ವಿಶ್ವಯುದ್ಧದ ಮಹಾಬಾಂಬ್
Team Udayavani, Aug 28, 2018, 6:00 AM IST
ಫ್ರಾಂಕ್‌ಫರ್ಟ್: ಎರಡನೇ ವಿಶ್ವ ