕು ಎಂದೂ ಲಂಡನ್‌ ಸಂಸತ್‌ನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಹಾಗೂ ಅಕಾಲಿ ದಳ ಪಕ್ಷಗಳು, ದಂಗೆಯಲ್ಲಿ ಕಾಂಗ್ರೆಸ್‌ ಪಾತ್ರವಿಲ್ಲ ಎಂದಾದರೆ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಸಂಸತ್ತಿನಲ್ಲಿ ಕ್ಷಮೆ ಕೇಳಿದ್ದೇಕೆ ಎಂದು ಪ್ರಶ್ನಿಸಿವೆ. ಅಲ್ಲದೆ ಸಿಖ್ಬರನ್ನು ಹತ್ಯೆಗೈದಿರುವ ಬಗ್ಗೆ ಸಂದರ್ಶನವೊಂದರಲ್ಲಿ ಕಾಂಗ್ರೆಸ್‌ ಮುಖಂಡ ಜಗದೀಶ್‌ ಟೈಟ್ಲರ್‌ ಒಪ್ಪಿಕೊಂಡಿದ್ದಾರೆ ಎಂದು ಅಕಾಲಿ ದಳದ ಮುಖಂಡ ಹಾಗೂ ಪಂಜಾಬ್‌ ಮಾಜಿ ಸಿಎಂ ಸುಖಬೀರ್‌ ಸಿಂಗ್‌ ಬಾದಲ್‌ ಹೇಳಿದ್ದಾರೆ. ರಾಹುಲ್‌ರ ಈ ಹೇಳಿಕೆಯಿಂದ ಅವರಲ್ಲಿ ನಾಯಕತ್ವ ಗುಣ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮನಮೋಹನ ಸಿಂಗ್‌ ಕ್ಷಮೆ ಕೇಳಿದ್ದನ್ನು ರಾಹುಲ್‌ ಮರೆತಂತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಹೇಳಿದ್ದಾರೆ.

ದಂಗೆ ವೇಳೆ ಬಾಲಕರಾಗಿದ್ದ ರಾಹುಲ್‌:ರಾಹುಲ್‌ ಬೆಂಬಲಕ್ಕೆ ನಿಂತಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, 1984ರಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆಗ ನಡೆದ ಘಟನೆಗೆ ಮನಮೋಹನ ಸಿಂಗ್‌ ಸಂಸತ್ತಿನಲ್ಲಿ ಕ್ಷಮೆ ಕೇಳಿದ್ದಾರೆ. ರಾಹುಲ್‌ರನ್ನು ಇದಕ್ಕೆ ಹೊಣೆಯಾಗಿಸಲಾಗದು. ಅವರು ಆಗಿನ್ನೂ 13 ಅಥವಾ 14 ವರ್ಷದ ಬಾಲಕರಾಗಿದ್ದರು. ಅವರಿಗೆ ಏನೂ ತಿಳಿದಿರಲಾರದು! ಎಂದು ಹೇಳಿದ್ದಾರೆ.

ಬಿಜೆಪಿ ಹಾಗೂ ವಿರೋಧ ಪಕ್ಷಗಳ ಒಕ್ಕೂಟದ ಮಧ್ಯೆ ಚುನಾವಣೆ: 2019ರ ಲೋಕಸಭೆ ಚುನಾವಣೆಯು ಬಿಜೆಪಿ ಹಾಗೂ ವಿರೋಧ ಪಕ್ಷಗಳ ಒಕ್ಕೂಟದ ಮಧ್ಯದ ಹಣಾಹಣಿಯಾಗಿರಲಿದೆ ಎಂದು ರಾಹುಲ್‌ ಹೇಳಿದ್ದಾರೆ. ಲಂಡನ್‌ ಸ್ಕೂಲ್‌ ಆಫ್ ಎಕಾನಮಿಕ್ಸ್‌ನಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ. 

