ರಕ್ಷಾ ಬಂಧನ, ಕೆಲವು ಕಥೆಗಳು
Team Udayavani, Aug 26, 2018, 11:53 AM IST
ರಾಜ ಪುರು -ಅಲೆಕ್ಸಾಂಡರ್
ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ಸಂದರ್ಭ ರಾಜ ಪುರುವಿನಿಂದ ವಿರೋಧವನ್ನು ಎದುರಿಸುತ್ತಾನೆ. ಆ ವೇಳೆ ಭಾರತದ ರಕ್ಷಾ ಬಂಧನ ಪದ್ಧತಿಯ ಬಗ್ಗೆ ತಿಳಿದುಕೊಂಡ ಅವನ ಪತ್ನಿ ಪುರುವಿಗೆ ರಕ್ಷೆಯನ್ನು ಕಟ್ಟುತ್ತಾಳೆ. ಅದರಿಂದ ಪುರು, ಅಲೆಕ್ಸಾಂಡರಿಗೆ ಭವ್ಯ ಸ್ವಾಗತವನ್ನು ನೀಡಿದ.
ರಾಣಿ ಕರ್ಣಾವತಿ- ಹುಮಾಯೂನ್
ರಾಣಿ ಕರ್ಣಾವತಿ ಚಿತ್ತೂರಿನ ರಜಪೂತ ರಾಜನ ವಿಧವೆ ರಾಣಿ. ಸಮರ್ಥ ರಾಜನಿಲ್ಲದ ಕಾರಣ ಪದೇ ಪದೇ ಅವಳ ರಾಜ್ಯದ ಮೇಲೆ ಅಹಮದಾಬಾದ್‌ನ ಸುಲ್ತಾನ ಆಕ್ರಮಣ ಮಾಡುತ್ತಿದ್ದ. ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳಲು ಆಕೆ ಆ ಸಂದರ್ಭದಲ್ಲಿ ದಿಲ್ಲಿಯನ್ನು ಆಳುತ್ತಿದ್ದ ಮೊಘಲ್ ದೊರೆ ಹುಮಾಯೂನ್‌ಗೆ ಸಹಾಯ ಯಾಚಿಸಿ, ರಕ್ಷೆಯನ್ನು ಕಳಿಸುತ್ತಾಳೆ. ಅದರಿಂದ ಸಂಪ್ರೀನಾದ ಆತ ಆಕೆಯನ್ನು ಸಹೋದರಿಯಾಗಿ ಸ್ವೀಕರಿಸಿ ಸಹಾಯ ಮಾಡುತ್ತಾನೆ.
ಮಹಾಬಲಿ – ಲಕ್ಷ್ಮೀದೇವಿ
ಧರೆಯನ್ನಾಳುತ್ತಿದ್ದ ಬಲಿ ಚಕ್ರವರ್ತಿ ಮಹಾವಿಷ್ಣುವಿನ ಪರಮ ಭಕ್ತನಾಗಿದ್ದ. ಅವನ ಸಾಮ್ರಾಜ್ಯವನ್ನು ಕಾಯುವ ನಿಟ್ಟಿನಲ್ಲಿ ವಿಷ್ಣು ವೈಕುಂಠವನ್ನು ಬಿಟ್ಟು ಕಾಲವೇ ಆಗಿತ್ತು. ಇದರಿಂದ ಬೇಸರಗೊಂಡ ಲಕ್ಷ್ಮೀದೇವಿ ಬಲಿಯ ಬಳಿಗೆ ಆಸರೆ ಕಳೆದುಕೊಂಡ ಬ್ರಾಹ್ಮಣ ಹುಡುಗಿಯ ವೇಷ ಧರಿಸಿ ಹೋಗುತ್ತಾಳೆ. ಬಲಿ ಆಕೆಗೆ ತನ್ನ ಅರಮನೆಯಲ್ಲಿ ಆಸರೆ ನೀಡುತ್ತಾನೆ. ಶ್ರಾವಣ ಪೂರ್ಣಿಮಾದ ಸುಸಂದರ್ಭ ಆಕೆ ಬಲಿ ಚರ್ಕವರ್ತಿಯ ಕೈಗೆ ರಕ್ಷೆಯನ್ನು ಕಟ್ಟಿ ತನ್ನ ನಿಜ ರೂಪ ಧರಿಸುತ್ತಾಳೆ. ಬಲಿ ವಿಷ್ಣು ಹಾಗೂ ಲಕ್ಷ್ಮೀ ತನ್ನ ಮೇಲಿಟ್ಟಿರುವ ಅಭಿಮಾನದಿಂದ ಸಂತಸಗೊಂಡು ವಿಷ್ಣುವನ್ನು ಲಕ್ಷ್ಮೀದೇವಿಯೊಂದಿಗೆ ಕಳುಹಿಸಿಕೊಡುತ್ತಾನೆ. ರಕ್ಷ ಬಂಧನದ ಕುರಿತಾಗಿ ಇಂತಹ ಸಾಕಷ್ಟು ಕಥೆಗಳು ಪ್ರಚಲಿತದಲ್ಲಿವೆ.
ಸವಿತಾ ರೈ ನಾರಂಪಾಡಿ, ವಿದ್ಯಾರ್ಥಿನಿ, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.