ಚಿನ್ನಾಭರಣ ತಯಾರಿಕೆ ಮೂಲ ಪ್ರಕ್ರಿಯೆ ಹೇಗೆ, ವೇಸ್ಟೇಜ್ ನಷ್ಟ ಎಂದರೇನು?


Team Udayavani, Aug 27, 2018, 11:16 AM IST

gold-process1-600.jpg

ಚಿನ್ನವು ಒಂದು ಲಘು ಲೋಹ; ಆದುದರಿಂದ ಅದು ಆಭರಣ ಉತ್ಪಾದನೆಯ ವಿವಿಧ ಪ್ರಕ್ರಿಯೆಗಳಿಗೆ ಒಳಪಡುವಾಗ ಸಣ್ಣ ಪ್ರಮಾಣದ ನಷ್ಟಕ್ಕೆ ಗುರಿಯಾಗುತ್ತದೆ. ಸಾಂಪ್ರದಾಯಿಕ ವಿಧಾನದ ಚಿನ್ನದ ಶುದ್ಧತೆಯಲ್ಲಿ ಶೇ.2ರಷ್ಟು ವ್ಯತ್ಯಯ ಇರುತ್ತದೆ.

ಹೂಡಿಕೆ ಮತ್ತು ಸೌಂದರ್ಯ ಪರಿಕಲ್ಪನೆಯಲ್ಲಿ  ಚಿನ್ನದ ಮಹತ್ವವನ್ನು ಅರಿತುಕೊಂಡ ಬಳಿಕ ಚಿನ್ನಾಭರಣ ತಯಾರಿಯಲ್ಲಿ ಎದುರಾಗುವ ವೇಸ್ಟೇಜ್ ಬಗ್ಗೆಯೂ ನಾವು ತಿಳಿದುಕೊಳ್ಳುವ ಅಗತ್ಯವಿದೆ. ಅದೆಷ್ಟೋ ಮಂದಿಗೆ ಈ ವೆಸ್ಟೇಜ್ ಎಂದರೇನೆಂಬ ಸರಿಯಾದ ಪರಿಕಲ್ಪನೆ ಇರುವುದಿಲ್ಲ. ಈ ವೇಸ್ಟೇಜ್ ಎಂಬುದೊಂದು ಚಿನ್ನಾಭರಣ ವ್ಯಾಪಾರದಲ್ಲಿ ಅಡಕವಾಗಿರುವ ಅದೇನೋ ಮೋಸ ಎಂಬ ಅನ್ನಿಸಿಕೆಯೇ ಹಲವರಲ್ಲಿ ಇರುವುದು ಸಹಜವೇ ಆಗಿದೆ. ನಾವು ಖರೀದಿಸಿದಾಗ ಇದ್ದ ಚಿನ್ನಾಭರಣದ ಮೌಲ್ಯ ಅದನ್ನು ಮಾರುವಾಗ ಇರುವುದಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. 

ಚಿನ್ನದ ಬಹಳ ಸುಂದರವಾದ ನೆಕ್ಲೇಸ್ ನಾವು ಖರೀದಿಸುವಾಗ 70,000 ರೂ. ಬೆಲೆ ಇದ್ದರೆ ಅನಂತರದಲ್ಲಿ ಅದನ್ನು ಮಾರುವಾಗ ನಮಗೆ ವೇಸ್ಟೇಜ್, ಮಜೂರಿ ಇತ್ಯಾದಿಗಳ ಮೌಲ್ಯ ನಷ್ಟವಾಗುತ್ತದೆ. ಇದು ಸಹಜವೇ ಆಗಿರುತ್ತದೆ. ಏಕೆಂದರೆ ಅಪ್ಪಟ ಚಿನ್ನಕ್ಕೆ  ನಮಗೆ ಬೇಕಾದ ವಿನ್ಯಾಸದಲ್ಲಿ ಆಭರಣದ ರೂಪವನ್ನು ಕೊಡುವಾಗ ಅದು ಕುಶಲ ಕರ್ಮಿಯ ಕೈಯಲ್ಲಿ ವಿವಿಧ ಪ್ರಕ್ರಿಯೆಗಳಿಗೆ ಗುರಿಯಾಗುತ್ತದೆ. 