ಡೋಕ್ಲಾಂ ಬಗ್ಗೆ ನನಗೆ ಮಾಹಿತಿಯಿಲ್ಲ
ಡೋಕ್ಲಾಂ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ಹೀಗಾಗಿ ನಾನು ಮಾತನಾಡಲಾರೆ ಎಂದು ರಾಹುಲ್‌ ಗಾಂಧಿ ಹೇಳಿರುವುದು ಈಗ ಅಪಹಾಸ್ಯಕ್ಕೆ ಗುರಿಯಾಗಿದೆ. ನೀವು ಅಧಿಕಾರದಲ್ಲಿದ್ದಿದ್ದರೆ ಡೋಕ್ಲಾಂ ಸಮಸ್ಯೆಯನ್ನು ಹೇಗೆ ನಿವಾರಿಸುತ್ತಿದ್ದಿರಿ ಎಂಬ ಪ್ರಶ್ನೆಗೆ ರಾಹುಲ್‌ ಈ ಉತ್ತರ ನೀಡಿದ್ದಾರೆ. ಇದಕ್ಕೂ ಮೊದಲು ರಾಹುಲ್‌ ಡೋಕ್ಲಾಂ ವಿಚಾರವನ್ನು ಮೋದಿ ಸರಿಯಾಗಿ ನಿರ್ವಹಿಸಲಿಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿದ ಬಿಜೆಪಿ ಮುಖಂಡ ಎಂ.ಜೆ.ಅಕºರ್‌, ರಾಹುಲ್‌ ಬುದ್ಧಿಮತ್ತೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಬೇಕು ಎಂದಿದ್ದಾರೆ. ಅಲ್ಲದೆ ವಿವಿಧ ಸಮಿತಿಗಳಲ್ಲಿ ರಾಹುಲ್‌ ಇದ್ದಾರೆ. ಅವರಿಗೆ ಡೋಕ್ಲಾಂ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಇಲ್ಲದಿರಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ರಾಹುಲ್‌ ವಿರುದ್ಧ ಮಾನಹಾನಿ ದೂರು
ವಿದೇಶದಲ್ಲಿ ಭಾರತದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ರಾಹುಲ್‌ ಗಾಂಧಿ ವಿರುದ್ಧ ಬಿಹಾರದ ಮುಜಫ‌ರ್‌ಪುರ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ವಕೀಲ ಸುಧೀರ್‌ ಕುಮಾರ್‌ ಓಝಾ ಎಂಬುವವರು ದೂರು ದಾಖಲಿಸಿದ್ದು, ವಿಚಾರಣೆಯನ್ನು ಸೆ.4ಕ್ಕೆ ನಿಗದಿಸಲಾಗಿದೆ. ರಾಹುಲ್‌ ಅವರು ಭಯೋತ್ಪಾದನೆಯನು ಸಮರ್ಥಿಸಿಕೊಂಡಿದ್ದಾರೆ. ನಿರುದ್ಯೋಗದಿಂದಾಗಿ ಐಸಿಸ್‌ನಂತಹ ಉಗ್ರ ಸಂಘಟನೆ ಹುಟ್ಟಿಕೊಳ್ಳುತ್ತದೆ ಹಾಗೂ ಭಾರತದಲ್ಲಿ ಇಂತಹ ಸನ್ನಿವೇಶ ಉಂಟಾಗಿದೆ ಎಂದಿದ್ದಾರೆ. ಇದು ದೇಶಕ್ಕೆ ಮಾಡಿದ ಅವಮಾನ ಎಂದು ಆರೋಪಿಸಲಾಗಿದೆ.

ಟಾಪ್ ನ್ಯೂಸ್

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

ರಾಜಸ್ಥಾನದಲ್ಲಿ ಮತ್ತೊಂದು ಬೋರ್ ವೆಲ್ ದುರಂತ… 150 ಅಡಿ ಆಳದಲ್ಲಿ ಸಿಲುಕಿದ 3 ವರ್ಷದ ಬಾಲಕಿ

ರಾಜಸ್ಥಾನದಲ್ಲಿ ಮತ್ತೊಂದು ಬೋರ್ ವೆಲ್ ದುರಂತ… 150 ಅಡಿ ಆಳದಲ್ಲಿ ಸಿಲುಕಿದ 3 ವರ್ಷದ ಬಾಲಕಿ

Video: ಟ್ರಕ್ ನಡಿ ಸಿಲುಕಿದ ಬೈಕ್ ಸವಾರರನ್ನು 1ಕಿ.ಮೀ ದೂರ ಎಳೆದೊಯ್ದ ಚಾಲಕ…

Speeding Truck : ಟ್ರಕ್ ನಡಿ ಸಿಲುಕಿದ ಬೈಕ್ ಸವಾರರನ್ನು 1ಕಿ.ಮೀ ದೂರ ಎಳೆದೊಯ್ದ ಚಾಲಕ…

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.