ಕವಿಯೊಬ್ಬನ ಪ್ರೀತಿ ಗೀತಿ ಇತ್ಯಾದಿ…

Team Udayavani, Aug 26, 2018, 11:43 AM IST

kavi.jpg

ಯಾವುದೇ ಒಂದು ಕವಿತೆಗೆ ಎಲ್ಲವನ್ನು ಗೆಲ್ಲುವ ಮತ್ತು ಸಮಾಧಾನಿಸುವ ಶಕ್ತಿ ಇರುತ್ತೆ. ಅದೇ ಕವಿತೆ ಬರೆದ ಕವಿಗೆ ಇರುತ್ತಾ? ಅದೇ ಈ ಚಿತ್ರದೊಳಗಿರುವ ಗುಟ್ಟು. ಈ “ಕವಿ’ ನೋಡುಗನ ಮನಸ್ಸನ್ನು ಗೆಲ್ಲುತ್ತಾನಾ ಅಥವಾ ಪ್ರಭಾವ ಬೀರುತ್ತಾನಾ ಎಂಬುದನ್ನು ಹೇಳುವುದು ಕಷ್ಟ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತೆ. ಕೆಲವರು ಪ್ರಕೃತಿ ನೋಡಿ ಕವಿಯಾಗುತ್ತಾರೆ. ಇನ್ನೂ ಕೆಲವರು ಕಣ್ಣಿಗೆ ಚಂದ ಕಾಣುವ ಹುಡುಗಿ ನೋಡಿ ಕವಿಯಾಗುತ್ತಾರೆ. ಆದರೆ, ಇಲ್ಲೊಬ್ಬ ಪೊರ್ಕಿ ಹೇಗೆ ಕವಿಯಾಗುತ್ತಾನೆ ಅನ್ನೋದೇ ಕಥೆ.

ಅವನ ಕವಿತೆಗೆ ಕಿವಿಯಾಗುವ ಹುಡುಗಿಯೊಬ್ಬಳು ಹೇಗೆ ಪ್ರೀತಿಯಲ್ಲಿ ಕರಗುತ್ತಾಳೆ ಅನ್ನುವುದನ್ನು ಕಾವ್ಯಾತ್ಮಕವಾಗಿ ಬಣ್ಣಿಸುತ್ತಲೇ, ಹೊಸ ರೂಪಕ ಆನಾವರಣಗೊಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಇಲ್ಲಿ ಕಥೆ ಬಗ್ಗೆ ಹೇಳುವಂಥದ್ದೇನೂ ಇಲ್ಲ. ಸರಳ ಕಥೆಗೆ ಬಿಗಿಯಾದ ನಿರೂಪಣೆ ಕೊರತೆ ಇದೆ. ಆ ಕೊರತೆಯನ್ನು ಹಾಡಲ್ಲಿ ನೀಗಿಸುವ ಸಣ್ಣ ಪ್ರಯತ್ನ ಮಾಡಿರುವುದೇ ಸಮಾಧಾನ.

ಕವಿ ಅಂದಾಕ್ಷಣ, ಸಿನಿಮಾದುದ್ದಕ್ಕೂ ಕವಿಯ ಪದಪುಂಜಗಳೇ ಹರಿದಾಡುವುದಿಲ್ಲ. ಕವಿಯೊಬ್ಬನ ಕಾವ್ಯ ವಾಚನಕ್ಕಷ್ಟೇ ಸೀಮಿತವಾಗದ ನಿರ್ದೇಶಕರು, ಬಿಲ್ಡಪ್‌ಗಾಗಿ ಫೈಟು, ಒಂದು ಇಂಟ್ರಡಕ್ಷನ್‌ಗೊಂದು ಹಾಡು ಕಟ್ಟಿಕೊಟ್ಟು, ಸ್ವಲ್ಪ ನೋಡುಗನ ತಾಳ್ಮೆ ಕೆಡಿಸಲು ಕಾರಣರಾಗುತ್ತಾರೆ. ಕಮರ್ಷಿಯಲ್‌ ಅಂಶಗಳು ಇರಬೇಕು ಎಂಬ ಒತ್ತಡಕ್ಕೆ ಮಣಿದಂತಿರುವ ನಿರ್ದೇಶಕರು, ವಿನಾಕಾರಣ ಕೆಲ ದೃಶ್ಯಗಳಿಗೆ ಮೊರೆ ಹೋಗಿದ್ದಾರೆ.