ಆದುದರಿಂದಲೇ ಕುಶಲ ಕರ್ಮಿಯ ಮಜೂರಿಯನ್ನು ನಾವು ತೆರಲೇಬೇಕಾಗುತ್ತದೆ. ಹಾಗೆಯೇ ಚಿನ್ನಕ್ಕೆ ಇತರ ಬಗೆಯ ಲೋಹವನ್ನು ಸೇರಿಸದೇ ಆಭರಣ ಮಾಡುವುದು ಸಾಧ್ಯವಿಲ್ಲ. ಯಾವುದೇ ಚಿನ್ನಾಭರಣವನ್ನು ನಾವು ಕಾಲಕ್ರಮದಲ್ಲಿ ಮಾರಲು ಮುಂದಾದಾಗ ನಮಗೆ ಸಿಗುವುದು ಕೇವಲ ಚಿನ್ನದ ಅಂಶಕ್ಕಿರುವ ಮೌಲ್ಯ ಮಾತ್ರ. ಅದರಲ್ಲಿ ಬೆರೆತಿರುವ ಇತರ ಬಗೆಯ ಲೋಹಾಂಶ ಸಹಜವಾಗಿಯೇ ಮೌಲ್ಯರಹಿತವಾಗಿರುತ್ತದೆ !

ಈ ಎಲ್ಲ ಪ್ರಕ್ರಿಯೆಗಳನ್ನು ಕೂಲಂಕಷವಾಗಿ ತಿಳಿಯಲು ನಾವು ಚಿನ್ನಾಭರಣ ತಯಾರಿ ಪ್ರಕ್ರಿಯೆಯತ್ತ ಒಂದು ನೋಟ ಹರಿಸುವುದು ಒಳಿತು. ಆ ಪ್ರಕ್ರಿಯೆಯನ್ನು ನಾವು ಈ ಕೆಳಗಿನಿಂದ ಗುರುತಿಸಬಹುದು : 

ಚಿನ್ನಾಭರಣ ತಯಾರಿಕೆ ಮೂಲ ಪ್ರಕ್ರಿಯೆಗಳು :

1. ವಯರ್ ಮೇಕಿಂಗ್
2. ಶೀಟ್ ಮೇಕಿಂಗ್
3. ಸೋಲ್ಡರಿಂಗ್
4. ಡೈಸ್ ಮತ್ತು ಪ್ರಸ್ಸಸ್ (ಅಚ್ಚು ಮತ್ತು ಒತ್ತು)
5. ಕಾರ್ವಿಂಗ್ 
6. ಎನ್‌ ಗ್ರೇವಿಂಗ್‌
7. ಪಾಲಿಶಿಂಗ್
8. ಪ್ಲೇಟಿಂಗ್

ವಿವಿಧ ಬಗೆಯ ಉತ್ಪಾದನಾ ಪ್ರಕ್ರಿಯೆಗಳು : 

* ಈ ಪ್ರಕ್ರಿಯೆಯಲ್ಲಿ ಹಳೇ ಚಿನ್ನಾಭರಣವನ್ನು ಸಂಸ್ಕರಿಸಿ ಶುದ್ಧ ಚಿನ್ನ ಮತ್ತು ಅದರ ಮಿಶ್ರ ಲೋಹವನ್ನು ಪ್ರತ್ಯೇಕಿಸಲಾಗುತ್ತದೆ.

* ಇದನ್ನು ಅಕ್ವಾ ರೆಜಿಯಾ ಪ್ರೋಸೆಸ್ ಎಂದು ಕರೆಯುತ್ತಾರೆ.

ಕರಗಿಸುವಿಕೆ ಎಂದರೇನು ? ಏಕೆ ? ಹೇಗೆ ?

*  ಪರಿಶುದ್ಧ ಚಿನ್ನವನ್ನು ಅದಕ್ಕೆ ತಕ್ಕುದಾದ ಪ್ರಮಾಣದ ತಾಮ್ರ ಮತ್ತು ಬೆಳ್ಳಿಯೊಂದಿಗೆ ಕುಲುಮೆಯಲ್ಲಿ ಕರಗಿಸಲಾಗುತ್ತದೆ. ಸಾಂಪ್ರದಾಯಿಕ ಕುಲುಮೆಯಲ್ಲಿ ಉಷ್ಣತೆಯು ನಿಯಂತ್ರಿಸಲ್ಪಡುವುದಿಲ್ಲ. ಹಾಗಾಗಿ ಕರಗುವಿಕೆಯ ಕಡಿಮೆ ಉಷ್ಣತೆಯ ಕಾರಣದಿಂದಾಗಿ ತಾಮ್ರವು ಬರ್ನ್ ಔಟ್ ಆಗುತ್ತದೆ ಮತ್ತು ಕರಗಿಸಲ್ಪಟ್ಟ ಚಿನ್ನದ ಮಿಶ್ರಣವು ಏಕಪ್ರಕಾರದಲ್ಲಿ ಇರುವುದಿಲ್ಲ.

