5ಜಿ ನೆಟ್‌ವರ್ಕ್‌ಗಳು ಸುರಕ್ಷಿತವೇ?​


Team Udayavani, Aug 27, 2018, 12:30 AM IST

g.jpg

ಈಗಾಗಲೇ ರೇಡಿಯೇಶನ್‌ನಿಂದಾಗಿ ಆರೋಗ್ಯದ ಮೇಲೆ ದೀರ್ಘ‌ಕಾಲೀನ ಪರಿಣಾಮ ಉಂಟಾಗುತ್ತದೆ ಎಂದು ಹಲವು ವಿಜ್ಞಾನಿಗಳು ದಾಖಲಿಸಿದ್ದಾರೆ. ಅದು ವೈಜ್ಞಾನಿಕವಾಗಿ ಸಾಬೀತೂ ಆಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ, ಇಷ್ಟು ಹಾನಿ ಇದ್ದೂ ಕಾರ್ಪೊರೇಟ್‌ ಲಾಬಿ ನಮ್ಮನ್ನು ಈ ಸೇವೆ ಗಳನ್ನು ಬಳಸುವುದಕ್ಕೆ ಪ್ರೇರೇಪಿಸುತ್ತಲೇ ಇದೆ. ಇನ್ನೊಂದೆಡೆ ಇವುಗಳ ನಿಯಂತ್ರಕ ಏಜೆನ್ಸಿಗಳಂತೂ ಕಾರ್ಪೊರೇಟ್‌ ತಾಳಕ್ಕೆ ತಲೆಯಾಡಿಸುತ್ತಲೇ ಇವೆ.

ಜಗತ್ತು ಈ 4ಜಿ ವೇಗಕ್ಕೆ ಹೊಂದಿಕೊಂಡುಬಿಟ್ಟಿದೆ. ನಾವು ಈಗಾಗಲೇ 5ಜಿ ವೇಗ ಎದುರು ನೋಡುತ್ತಿದ್ದೇವೆ. 3ಜಿ ಇಂದ 4ಜಿಗೆ ಅಪ್‌ಗ್ರೇಡ್ ಆದಾಗ ನೆಟ್‌ವರ್ಕ್‌ನ ವೇಗ ಕೊಡುತ್ತಿದ್ದ ಖುಷಿ ಈಗಿಲ್ಲ. ಕೆಲವೊಮ್ಮೆ ಯೂಟ್ಯೂಬ್‌ನಲ್ಲಿ 1080 ಪಿಕ್ಸೆಲ್‌ನ ವೀಡಿಯೋ ನೋಡುವಾಗಲೂ 4ಜಿ ವೇಗ ಕಡಿಮೆ ಎನಿಸುತ್ತದೆ. ತಂತ್ರಜ್ಞಾನ ಕೊಡುವ ಈ ವೇಗಕ್ಕೆ ನಾವು ಥ್ರಿಲ್‌ ಆಗಿದ್ದೇವೆ. ಆದರೆ ಈ ರೋಮಾಂಚನಗಳ ಮಧ್ಯೆ ಒಂದು ಮಾತನ್ನು ಮರೆತೇ ಬಿಟ್ಟಿದ್ದೇವೆ. ಆರೋಗ್ಯ!

