ಮಾರಾಟಕ್ಕಿದೆ ಆರ್.ಕೆ.ಸ್ಟುಡಿಯೋ
Team Udayavani, Aug 27, 2018, 10:33 AM IST
ಮುಂಬಯಿ: ಹಿಂದಿ ಚಿತ್ರರಂಗಕ್ಕೆ ಹಲವು ಅದ್ದೂರಿ ಮತ್ತು ನೆನಪಿನಲ್ಲಿ ಉಳಿಯಬಹುದಾದ ಸಿನಿಮಾಗಳನ್ನು ನೀಡಿದ ಆರ್.ಕೆ.ಸ್ಟುಡಿಯೋ ಶೀಘ್ರದಲ್ಲೇ ಮಾರಾಟ ಆಗಲಿದೆ. ಈ ಬಗ್ಗೆ ಕಪೂರ್ ಕುಟುಂಬದ ಸದಸ್ಯರು ಮಾತುಕತೆ ನಡೆಸಿ ತೀರ್ಮಾನಿಸಿದ್ದಾರೆ ಎಂದು ಬಾಲಿವುಡ್ ನಟ ರಿಷಿ ಕಪೂರ್ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅದರ ನಿರ್ವಹಣೆಯಿಂದ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ ರಿಷಿ ಕಪೂರ್. ಅದಕ್ಕಾಗಿ ಮಾತುಕತೆ ನಡೆಸುವ ನಿಟ್ಟಿನಲ್ಲಿ ಕಪೂರ್ ಕುಟುಂಬದ ಸದಸ್ಯರು ಮಧ್ಯವರ್ತಿಯನ್ನೂ ನೇಮಿಸಿದ್ದಾರೆ.
ದಿ| ರಾಜ್ಕಪೂರ್ ಮುಂಬೈನ ಚೆಂಬೂರ್ನಲ್ಲಿ 70 ವರ್ಷಗಳ ಹಿಂದೆ ಅಂದರೆ 1948ರಲ್ಲಿ ಅದನ್ನು ಸ್ಥಾಪಿಸಿದ್ದರು. ಇದೇ ಸ್ಟುಡಿಯೋದಲ್ಲಿ ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಭಾರೀ ಪ್ರಮಾಣದ ಅಗ್ನಿ ಅನಾಹುತ ಉಂಟಾಗಿತ್ತು.
“ಆಗ್’, “ಬರ್ಸಾತ್’, “ಶ್ರೀ420′, “ಜಿಸ್ ದೇಶ್ ಮೆ ಗಂಗಾ ಬೆಹಿ¤ ಹೈ’, “ಮೇರಾ ನಾಮ್ ಜೋಕರ್’, “ಬಾಬ್ಬಿ’, “ಸತ್ಯಂ ಶಿವಂ ಸುಂದರಂ’, “ರಾಂ ತೇರಿ ಗಂಗಾ ಮೈಲಿ’ ಸೇರಿದಂತೆ ಹಲವು ಸಿನಿಮಾಗಳು ಆರ್.ಕೆ.ಬ್ಯಾನರ್ ಅಡಿ ನಿರ್ಮಾಣ ಆಗಿದ್ದವು. ಈ ಬ್ಯಾನರ್ ಅಡಿ ನಿರ್ಮಾಣ ಆದ ಕೊನೆಯ ಸಿನಿಮಾ “ಆ ಅಬ್ ಲೌಟ್ ಚಲೇ’. ಬಾಲಿವುಡ್ ನಟ ರಿಷಿ ಕಪೂರ್ ಅದನ್ನು ನಿರ್ಮಿಸಿದ್ದರು. 1988ರಲ್ಲಿ ರಾಜ್ಕಪೂರ್ ನಿಧನರಾದ ಬಳಿಕ ಅವರ ಹಿರಿಯ ಪುತ್ರ ರಣಧೀರ್ ಕಪೂರ್ ಸ್ಟುಡಿಯೋದ ನೇತೃತ್ವ ವಹಿಸಿದ್ದರು. ಇದಾದ ಬಳಿಕ “ಪ್ರೇಮ್ ಗ್ರಂಥ್’ ಸಿನಿಮಾ ನಿರ್ದೇಶಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.