ಮತ್ಸ್ಯ ಸಮೃದ್ಧಿಗಾಗಿ ಸಾಮೂಹಿಕ ಸಮುದ್ರಪೂಜೆ


Team Udayavani, Aug 27, 2018, 12:32 PM IST

malper.jpg

ಪಣಂಬೂರು/ಮಲ್ಪೆ: ಮೀನುಗಾರಿಕಾ ಋತು ಆರಂಭದ ಹಿನ್ನೆಲೆಯಲ್ಲಿ ನೂಲ ಹುಣ್ಣಿಮೆಯ ದಿನವಾದ ರವಿವಾರ ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ತಣ್ಣೀರು ಬಾವಿಯ ಕಡಲ ಕಿನಾರೆಯಲ್ಲಿ ಮತ್ತು ಮಲ್ಪೆ ಮೀನುಗಾರ ಸಂಘದ ವತಿಯಿಂದ ರವಿವಾರ ವಡಭಾಂಡೇಶ್ವರ ಸಮುದ್ರತೀರದಲ್ಲಿ ಸಾಮೂಹಿಕ ಸಮುದ್ರಪೂಜೆ ನಡೆಯಿತು.

ಕದ್ರಿ ಸುವರ್ಣ ಕದಳೀ ಮಠದ ರಾಜಯೋಗಿ ನಿರ್ಮಲನಾಥಜೀ ಮಹಾರಾಜರು ಹಾಲು, ಸೀಯಾಳ, ಫಲ ಪುಷ್ಪಗಳನ್ನು ಕಡಲಿಗೆ ಅರ್ಪಿಸಿ ಮತ್ಸ್ಯ ಸಂಪತ್ತು ವೃದ್ಧಿಸುವಂತೆ ಮತ್ತು ಮೀನುಗಾರಿಕೆಗೆ ಸಂದರ್ಭ ಯಾವುದೇ ವಿಘ್ನಗಳು ಎದುರಾಗದಿರಲಿ ಎಂದು ಪ್ರಾರ್ಥಿಸಿದರು. ವಿವಿಧ ಭಜನ ಮಂಡಳಿಗಳಿಂದ ಭಜನೆ, ಸಂಕೀರ್ತನೆ ಬಳಿಕ ವಿಶೇಷ ಪೂಜೆ ನೆರವೇರಿತು.

ರಾಜ್ಯ ಪ್ರಶಸ್ತಿ ವಿಜೇತ ಮಹಿಳಾ ಸಾಧಕಿ ಸರಳ ಕಾಂಚನ್‌, ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಮಹಾ ಸಭಾದ ಅಧ್ಯಕ್ಷ ಸುಭಾಸ್‌ಚಂದ್ರ ಕಾಂಚನ್‌, ಉಪಾಧ್ಯಕ್ಷ ಹೇಮ ಚಂದ್ರ ಸಾಲ್ಯಾನ್‌, ಜತೆ ಕಾರ್ಯದರ್ಶಿ ಗಂಗಾಧರ ಶ್ರೀಯಾನ್‌, ಕೋಶಾಧಿ ಕಾರಿ ರಂಜನ್‌ ಕಾಂಚನ್‌, ಏಳು ಗ್ರಾಮದ ಪ್ರತಿನಿಧಿ  ಮಾಧವ ಸಾಲ್ಯಾನ್‌ ಬೋಳೂರು, ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ವಿವಿಧ ಗ್ರಾಮಸಭಾಗಳ ಗುರಿಕಾರರು ಭಾಗವಹಿಸಿದ್ದರು. ಆರ್‌.ಪಿ. ಬೋಳೂರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ಯಾಮ ಸುಂದರ ಕಾಂಚನ್‌ ಕುದ್ರೋಳಿ ವಂದಿಸಿದರು.