ಮೊಬೈಲ್‌ ನೆಟ್‌ವರ್ಕ್‌ಗಳು ಗಲ್ಲಿಗಲ್ಲಿಯಲ್ಲೂ ಮನೆಗಳ ಮೇಲೆ ತಲೆಯೆತ್ತಿದಾಗ ರೇಡಿಯೇಶನ್‌ನಿಂದ ನಮ್ಮ ತಲೆಯೇ ತಿರುಗಿದಂತೆ ಆಗಲು ಶುರುವಾಗಿತ್ತು. ಮೊಬೈಲ್‌ ನೆಟ್‌ವರ್ಕ್‌ಗಳು ಬಳಸುವ ತರಂಗಾಂತರಗಳಿಂದಾಗಿ ಹಲವರಿಗೆ ಆರೋಗ್ಯ ಸಮಸ್ಯೆ ಕಾಡಲು ಆರಂಭವಾಗಿತ್ತು. ಇದಕ್ಕಾಗಿ ಎಲ್ಲ ದೇಶಗಳೂ ನೀತಿ ರೂಪಿಸಿದವು. ಟವರ್‌ಗಳನ್ನು ಸಿಕ್ಕ ಸಿಕ್ಕಲ್ಲಿ ಸ್ಥಾಪಿಸಬಾರದು ಎಂಬ ಕಾರಣಕ್ಕೆ ಮುನಿಸಿಪಾಲಿಟಿಗಳು ನಿಗದಿತ ನಿಯಮಾವಳಿ ಹೊರಡಿಸಿದವು. ಆದರೆ 5ಜಿ ವಿಚಾರದಲ್ಲಿ ಹಾಗಾಗುತ್ತಿಲ್ಲ.

5ಜಿ ಜಾರಿಗೆ ತಂದೇ ಬಿಡಬೇಕು ಎಂಬ ಉತ್ಸಾಹ, ಹುಮ್ಮಸ್ಸು ಎಲ್ಲ ಟೆಲಿಕಾಂ ಕಂಪನಿಗಳು ಹಾಗೂ ಸರ್ಕಾರಗಳಲ್ಲಿದೆ. ಆದರೆ 
ಈ 5ಜಿ ನೆಟ್‌ವರ್ಕ್‌ನಿಂದಾಗಿ ಮನುಷ್ಯನ ಮೇಲೆ ಉಂಟಾಗ ಬಹುದಾದ ಪರಿಣಾಮದ ಬಗ್ಗೆ ಇನ್ನೂ ಸ್ಪಷ್ಟ ಅಧ್ಯಯನವೇ ನಡೆದಿಲ್ಲ. ಈಗಾಗಲೇ ಭಾರತವೂ ಸೇರಿದಂತೆ ಬಹುತೇಕ ದೇಶಗಳು 5ಜಿ ನೆಟ್‌ವರ್ಕ್‌ ಪ್ರಾಯೋಗಿಕ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿವೆ. 2020ರ ವೇಳೆಗೆ ಬಹುತೇಕ ಅಭಿವೃದ್ಧಿಗೊಂಡ ಹಾಗೂ ಅಭಿವೃದ್ಧಿಗೊಳ್ಳುತ್ತಿರುವ ದೇಶಗಳಲ್ಲಿ 5ಜಿ ಜನಸಾಮಾನ್ಯರ ಬಳಕೆಗೆ ಲಭ್ಯವಿರುತ್ತದೆ.

5ಜಿ ಸುರಕ್ಷಿತವೇ ಅಥವಾ ಅಪಾಯವೇ ಎಂಬುದನ್ನು ನೋಡುವುದಕ್ಕೂ ಮೊದಲು ನಾವು 5ಜಿ ಹೇಗೆ ಕೆಲಸ ಮಾಡುತ್ತದೆ ಎಂದು ಗಮನಿಸಬೇಕು. ಇದು ಈಗಿರುವ 4ಜಿ ನೆಟ್‌ವರ್ಕ್‌ಗಿಂತ ಸ್ವಲ್ಪ ಭಿನ್ನ. 10 ರಿಂದ 100 ಪಟ್ಟು ಹೆಚ್ಚು ವೇಗದಲ್ಲಿ ಡೇಟಾ ವರ್ಗಾವಣೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ. ಅಷ್ಟೇ ಅಲ್ಲ, ಪ್ರತಿಕ್ರಿಯೆ ನೀಡುವ ವೇಗವೂ ಹೆಚ್ಚು. ಅಂದರೆ ನಾವು ಯಾವುದೋ ಒಂದು ವೆಬ್‌ಸೈಟ್‌ ವಿಳಾಸವನ್ನು ಬ್ರೌಸರ್‌ನ ಯುಆರ್‌ಎಲ್‌ ಬಾರ್‌ನಲ್ಲಿ ಟೈಪ್‌ ಮಾಡಿ ಎಂಟರ್‌ ಒತ್ತಿದರೆ, ಆ ಪುಟ ತೆರೆಯಲು ತೆಗೆದುಕೊಳ್ಳುವ ಸಮಯ ಅತ್ಯಂತ ಕಡಿಮೆ. ಇದಕ್ಕಿಂತ ಮಹತ್ವದ ಮತ್ತೂಂದು ಸಂಗತಿಯೆಂದರೆ 5ಜಿ ನೆಟ್‌ವರ್ಕ್‌ ಸುಲಭವಾಗಿ ವಿವಿಧ ಅಪ್ಲಿಕೇಶನ್‌ಗಳ ಜೊತೆ ಸಂವಹನವನ್ನು ನಡೆಸುತ್ತದೆ. ಇದನ್ನು ಇಂಟರ್ನೆಟ್‌ ಆಫ್ ದಿ ಥಿಂಗ್ಸ್‌ ಎಂದು ಸಾಮಾನ್ಯವಾಗಿ ಕರೆಯುತ್ತೇವೆ. ಅಂದರೆ ನಮ್ಮ ಮೊಬೈಲ್‌ನಿಂದ ಮನೆಯಲ್ಲಿರುವ ದೀಪಗಳು, ಮೈಕ್ರೋವೇವ್‌ ಓವನ್‌, ಕಾರು, ಸ್ಮಾರ್ಟ್‌ ಸ್ಪೀಕರುಗಳು, ಟಿವಿ ಸೇರಿದಂತೆ ಇಂಟರ್‌ನೆಟ್‌ಗೆ ಕನೆಕ್ಟ್ ಆದ ಪ್ರತಿಯೊಂದು ಸಾಧನವನ್ನೂ ನಿರ್ವಹಿಸುವುದು ಸುಲಭ. ಒಂದು ಅಂದಾಜಿನ ಪ್ರಕಾರ 2020ರ ವೇಳೆಗೆ ಜಗತ್ತಿನಲ್ಲಿ ಸುಮಾರು 3 ಸಾವಿರ ಕೋಟಿ ನಿಶ್ಚಲ, ಜಡ ವಸ್ತುಗಳಿಗೆ ಮಾತು ಬರುತ್ತವೆ. ಅಂದರೆ ಈ ವಸ್ತುಗಳನ್ನು ಇಂಟರ್‌ನೆಟ್‌ಗೆ ಸಂಪರ್ಕಿಸಿ, ಸಂವಹನ ನಡೆಸಲು ಸಮರ್ಥಗೊಳಿಸಲಾಗುತ್ತದೆ. ನಂತರದ ಇನ್ನೊಂದು ಐದು ವರ್ಷದಲ್ಲಿ ಈ ವಸ್ತುಗಳ ಸಂಖ್ಯೆ 7 ಸಾವಿರ ಕೋಟಿ ಆಗಲಿದೆಯಂತೆ! ಇದು ನಾವು ಯಾವ ಮಟ್ಟಿಗೆ ಇಂಟರ್‌ನೆಟ್‌ಗೆ ಅಡಿಕ್ಟ್ ಆಗಿದ್ದೇವೆ ಎಂಬುದರ ಒಂದು ಸೂಚಕವಷ್ಟೇ.

ಸಾಮಾನ್ಯವಾಗಿ ಪ್ರತಿ ಜನರೇಶನ್‌ ಟೆಕ್ನಾಲಜಿಗೂ ಒಂದೊಂದು ಫ್ರೀಕ್ವೆನ್ಸಿಯನ್ನು ನಿಗದಿಸಲಾಗಿದೆ. ಈಗಾಗಲೇ 4ಜಿಗೆ 300 ಮೆಗಾಹರ್ಟ್ಸ್ನಿಂದ 3 ಗಿಗಾಹರ್ಟ್ಸ್ ತನಕದ ಫ್ರೀಕ್ವೆನ್ಸಿ ನಿಗದಿಪಡಿಸಲಾಗಿದೆ. ಅಂದರೆ ನಮ್ಮ ಸಮೀಪದಲ್ಲಿರುವ ಒಂದು ಟವರ್‌ ಈ ತರಂಗಾಂತರಗಳ ಸರಣಿಯಲ್ಲಿ ಯಾವುದೋ ಒಂದರಲ್ಲಿ ನಮ್ಮ ಮೊಬೈಲ್‌ಗೆ ಅಗತ್ಯ ಸಂಕೇತಗಳನ್ನು ಸಂವಹನ ನಡೆಸುತ್ತದೆ. ಅದನ್ನು ನಮ್ಮ ಮೊಬೈಲ್‌ ಗ್ರಹಿಸಿ, ಡೇಟಾ ವಿನಿಮಯ ಮಾಡುತ್ತದೆ. ಇದೇ ರೀತಿ 5ಜಿಗೆ 30 ಗಿಗಾಹರ್ಟ್ಸ್ನಿಂದ 300 ಗಿಗಾಹರ್ಟ್ಸ್ ವರೆಗಿನ ತರಂಗಾಂತರ ನಿಗದಿಸಲಾಗಿದೆ. ಇದನ್ನು ಮಿಲಿಮೀಟರ್‌ ಅಲೆಗಳು ಎಂದು ಕರೆಯಲಾಗುತ್ತದೆ. ಆದರೆ ಇದರ ದೊಡ್ಡ ಸಮಸ್ಯೆಯೆಂದರೆ ಅಲೆಗಳ ಫ್ರೀಕ್ವೆನ್ಸಿ ಹೆಚ್ಚಿದಷ್ಟೂ ಅವು ಸಾಗುವ ದೂರ ಕಡಿಮೆಯಾಗುತ್ತದೆ. ಮಿಲಿಮೀಟರ್‌ ಅಲೆಗಳು ಕಟ್ಟಡಗಳ ಗೋಡೆಗಳನ್ನು ದಾಟಲಾರವು. ಮರಗಳು ಹಾಗೂ ಭೂಮಿ ಕೂಡ ಈ ಫ್ರಿಕ್ವೆನ್ಸಿಗಳನ್ನೂ ಗ್ರಹಿಸಿಬಿಡುತ್ತವೆ. ಅಷ್ಟೇ ಏಕೆ, ನಮ್ಮ ಮೈ ಮೇಲಿನ ಚರ್ಮ ಕೂಡ ಈ ಫ್ರೀಕ್ವೆನ್ಸಿಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತವೆ. ಹೆಚ್ಚು ದೂರಕ್ಕೆ ಅಲೆಗಳು ಸಾಗದೇ ಇರುವು ದರಿಂದ ಟವರ್‌ಗಳ ಸಂಖ್ಯೆ ಹೆಚ್ಚಲೇ ಬೇಕಾಯಿತು.