* ಆದುದರಿಂದ ಚಿನ್ನ ಕರಗಿಸಲು ಇಂಡಕ್ಷನ್ ಮೆಲ್ಟಿಂಗ್ ಮಶೀನ್ ಬಳಸುತ್ತಾರೆ. ಈ ವಿಧಾನದಲ್ಲಿ ಏಕಪ್ರಕಾರದ ಮಿಶ್ರಣವು ಸಾಧ್ಯವಾಗುತ್ತದೆ.

* ಇದರ ಅರ್ಥವೇನೆಂದರೆ ಚಿನ್ನದ ಯಾವುದೇ ಭಾಗವನ್ನು ಎಕ್ಸ್ ರೇ ಮಶೀನ್ನಲ್ಲಿ  ಪರೀಕ್ಷೆಗೆ ಒಳಪಡಿಸಿದಾಗ ಅದರ ಪರಿಶುದ್ಧತೆಯ ಫಲಿತಾಂಶ ಏಕರೂಪದಲ್ಲಿರುತ್ತದೆ. 

* ಸಾಂಪ್ರದಾಯಿಕ ವಿಧಾನದಲ್ಲಿ ಚಿನ್ನದ ಶುದ್ಧತೆಯಲ್ಲಿ   ಶೇ.2ರಷ್ಟು ವ್ಯತ್ಯಯ ಇರುತ್ತದೆ.

* ಚಿನ್ನವು ಒಂದು ಲಘು ಲೋಹ; ಆದುದರಿಂದ ಅದು ಆಭರಣ ಉತ್ಪಾದನೆಯ ವಿವಿಧ ಪ್ರಕ್ರಿಯೆಗಳಿಗೆ ಒಳಪಡುವಾಗ ಸಣ್ಣ ಪ್ರಮಾಣದ ನಷ್ಟಕ್ಕೆ ಗುರಿಯಾಗುತ್ತದೆ.

* ಆದುದರಿಂದ ಚಿನ್ನದ ಕುಶಲ ಕರ್ಮಿಗಳು ಚಿನ್ನದ ಕಿಂಚಿತ್ ಪ್ರಮಾಣ ಕೂಡ ನಷ್ಟವಾಗದಂತೆ ಕೆಲಸ ಮಾಡುವಾಗ ಬಹಳ ಎಚ್ಚರಿಕೆ ವಹಿಸುತ್ತಾರೆ. ತಮ್ಮ ಬಟ್ಟೆಗಳನ್ನು, ಡ್ರಾವರ್ಗಳನ್ನು, ಕೆಲಸದ ಸುತ್ತ ಮುತ್ತಲಿನ ಜಾಗವನ್ನು ಆಗೀಗ ಎಂಬಂತೆ ಬ್ರಶ್ ಮಾಡುತ್ತಾರೆ.

* ನೂರು ಗ್ರಾಂ ಚಿನ್ನದ ಬಾರನ್ನು ಎರಡಾಗಿ ತುಂಡರಿಸಿ ತೂಕ ಮಾಡಿದಾಗ ಸ್ವಲ್ಪ ಮಟ್ಟಿನ ತೂಕದ ನಷ್ಟ ಉಂಟಾಗಿರುತ್ತದೆ.

* ಇದನ್ನೇ ವೆಸ್ಟೇಜ್ ಎಂದು ಕರೆಯುತ್ತಾರೆ.

*  ದೊಡ್ಡ ದೊಡ್ಡ ಚಿನ್ನಾಭರಣ ವರ್ಕ್ ಶಾಪ್ ಗಳಲ್ಲಿ ದುಡಿಯುವ ಕುಶಲ ಕರ್ಮಿಗಳಿಗೆ ಸಮವಸ್ತ್ರ ಒದಗಿಸಲಾಗುತ್ತದೆ. ವರ್ಕ್ ಶಾಪ್ ಪ್ರವೇಶಿಸುವಾಗ ಮತ್ತು ಹೊರ ಬರುವಾಗ ಅವರು ತಮ್ಮ ಸಮವಸ್ತ್ರವನ್ನು ಅಲ್ಲೇ ತೆಗೆದಿರಿಸಬೇಕಾಗುತ್ತದೆ. 

* ಚಿನ್ನಾಭರಣ ತಯಾರಿಯ ವರ್ಕ್ ಶಾಪ್ ಗಳಲ್ಲಿ ವಿಶೇಷ ಬಗೆಯ ನೆಲಹಾಸನ್ನು ಹಾಕಿರುತ್ತಾರೆ; ಚಿನ್ನದ ಸೂಕ್ಷ್ಮ ಕಣಗಳನ್ನು ಸಂಗ್ರಹಿಸುವುದಕ್ಕೆ ಈ ವಿಶೇಷ ನೆಲ ಹಾಸು ಪೂರಕವಾಗಿರುತ್ತದೆ.

* ಶವರ್ನಿಂದ ಹೊರಬರುವ ನೀರನ್ನು ಕೂಡ ಸಂಗ್ರಹಿಸಿ, ಶೋಧಿಸಿ ನಷ್ಟವಾಗಿರಬಹುದಾದ ಯಾವುದೇ ಪ್ರಮಾಣದ ಚಿನ್ನವನ್ನು ಮರು ಸಂಗ್ರಹಿಸಲಾಗುತ್ತದೆ. 

ಕಸ್ಟಮರ್ ಆರ್ಡರ್ ಎಂದರೇನು ?

* ಗ್ರಾಹಕರು ಬಯಸುವ ವಿನ್ಯಾಸ, ಗಾತ್ರ, ಉದ್ದ ಇತ್ಯಾದಿ ರೀತಿಯ ಸಿದ್ಧ  ಚಿನ್ನಾಭರಣಗಳು ಅಲಭ್ಯವಿರುವಾಗ ಗ್ರಾಹಕರ ಆರ್ಡರ್ ಪಡೆಯಲಾಗುತ್ತದೆ.

* ಆರ್ಡರ್ ಮಾಡಲ್ಪಟ್ಟ ಚಿನ್ನಾಭರಣವನ್ನು ಪೂರೈಸುವ ಅಂದಾಜು ದಿನವನ್ನು ಕೊಡಲಾಗುತ್ತದೆ; ಆದರೆ ಆರ್ಡರ್ಗೆ ತಕ್ಕುದಾದ ರೀತಿಯ ಆಭರಣ ತಯಾರಿಯು ಪೂರ್ಣವಾಗಿ ಕುಶಲ ಕರ್ಮಿಯ ಲಭ್ಯತೆಯನ್ನು ಅವಲಂಬಿಸುವುದರಿಂದ ಕೆಲವೊಮ್ಮೆ  ಹೆಚ್ಚುವರಿ ಸಮಯಾವಕಾಶ ಬೇಕಾಗುತ್ತದೆ.

* ಆರ್ಡರ್ ಕೊಡುವಾಗ ಗಾತ್ರ, ಉದ್ದ ಇತ್ಯಾದಿ ಸರಿಯಾದ ವಿವರಗಳನ್ನು ಕೊಡಬೇಕಾಗುತ್ತದೆ. 

ಚಿನ್ನಾಭರಣ ನಿರ್ವಹಣೆ ಮತ್ತು ಮುತುವರ್ಜಿ :

1. ಚಿನ್ನಾಭರಣಗಳು ತುಂಬಾ ಸೂಕ್ಷ್ಮ; ಜತನದಿಂದ ಅವುಗಳನ್ನು  ನಿಭಾಯಿಸಬೇಕಾಗುತ್ತದೆ.

2. ಅದನ್ನು ಎಳೆಯುವುದಾಗಲೀ, ತಿರುಪುವುದಾಗಲೀ, ಬೀಳಿಸುವುದಾಗಲೀ ಮಾಡಬಾರದು.

3. ಕೊಟ್ಟಿರುವ ಬಾಕ್ಸ್‌ ಗಳಲ್ಲೇ ಅವುಗಳನ್ನು ನೀಟಾಗಿ, ಜೋಪಾನವಾಗಿ ಇರಿಸಬೇಕು.

4. ಕರವಸ್ತ್ರ ಇತ್ಯಾದಿಗಳಲ್ಲಿ ಅವುಗಳನ್ನು ಸುತ್ತಿಡಬಾರದು.