ಶೋಭಾ ಯಾತ್ರೆ
ಕದ್ರಿ ಸುವರ್ಣ ಕದಳೀ ಮಠದ ರಾಜಯೋಗಿ ನಿರ್ಮಲನಾಥಜೀ ಮಹಾರಾಜರು ಸೇರಿದಂತೆ ಮೊಗವೀರರು, ಮತ್ಸ್ಯ ಸಮೃದ್ಧಿಗಾಗಿ ಸಾಮೂಹಿಕ ಸಮುದ್ರಪೂಜೆ ಉದ್ಯಮಿಗಳು ಸಮುದ್ರ ಪೂಜೆಯ ಮುನ್ನ ನಡೆದ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದರು. ಶ್ರೀ ಬ್ರಹ್ಮ ಬಬ್ಬರ್ಯ ಬಂಟ ದೈವಸ್ಥಾನದಿಂದ ಬೃಹತ್‌ ಪ್ರಮಾಣದಲ್ಲಿ ಹಾಲು, ಸೀಯಾಳ, ಫಲಪುಷ್ಪಗಳೊಂದಿಗೆ ಹೊರಟ ಯಾತ್ರೆಯು ಬೊಕ್ಕಪಟ್ಣ, ಬೋಳೂರು ಅಶ್ವತ್ಥಕಟ್ಟೆ, ನಾಗಬ್ರಹ್ಮ ಸ್ಥಾನ, ಬೋಳೂರು ಗ್ರಾಮ ಚಾವಡಿಯಿಂದಾಗಿ ಗುರುಪುರ ನದಿ ದಾಟಿ ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಸೇರಿತು. 

ಮಲ್ಪೆಯ ಮೀನುಗಾರರು ಬೆಳಗ್ಗೆ ವಡಭಾಂಡ ಬಲರಾಮ ಮತ್ತು ಬೊಬ್ಬರ್ಯ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ ದರು. ಬಳಿಕ ಸಮುದ್ರ ಕಿನಾರೆಯ ತನಕ ಶೋಭಾಯಾತ್ರೆ ನಡೆಯಿತು. ಮಲ್ಪೆ ಮೀನು ಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಶಾಸಕ ಕೆ. ರಘಪತಿ ಭಟ್‌, ಉದ್ಯಮಿ ಜೆರಿ ವಿನ್ಸೆಂಟ್‌ ಡಯಾಸ್‌, ಮೀನುಗಾರಿಕಾ ಸಹಾಯಕ ನಿರ್ದೇ ಶಕ ಶಿವಕುಮಾರ್‌, ಮೀನುಗಾರಿಕಾ ವಿವಿಧ ಸಂಘಟನೆಗಳ ಮುಖಂಡರಾದ ಯಶ್‌ಪಾಲ್‌ ಎ. ಸುವರ್ಣ, ಹಿರಿಯಣ್ಣ ಟಿ. ಕಿದಿಯೂರು ಮತ್ತು ಮೀನುಗಾರ ಪ್ರಮುಖರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

15-bng

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

pejavar

Pejawar Swamiji; ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತವಾಗಲಿ

IPL: Foreign players can no longer get crores; This is the new rule

IPL: ವಿದೇಶಿ ಆಟಗಾರರಿಗೆ ಇನ್ನು ಕೋಟಿ ಕೋಟಿ ಹಣ ಪಡೆಯಲು ಸಾಧ್ಯವಿಲ್ಲ; ಹೀಗಿದೆ ಹೊಸ ನಿಯಮ

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

12-udupi

Yaduveer Wadiyar: ಉಡುಪಿ ಶ್ರೀಕೃಷ್ಣಮಠಕ್ಕೆ‌ ಸಂಸದ ಯದುವೀರ್‌‌ ಭೇಟಿ

11-joshi

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

5-

Mangaluru: ಸೆನ್‌ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ

2-mng-kbc

Mangaluru: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ

Mangaluru: ಸೈಬರ್‌ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ

Mangaluru: ಸೈಬರ್‌ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

15-bng

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

pejavar

Pejawar Swamiji; ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತವಾಗಲಿ

IPL: Foreign players can no longer get crores; This is the new rule

IPL: ವಿದೇಶಿ ಆಟಗಾರರಿಗೆ ಇನ್ನು ಕೋಟಿ ಕೋಟಿ ಹಣ ಪಡೆಯಲು ಸಾಧ್ಯವಿಲ್ಲ; ಹೀಗಿದೆ ಹೊಸ ನಿಯಮ

14-sirsi

Sirsi: ಯಕ್ಷಗಾನದ ಪ್ರಸಿದ್ಧ ಭಾಗವತ ವಿದ್ವಾನ್ ಗಣಪತಿ ಭಟ್ಟ ಗೆ ಚಂದುಬಾಬು ಪ್ರಶಸ್ತಿ

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

SLvsNZ: ಲಂಕಾ ಸ್ಪಿನ್‌ ಹೊಡೆತಕ್ಕೆ ಗಾಲೆಯಲ್ಲಿ ಮುಳುಗಿದ‌ ಕಿವೀಸ್ ಗೆ ಸರಣಿ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.