ಸದ್ಯ 3ಜಿ ಇಂದ 4ಜಿಗೆ ಟೆಲಿಕಾಂ ಕಂಪನಿಗಳು ಅಪ್‌ಗ್ರೇಡ್ ಆಗಲು ಕೇವಲ ಟವರ್‌ಗಳಲ್ಲಿರುವ ಟ್ರಾನ್ಸ್‌ಮೀಟರುಗಳನ್ನಷ್ಟೇ ಬದಲಿಸಿದ್ದವು. ಆದರೆ 5ಜಿ ಟೆಕ್ನಾಲಜಿಗೆ ಅಪ್‌ಗ್ರೇಡ್ ಆಗುವುದಿದ್ದರೆ ಟ್ರಾನ್ಸ್‌ಮೀಟರ್‌ಗಳನ್ನು ಬದಲಿಸಿದರೆ ಸಾಲದು. ಬದಲಿಗೆ ಇನ್ನಷ್ಟು ಸಣ್ಣ ಸಣ್ಣ ಟವರುಗಳನ್ನೂ ನಿರ್ಮಿಸಬೇಕಾಗುತ್ತದೆ. ಇವುಗಳನ್ನು ಸ್ಮಾಲ್‌ ಸೆಲ್‌ಗ‌ಳು ಎಂದು ಕರೆಯಲಾಗಿದೆ. ಇವು ಟವರ್‌ಗಳಂತೆ ಆಕಾಶದೆತ್ತರದಲ್ಲಿ ಇರುವುದಿಲ್ಲ. ಬದಲಿಗೆ ಮನೆಗಳ ಮೇಲೆ ಎತ್ತರದ ಕಟ್ಟಡಗಳ ಮೇಲೆ ಸ್ಥಾಪಿಸುವ ಸಣ್ಣ ಆ್ಯಂಟೆನಾಗಳು. ಇದರಲ್ಲೂ ಹಲವು ವಿಧದ ಸೆಲ್‌ಗ‌ಳಿವೆ. ಕೆಲವು ಕೇವಲ 10 ಮೀಟರುಗಳಷ್ಟು ದೂರಕ್ಕೆ ಸಂಕೇತಗಳನ್ನು ಸಾಗಿಸ ಬಹುದಾದರೆ ಇನ್ನು ಕೆಲವು 2 ಕಿ.ಮೀವರೆಗೂ ಸಂಕೇತಗಳನ್ನು ಸಾಗಿಸಬಹುದು. ಎಷ್ಟೇ ಆದರೂ, ಕನಿಷ್ಠ 10 ರಿಂದ 12 ಮನೆಗಳಿಗೆ ಒಂದು ಸೆಲ್‌ ಬೇಕೇ ಬೇಕು.

ಇದರರ್ಥ ನೀವು ಇಷ್ಟು ದಿನ 4ಜಿ ಟವರ್‌ಗಳಿಂದ ತಲೆ ತಪ್ಪಿಸಿಕೊಂಡಿದ್ದಿರಿ. ಆದರೆ ಇನ್ನು ಹಾಗಾಗಲು ಸಾಧ್ಯವಿಲ್ಲ. ಹೊರಗೆ ಕಾಲಿಟ್ಟರೆ ಸಾಕು ನಮ್ಮ ತಲೆಯೆತ್ತರದಲ್ಲೇ ಒಂದು  ಟವರ್‌ ನಮಗೆ ಕನೆಕ್ಟ್ ಆಗುತ್ತದೆ.  ಈ ರೇಡಿಯೇಶನ್‌ನಿಂದ  ನಾವು ತಪ್ಪಿಸಿಕೊಳ್ಳಲು ಅಸಾಧ್ಯ ಎನ್ನುವ ಮಟ್ಟಕ್ಕೆ ತಲುಪುತ್ತೇವೆ.
 
