ಖರ್ಚು-ವೆಚ್ಚ ಲೆಕ್ಕ ಪತ್ರ ಸಲ್ಲಿಕೆ ಕಡ್ದಾಯ
Team Udayavani, Aug 26, 2018, 5:36 PM IST
ನರೇಗಲ್ಲ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಿದ ಪ್ರತಿಯೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿದ ದಿನದಿಂದ ಫಲಿತಾಂಶ ಘೋಷಣೆಯ ದಿನಾಂಕದವರೆಗೆ ಮಾಡಲಾದ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ವಿವರ ನೀಡುವುದು ಕಡ್ಡಾಯವಾಗಿದೆ. ಖರ್ಚು ವೆಚ್ಚ ನೀಡದ ಪಕ್ಷದಲ್ಲಿ ಸದಸ್ಯತ್ವವನ್ನು ಅನರ್ಹಗೊಳಿಸುವ ಸಾಧ್ಯತೆ ಇದೆ ಎಂದು ನರೇಗಲ್ಲ ಪಪಂ ಚುನಾವಣಾಧಿಕಾರಿ ಎಸ್.ಆರ್. ಹೂಗಾರ ತಿಳಿಸಿದರು.
ಸ್ಥಳೀಯ ಪಪಂ ಸಭಾಭವನದಲ್ಲಿ ಶನಿವಾರ ಪಪಂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಏರ್ಪಡಿಸಿದ್ದ ಚುನಾವಣಾ ಖರ್ಚು ವೆಚ್ಚ ದಾಖಲಾತಿ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬ ಅಭ್ಯರ್ಥಿಯು ಕಡ್ಡಾಯವಾಗಿ ದೈನಂದಿನ ಚುನಾವಣಾ ಖರ್ಚು ವೆಚ್ಚಗಳನ್ನು ನೀಡಲಾದ ನಮೂನೆಯ ರಜಿಸ್ಟರ್‌ಗಳಲ್ಲಿ ನಿರ್ವಹಿಸತಕ್ಕದ್ದು. ಚುನಾವಣಾ ಫಲಿತಾಂಶ ಘೋಷಣೆಯಾದ 30 ದಿನದೊಳಗೆ ರಿಟರ್ನಿಂಗ್ ಅಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ಚುನಾವಣಾ ಆಯೋಗವು ಸದಸ್ಯತ್ವ ಅನರ್ಹಗೊಳಿಸುವ ಸಾಧ್ಯತೆ ಇರುತ್ತದೆ ಎಂದರು.
ಚುಣಾವಣಾಧಿಕಾರಿ ಡಿ.ಐ. ಅಸುಂಡಿ ಮಾತನಾಡಿ, ಸರ್ವಜನಿಕ ಸಭೆ, ಮೆರವಣಿಗೆ ಹಾಗೂ ಪ್ರಚಾರದ ಕರಪತ್ರ, ಆಡಿಯೋ ಮತ್ತು ವಿಡಿಯೋ ಕ್ಯಾಸೆಟ್‌ಗಳು, ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡವುದು ಸೇರಿದಂತೆ ಇತರೆ ಚುನಾವಣಾ ಖರ್ಚುವೆಚ್ಚಗಳಿಗೆ ರಾಜ್ಯ ಚುನಾವಣಾ ಆಯೋಗವು ದರ ನಿಗದಿ ಮಾಡಿದೆ. ಪಪಂ ಅಭ್ಯರ್ಥಿಗಳು ಒಂದು ಲಕ್ಷ ರೂ.ಗಳ ಮಿತಿ ನೀಡಲಾಗಿದೆ. ಎಲ್ಲ ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚದ ಮೇಲೆ ಆಯೋಗದ ಅಧಿಕಾರಿಗಳ ಕಣ್ಗಾವಲು ಇರುತ್ತದೆ. ರಾಜ್ಯ ಚುನಾವಣಾ ಅಯೋಗ ತಿಳಿಸಿರುವ ಮಾದರಿ ನೀತಿ ಸಂಹಿತೆಯ ಅಡಿಯಲ್ಲಿ ಚುನಾವಣೆ ನಡೆಸಬೇಕು ಎಂದರು.
ಪಪಂಗೆ ಸ್ಪರ್ಧಿಸಿರುವ 52 ಅಭ್ಯರ್ಥಿಗಳು ಇದ್ದರು. ಸೇಕ್ಟರ್ ಅಧಿಕಾರಿ ಸಂತೋಷ ಪಾಟೀಲ, ಸಹಾಯಕ ಚುನಾವಣಾ ಅಧಿಕಾರಿ ಎಸ್.ಆರ್. ಶಾನಬೋಗ್, ಭಾರತಿ ಮಲ್ಲಾಪುರ, ಚುನಾವಣಾ ಲೆಕ್ಕಪತ್ರ ಅಧಿಕಾರಿ ಸಲ್ಮಾ ಸಂಗ್ರೇಶಕೊಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.