ತೊಡಿಕಾನ-ಪಟ್ಟಿ ರಸ್ತೆ ದುರಸ್ತಿ ಆರಂಭಿಸಿ: ಬೋಪಯ್ಯ
Team Udayavani, Aug 26, 2018, 12:45 PM IST
ಅರಂತೋಡು: ತೊಡಿಕಾನ- ಪಟ್ಟಿ – ಕರಿಕೆ ರಸ್ತೆಯ ಮೂಲಕ ಕೊಡಗಿಗೆ ಸಂಪರ್ಕ ಕಲ್ಪಿಸಲು ರವಿವಾರದಿಂದಲೇ ಊರವರು ಶ್ರಮದಾನದ ಮೂಲಕ ಕೆಲಸ ಆರಂಭಿಸುವಂತೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದ್ದಾರೆ.
ಜೋಡುಪಾಲ ನಿರಾಶ್ರಿತರ ಅರಂತೋಡು, ಸಂಪಾಜೆ ಸಹಾಯ ಕೇಂದ್ರಕ್ಕೆ ಶಾಸಕ ಕೆ.ಜಿ. ಬೋಪಯ್ಯ ಆಗಮಿಸಿದ ಸಂದರ್ಭದಲ್ಲಿ ತೊಡಿಕಾನ -ಪಟ್ಟಿ ರಸ್ತೆ ದುರಸ್ತಿಯನ್ನು ಶ್ರಮದಾನದಿಂದ ಮಾಡುತ್ತೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಸಮಸ್ಯೆ ಮಾಡಬಾರದು ಎಂದು ಗ್ರಾಮಸ್ಥರು ಮನವಿ ಮಾಡಿದ್ದರು. ಅದರಂತೆ ಕೊಡಗಿನ ಡಿ.ಎಫ್ .ಒ. ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರು, ನಾಳೆಯಿಂದಲೇ ರಸ್ತೆ ದುರಸ್ತಿ ಆರಂಭ ಮಾಡಬಹುದು ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ರಸ್ತೆ ವೀಕ್ಷಣೆ ಮಾಡುವಂತೆ ಕೊಡಗು ಜಿ.ಪಂ. ಸಿಇಒ ಪ್ರಶಾಂತ್ ಮಿಶ್ರಾ ಅವರಿಗೂ ಸೂಚಿಸಿದರು.
ಕೃಷಿಕ ವಸಂತ್ ತೊಡಿಕಾನ ಅವರು, ತೊಡಿಕಾನ- ಪಟ್ಟಿ -ಕರಿಕೆ ಸಂಪರ್ಕ ರಸ್ತೆ ಸುಳ್ಯ ತಾಲೂಕು ಕೇಂದ್ರದಿಂದ ಅತೀ ಹತ್ತಿರದ ಹಾದಿ. ತೊಡಿಕಾನದಿಂದ ಕೇವಲ 18 ಕಿ.ಮೀ. ಅಂತರದಲ್ಲಿ ಕೊಡಗಿನ ಭಾಗಮಂಡಲವನ್ನು ತಲುಪಬಹುದು. ಲಘು ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದು. ಜನರ ಶ್ರಮ, ಇಂದನ ಹಾಗೂ ಸಮಯವೂ ಉಳಿತಾಯ ಆಗುತ್ತದೆ ಎಂದು ಹೇಳಿದರು.
ನಿರಾಶ್ರಿತರು ತಮ್ಮ ಸಮಸ್ಯೆ ಹೇಳಿಕೊಂಡಾಗ, ಯಾವುದೇ ಕಾರಣಕ್ಕೂ ಆತಂಕ ಗೊಳ್ಳ ಬೇಡಿ. ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಕೃಷ್ಣಮೂರ್ತಿ, ಸುಳ್ಯ ತಹಶೀಲ್ದಾರ್ ಕುಂಞಮ್ಮ, ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.