ಈಗಾಗಲೇ ರೇಡಿಯೇಶನ್‌ನಿಂದಾಗಿ ಆರೋಗ್ಯದ ಮೇಲೆ ದೀರ್ಘ‌ಕಾಲೀನ ಪರಿಣಾಮ ಉಂಟಾಗುತ್ತದೆ ಎಂದು ಹಲವು ವಿಜ್ಞಾನಿಗಳು ದಾಖಲಿಸಿದ್ದಾರೆ. ಅದು ವೈಜ್ಞಾನಿಕವಾಗಿ ಸಾಬೀತೂ ಆಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ, ಇಷ್ಟು ಹಾನಿ ಇದ್ದೂ ಕಾರ್ಪೊರೇಟ್‌ ಲಾಬಿ ನಮ್ಮನ್ನು ಈ ಸೇವೆ ಗಳನ್ನು ಬಳಸುವುದಕ್ಕೆ ಪ್ರೇರೇಪಿಸುತ್ತಲೇ ಇದೆ. ಇನ್ನೊಂದೆಡೆ ಇವುಗಳನ್ನು ನಿಯಂತ್ರಿಸುವ ನಿಯಂತ್ರಕ ಏಜೆನ್ಸಿಗಳಂತೂ ಕಾರ್ಪೊರೇಟ್‌ ತಾಳಕ್ಕೆ ತಲೆಯಾಡಿಸುತ್ತಲೇ ಇವೆ. ಹೀಗಾಗಿ ಈವರೆಗೂ 5ಜಿ ಇಂದ ಉಂಟಾಗಬಹುದಾದ ಆರೋಗ್ಯದ ಮೇಲಿನ ಪರಿಣಾಮಗಳ ಸಮಗ್ರ ಅಧ್ಯಯನ ನಡೆದೇ ಇಲ್ಲ. ಈಗಾಗಲೇ ಸಣ್ಣ ಪ್ರಮಾಣದಲ್ಲಿ ಕೆಲವು ಅಧ್ಯಯನಗಳು ನಡೆದಿವೆ ಯಾದರೂ, ಅವು ಯಾವುವೂ ಗಂಭೀರ ಮಟ್ಟದಲ್ಲಿ ನಡೆದಿಲ್ಲ.

ಈ ಎಲೆಕ್ಟ್ರಿಕ್‌ ಮತ್ತು ಮ್ಯಾಗ್ನೆಟಿಕ್‌ ಫೀಲ್ಡ್‌ ರೇಡಿಯೇಶನ್‌ (ಇಎಂಎಫ್) ಬಗ್ಗೆ ಆಧುನಿಕ ವಿಜ್ಞಾನ ನಮ್ಮಿಂದ ಮುಚ್ಚಿಟ್ಟ ಸಂಗತಿಗಳೇ  ಹೆಚ್ಚು. ಇಎಂಎಫ್ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಕೆಲವು ಅಂಶಗಳನ್ನು ಕಡೆಗಣಿಸಲಾಗಿದೆ. ರೇಡಿಯೇಶನ್‌ ಹೆಚ್ಚಿದ್ದಾಗ ನಮ್ಮ ದೇಹದಲ್ಲಿನ ಅಂಗಾಂಶ ಬಿಸಿಯಾಗುತ್ತದೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಆದರೆ ಕಡಿಮೆ ಪ್ರಮಾಣದ ರೇಡಿಯೇಶನ್‌ಗೆ ದೀರ್ಘ‌ಕಾಲದಲ್ಲಿ ತೆರೆದುಕೊಂಡಾಗ ಉಂಟಾಗಬಹುದಾದ ಅಪಾಯಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲ. ನಮ್ಮ ಲ್ಯಾಪ್‌ಟಾಪ್‌ಗ್ಳನ್ನು ನಮ್ಮ ದೇಹದಿಂದ ಕನಿಷ್ಠ 8 ಇಂಚುಗಳಷ್ಟು ದೂರದಲ್ಲಿಟ್ಟು ಕೆಲಸ ಮಾಡಬೇಕು ಎಂದು ಯಾರೂ ಹೇಳುವುದೂ ಇಲ್ಲ, ಹೇಳಿದರೂ ಅದನ್ನು ನಾವು ಕಡೆಗಣಿಸಿ ಕಾಲಮೇಲೆಯೇ ಇಟ್ಟು ಕೆಲಸ ಮಾಡುತ್ತಿರುತ್ತೇವೆ.

