ದ್ಯುತಿ: ಬೆಳ್ಳಿ ಪ್ರೀತಿ
Team Udayavani, Aug 27, 2018, 3:14 PM IST
ಜಕಾರ್ತಾ: ಭಾರತದ ಸ್ಟಾರ್ ಸ್ಪ್ರಿಂಟರ್ ದ್ಯುತಿ ಚಂದ್ ವನಿತಾ 100 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದು ಮಿನುಗಿದರು. ಇದು ಏಶ್ಯನ್ ಗೇಮ್ಸ್ನಲ್ಲಿ 20 ವರ್ಷಗಳ ಬಳಿಕ ಭಾರತಕ್ಕೆ ಈ ವಿಭಾಗದಲ್ಲಿ ಒಲಿದ ಮೊದಲ ಪದಕವೆಂಬುದು ಉಲ್ಲೇಖನೀಯ. 1998ರ ಏಶ್ಯಾಡ್ನಲ್ಲಿ ರಚಿತಾ ಮಿಸ್ತ್ರಿ ಕಂಚಿನ ಸಾಧನೆಗೈದಿದ್ದರು.
7ನೇ ಲೇನ್ನಲ್ಲಿ ಓಡಿದ ದ್ಯುತಿ ಚಂದ್ 11.32 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರು. ಆದರೆ ಇದು ಅವರ ರಾಷ್ಟ್ರೀಯ ದಾಖಲೆಗಿಂತಲೂ ಕೆಳ ಮಟ್ಟದ ಸಾಧನೆ (11.29). ರಾಷ್ಟ್ರೀಯ ದಾಖಲೆಯನ್ನೇ ಕಾಯ್ದುಕೊಂಡಿದ್ದರೆ ದ್ಯುತಿ ಬಂಗಾರದಿಂದ ಸಿಂಗಾರಗೊಳ್ಳಬಹುದಿತ್ತು. ಬಹ್ರೈನಿನ ಒದಿಯೊಂಗ್ ಎದಿದಿಯೋಂಗ್ ಚಿನ್ನ (11.30), ಚೀನದ ವೀ ಯೊಂಗ್ಲಿ ಕಂಚು ಗೆದ್ದರು (11.33). ಒಡಿಶಾದ 22ರ ಹರೆಯದ ದ್ಯುತಿ ಚಂದ್ ಪಾಲಿಗೆ ಇದು ಮೊದಲ ಏಶ್ಯಾಡ್ ಕೂಟವಾಗಿದೆ. ದ್ಯುತಿ ಚಂದ್ ಸೆಮಿಫೈನಲ್ ಹೀಟ್ಸ್ನಲ್ಲಿ 3ನೇ, ಒಟ್ಟಾರೆಯಾಗಿ 5ನೇ ಸ್ಥಾನದೊಂದಿಗೆ ಓಟ ಮುಗಿಸಿದ್ದರು.
ಅವಮಾನ, ಟೀಕೆಗಳಿಗೆ ಉತ್ತರ
ವರ್ಷದ ಹಿಂದೆ ದ್ಯುತಿ ದೇಹದಲ್ಲಿ ಆ್ಯಂಡ್ರೊಜನ್ (ಪುರುಷರ ದೇಹದಲ್ಲಿರುವ ಹಾರ್ಮೋನು) ಪ್ರಮಾಣ ಹೆಚ್ಚಿದೆ ಎನ್ನುವ ಆರೋಪಕ್ಕೆ ತುತ್ತಾಗಿದ್ದರು. ಕೊನೆಗೂ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದಲ್ಲಿ ಇವರು ನಿರಪರಾಧಿ ಎನ್ನುವುದು ಸಾಬೀತಾಗಿತ್ತು. ಇದಾದ ಬಳಿಕ ದ್ಯುತಿ ಏಶ್ಯಾಡ್ನಲ್ಲಿ ಪದಕ ಗೆಲ್ಲುವ ಕನಸು ಕಂಡಿದ್ದರು. ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.