ಅರ್ಥವಿರದ ಖಳನಟರ ದೃಶ್ಯಗಳನ್ನಿಟ್ಟು, ಅವರ ಕಿರುಚಾಟ, ಕೂಗಾಟಕ್ಕಷ್ಟೇ ಜಾಗ ಕಲ್ಪಿಸಿದ್ದಾರೆ ವಿನಃ, ಅದಕ್ಕೊಂದು ಪರಿಪೂರ್ಣ ಚೌಕಟ್ಟು ಹಾಕಿಲ್ಲ. ಅದನ್ನು ಬಿಟ್ಟರೆ, “ಕವಿ’ ಮನಸ್ಸಿನೊಳಗಿನ ಪ್ರೀತಿ, ಗೆಳೆತನ ಮತ್ತು ತಲ್ಲಣವನ್ನು ಅಷ್ಟೇ ಸೊಗಸಾಗಿ ತೋರಿಸುವ ಮೂಲಕ ಸಣ್ಣದ್ದೊಂದು ಸಮಾಧಾನಕ್ಕೆ ಕಾರಣರಾಗುತ್ತಾರೆ. ನೋಡುಗರಿಗೆ ಸಾಕಷ್ಟು ಗೊಂದಲಗಳು ಎದುರಾಗುತ್ತವೆಯಾದರೂ, ನಿರ್ದೇಶಕರ ಚೊಚ್ಚಲ ಪ್ರಯತ್ನವಾದ್ದರಿಂದ ಅದನ್ನು ಬದಿಗಿರಿಸಿ ಒಮ್ಮೆ “ಕವಿ’ ಮನಸ್ಸಿಗೆ ಕಿವಿಯಾಗುವ ಹುಡುಗಿಯ ತಿಲ್ಲಾನವನ್ನು ನೋಡಲ್ಲಡ್ಡಿಯಿಲ್ಲ.

ರಾಜ ಅವನೊಬ್ಬ ಪೊರ್ಕಿ. ಕಾಲೇಜ್‌ಗೆ ಹೋದರೂ ಅವನಿಗೆ ಓದು ತಲೆಗತ್ತಲ್ಲ.  ಮನೆಯಲ್ಲಿ ಅಪ್ಪ, ಅಮ್ಮನ ಬಳಿ ಕಾಸು ಪಡೆದು ಗೆಳೆಯರ ಜೊತೆ ತಿರುಗಾಡುವ ಹುಡುಗ. ಕಾಲೇಜು ಕವಿಗೋಷ್ಠಿಯಲ್ಲೊಮ್ಮೆ ಅವನು ವಾಚಿಸುವ ಕವನ ಕೇಳುವ ಹುಡುಗಿ ಹಂಸ ಮೆಲ್ಲನೆ ಪ್ರೀತಿಗೆ ಜಾರುತ್ತಾಳೆ. ಅವನ ಹಿಂದೆ, ಮುಂದೆ ಓಡಾಡಿದರೂ, ಅವನು ಮಾತ್ರ ತನಗೇನೂ ಗೊತ್ತಿಲ್ಲದಂತೆ ಇರುತ್ತಾನೆ. ಕೊನೆಗೆ ಆಕೆ ಪ್ರೀತಿ ನಿವೇದನೆ ಮಾಡಿಕೊಂಡಾಗ, ಅಲ್ಲೊಂದು ಸುಳ್ಳು ಹೇಳುತ್ತಾನೆ. ಅವನೇ ಹೇಳಿದ ಕಟ್ಟು ಕಥೆ, ಲೈಫ‌ಲ್ಲೂ ಸತ್ಯಕಥೆಯಾಗುತ್ತೆ. ಅದೇ ಹೈಲೆಟ್‌.

ಆ ಕುತೂಹಲವಿದ್ದರೆ “ಕವಿ’ ಕವಿತೆಗೆ ಕಿವಿಯಾಗಬಹುದು. ಪುನೀತ್‌ ನಟನೆ ಪರವಾಗಿಲ್ಲ. ಡ್ಯಾನ್ಸ್‌ ಮತ್ತು ಫೈಟ್‌ ಬಗ್ಗೆ ಹೆಚ್ಚು ಗಮನಹರಿಸುವ ಅಗತ್ಯವಿದೆ. ಶೋಭಿತಾ ಸಿಕ್ಕ ಅವಕಾಶಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಬರುವ ಪಾತ್ರಗಳ್ಯಾವೂ ಹೆಚ್ಚು ಗಮನಸೆಳೆಯಲ್ಲ. ತ್ಯಾಗರಾಜು ಸಂಗೀತದ ಎರಡು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತದ ಅಬ್ಬರ ಮಾತುಗಳನ್ನೇ ನುಂಗಿಕೊಂಡಿದೆ. ಶರತ್‌ಕುಮಾರ್‌ ಮತ್ತು ಕಾರ್ತಿಕ್‌ ಶರ್ಮ ಛಾಯಾಗ್ರಹಣದಲ್ಲಿ “ಕವಿ’ಯ ಒಳ್ಳೆಯ ಪರಿಸರ ತುಂಬಿದೆ.

ಚಿತ್ರ: ಕವಿ
ನಿರ್ಮಾಣ: ಪುನೀತ್‌
ನಿರ್ದೇಶನ: ಎಂ.ಎಸ್‌.ತ್ಯಾಗರಾಜು
ತಾರಾಗಣ: ಪುನೀತ್‌ಗೌಡ, ಶೋಭಿತಾ, ಸ್ನೇಹ ನಾಯ್ಡು, ಉಮೇಶ್‌, ರಾಕ್‌ಲೈನ್‌ ಸುಧಾಕರ್‌, ಶಿವಣ್ಣ, ಮಹೇಶ್‌ ಇತರರು.

* ವಿಭ

ಟಾಪ್ ನ್ಯೂಸ್

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.