ಇನ್ಫಿನಿಕ್ಸ್ ನೋಟ್-5 ಸ್ಮಾರ್ಟ್ಫೋನ್ ಬಿಡುಗಡೆ
Team Udayavani, Aug 27, 2018, 11:52 AM IST
ನವದೆಹಲಿ: ಟ್ರಾನ್ಸಿಷನ್ ಹೋಲಿಂಡ್ ಸಂಸ್ಥೆಯು 10ಕೆ ಸ್ಮಾರ್ಟ್ಫೋನ್ ವಿಭಾಗದ ಅತ್ಯಾಧುನಿಕ ನೋಟ್-5 ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಫೋನ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ಫಿನಿಕ್ಸ್ ಮೊಬೈಲ್ಸ್ ವ್ಯವಸ್ಥಾಪಕ ನಿರ್ದೇಶಕ ಬೆಂಜಮಿನ್ ಜಿಯಾಂಗ್, ನಾವು ಭಾರತೀಯ ಮಾರುಕಟ್ಟೆಗೆ ಆ್ಯಂಡ್ರಾಯ್ಡ ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ನವೀನ ಗುಣಗಳಿರುವ ನೋಟ್-5 ಅನ್ನು ಪರಿಚಯಿಸಿದ್ದೇವೆ.
ಇದು ಫ್ಯೂಷನ್ ತಂತ್ರಜ್ಞಾನದ ಆಧುನಿಕ ರೀತಿಯ ಇಂಟಲಿಜೆಂಟ್ ಲೈಫ್ಸ್ಟೈಲ್ ಫೋನ್ ಆಗಿದೆ. 5.99 ಎಫ್ಎಚ್ಡಿ ಪ್ಲಸ್ ಸ್ಕ್ರೀನ್, 19 ಎಂಪಿ ಎ1 ಸೆಲ್ಫಿ ಕ್ಯಾಮೆರಾ ಹಾಗೂ 4500ಎಂಎಚ್ ಬ್ಯಾಟರಿ ಇದರಲ್ಲಿದೆ. ಬ್ಯಾಟರಿ ಮೂರು ದಿನ ಚಾರ್ಜ್ನಲ್ಲಿ ಇರುತ್ತದೆ. ಡ್ಯುಯೆಲ್ ಸಿಮ್ ವೋಲ್ಟೆ ಸಲ್ಯೂಷನ್ವುಳ್ಳ 3ಜಿಬಿ ರ್ಯಾಮ್, 32 ಜಿಬಿ ಸ್ಟೋರೇಜ್ ಹೊಂದಿರುವ ಫೋನ್ ದರ 9999 ರೂ. ಹಾಗೂ 4ಜಿ ರ್ಯಾಮ್, 64ಜಿಬಿ ಸ್ಟೋರೇಜ್ ಹೊಂದಿರುವ ಫೋನ್ ಬೆಲೆ 11,999 ರೂ. ಆಗಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ದೇಶೀಯ ನಿರ್ದೇಶಕ ಮುನೀಶ್ ಸೇತ್ ಮಾತನಾಡಿ, ಇನ್ಫಿನಿಕ್ಸ್ ನೋಟ್-5 ಗೂಗಲ್ಸ್ ಫೋಟ್ಸ್ ಸ್ಟೋರ್ವುಳ್ಳ ಫೋನ್ ಆಗಿದೆ. ಆ್ಯಂಡ್ರಾಯ್ಡ ಓರಿಯೊ 8.1 ಓಎಸ್, 12ಎಂಪಿ ರಿಯರ್ ಕ್ಯಾಮೆರಾ 1.25 ಮೈಕ್ರಾನ್ ಬಿಗ್ ಫಿಕ್ಸಲ್, ಎಲ್ಇಡಿ ಫ್ಲಾಷ್, ಮೀಡಿಯಾಟೆಕ್ ಹೆಲಿಯಾ ಪಿ23 ಎಂಟಿ 6763 2.0 ಗಿಗಾಹರ್ಡ್ಸ್ ಆಕ್ಟಾಕೋರ್ ಪ್ರೊಸೆಸರ್, 128ಜಿಬಿವರೆಗೆ ವಿಸ್ತರಿಸ ಬಹುದಾದ ಎಸ್ಡಿ ಕಾರ್ಡ್ ಇದರಲ್ಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.