ಈ 5ಜಿ ಬಗ್ಗೆಯೂ ಈಗಾಗಲೇ ಹಲವು ವಿಜ್ಞಾನಿಗಳು ಮತ್ತು ವೈದ್ಯ ಸಂಘಟನೆಗಳು ಎಚ್ಚರಿಕೆ ನೀಡಿವೆ. ಕಳೆದ ವರ್ಷ 180 ವೈದ್ಯರು ಮತ್ತು ವಿಜ್ಞಾನಿಗಳು ಐರೋಪ್ಯ ಒಕ್ಕೂಟಕ್ಕೆ ಪತ್ರ ಬರೆದು, 5ಜಿ ಟೆಕ್ನಾಲಜಿಯಿಂದಾಗಬಹುದಾದ ಅಪಾಯ ಮತ್ತು ಅನಾಹುತಗಳ ಸಮಗ್ರ ಸಂಶೋಧನೆ ನಡೆಸಬೇಕು ಎಂದು ಆಗ್ರಹಿಸಿವೆ. ಮಿಲಿಮೀಟರ್‌ ವೇವ್‌ ಬಗ್ಗೆ ಈಗಾಗಲೇ ಎಚ್ಚರ ವಹಿಸಲಾಗುತ್ತದೆ. ಯಾಕೆಂದರೆ ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿಲ್ಲ. ವಿಮಾನ ನಿಲ್ದಾಣಗಳು ಹಾಗೂ ಸ್ಕ್ಯಾನರ್‌ಗಳಲ್ಲಿ ಬಳಸುವ ಫ್ರಿಕ್ವೆನ್ಸಿಯು ಮಿಲಿಮೀಟರ ವೇವ್‌ ಆಗಿದ್ದು, ಈಗಾಗಲೇ ಗರ್ಭಿಣಿಯರನ್ನು ಈ ಅಲೆಗಳಿಂದ ದೂರವಿಡಲಾಗುತ್ತದೆ. ಮಿಲಿಮೀಟರ್‌ ವೇವ್‌ಗೂ ಇನ್‌ಫ್ರಾರೆಡ್‌ಗೂ ಹೆಚ್ಚೇನೂ ಅಂತರವಿಲ್ಲ. ಇನ್‌ಫ್ರಾರೆಡ್‌ನಿಂದ ಆಗಬಹುದಾದ ಅನಾಹುತಗಳ ಅರಿವು ನಮಗೆ ಈಗಾಗಲೇ ಇದೆ. ಇನ್‌ಫ್ರಾರೆಡ್‌ ಬಳಕೆಯ ಆರಂಭದ ದಿನಗಳಲ್ಲಿ ಇದರ ಪರಿಣಾಮ ತಿಳಿದಿರಲಿಲ್ಲವಾದರೂ, ನಂತರ ಇದರ ಬಳಕೆಯನ್ನು ಸೀಮಿತಗೊಳಿಸಲಾಗಿದೆ.

ಈ ರೇಡಿಯೇಶನ್‌ ಅಪಾಯಕಾರಿಯೋ ಅನುಕೂಲಕರವೋ… ಆದರೆ ಅದರಿಂದ ನಾವು ಹೊರಬರುವುದು ಅಥವಾ ಅದಕ್ಕೆ ಒಡ್ಡಿಕೊಳ್ಳದೇ ಇರುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇದೆ. ನಮಗೆ ವಿಪರೀತ ವೇಗವಾಗಿ ಸಂವಹನ ನಡೆಸುವ ಸಾಧನಗಳು ಬೇಕು, ಅದರ ಅನುಕೂಲಗಳೂ ಬೇಕು. ಇದಕ್ಕಾಗಿ ಅದರೊಂದಿಗೆ ಬರಬಹುದಾದ ಆರೋಗ್ಯ ಸಮಸ್ಯೆಗಳನ್ನೂ ನಾವು ಎದುರಿಸಲೇಬೇಕು.

– ಕೃಷ್ಣ ಭಟ್‌

ಟಾಪ್ ನ್ಯೂಸ್

Pune: Batter collapses on the field!; Video goes viral

Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!;‌ ವಿಡಿಯೋ ವೈರಲ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು ?

India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Pune: Batter collapses on the field!; Video goes viral

Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!;‌ ವಿಡಿಯೋ ವೈರಲ್

3-alur

Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ

2-hunsur

Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

Sandalwood: ತೆರೆಮೇಲೆ ʼಅನಾಥʼನ ಕನಸು

Sandalwood: ತೆರೆಮೇಲೆ ʼಅನಾಥʼನ ಕನಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.