5. ಚಿನ್ನಾಭರಣಗಳ ಮೇಲಿನ ಬೆವರು, ಕೊಳೆ, ಪುಡಿ ಇತ್ಯಾದಿಗಳನ್ನು ತೆಗೆಯಲು ಶುದ್ಧ ನೀರಿನಲ್ಲಿ ಅವುಗಳನ್ನು ತೊಳೆಯಬಹುದು ಮತ್ತು ಸ್ವಚ್ಚ ಬಟ್ಟೆಯಿಂದ ಅವುಗಳನ್ನು ಒಣಗಿಸಬಹುದು. 

6. ಮನೆಯಲ್ಲಿ ಪಾತ್ರೆ ತೊಳೆಯವುದು, ಅಡುಗೆ ಮಾಡುವುದು, ಬಟ್ಟೆ ತೊಳೆಯುವುದು ಇತ್ಯಾದಿ ಕೆಲಸಗಳನ್ನು ಮಾಡುವಾಗ ಚಿನ್ನಾಭರಣಗಳನ್ನು ಹಾಕದಿರುವುದೇ ಲೇಸು.

7. ಸ್ನಾನ ಮಾಡುವಾಗ, ನಿದ್ದೆ ಮಾಡುವಾಗ ಚಿನ್ನಾಭರಣ ಧರಿಸಿಕೊಂಡಿರಬಾರದು.

8. ಚಿನ್ನ ಶುದ್ಧೀಕರಿಸುವ ನೆಪದಲ್ಲಿ  ಮನೆ ಮನೆಗೆ ಬರುವ ಅಪರಿಚಿತರ ಕೈಗೆ ಚಿನ್ನಾಭರಣಗಳನ್ನು ಕೊಡಬಾರದು. 

9. ಇತರರಿಗೆ ನಿಮ್ಮ ಚಿನ್ನಾಭರಣಗಳನ್ನು ಕೊಡುವುದು ಸರಿಯಲ್ಲ; ಅವರು ನಿಮ್ಮಷ್ಟು ಜಾಗ್ರತೆ, ಮುತುವರ್ಜಿ ವಹಿಸುವುದಿಲ್ಲ. 

10. ಕೆಲವೊಮ್ಮೆ ಚಿನ್ನಾಭರಣ ಕಪ್ಪು ಬಣ್ಣಕ್ಕೆ ತಿರುಗುವುದುಂಟು. ಇದು ಪರಿಶುದ್ಧತೆಯ ವ್ಯತ್ಯಾಸದಿಂದ ಆಗುವಂಥದ್ದಲ್ಲ. ಇದು ಒಂದು ರಾಸಾಯನಿಕ ಪ್ರಕ್ರಿಯೆ ಆಗಿರುತ್ತದೆ. 

ಒಂದು ಚಿನ್ನಾಭರಣವನ್ನು ಮಾಡಿ ಮುಗಿಸಿದಾಗ ಅದನ್ನು ರಾಸಾಯನಿಕ ದ್ರಾವಣದಲ್ಲಿ ಹಾಕಿ ಪ್ಲೇಟಿಂಗ್ ಮಾಡುತ್ತಾರೆ. ಅದಾಗಿ ಆಭರಣವನ್ನು ಸರಿಯಾಗಿ ಕಾಯಿಸಿ ಒಣಗಿಸದಿದ್ದಲ್ಲಿ, ದ್ರಾವಣದ ಅಂಶ ಚಿನ್ನಾಭರಣದ ಅಂಚಿನಲ್ಲಿ ಉಳಿದು ಬಿಡುತ್ತದೆ. ಚಿನ್ನಾಭರಣ ಒಣಗಿದ ಬಳಿಕ ಇದು ನಿಧಾನವಾಗಿ ಕಪ್ಪು ಬಣ್ಣಕ್ಕೆ ತಿರುಗುವುದು ಕಂಡು ಬರುತ್ತದೆ. ಇದಕ್ಕೆ ಮತ್ತೆ ಪುನಃ ಬಣ್ಣ ಕೊಡಬಹುದಾಗಿರುತ್ತದೆ. 

ಚಿನ್ನಾಭರಣ ತಯಾರಿಯಲ್ಲಿನ ಈ ಮೂಲಭೂತ ಅಂಶಗಳನ್ನು ಮನನ ಮಾಡಿಕೊಂಡಾಗ ನಮಗೆ ಚಿನ್ನಾಭರಣದ ಒಟ್ಟು ಕ್ರಯ ಅದನ್ನು ಮಾರುವಾಗ ಸಿಗುವುದಿಲ್ಲ ಏಕೆ ಎಂಬುದು ಸ್ಪಷ್ಟವಾಗುತ್ತದೆ.

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.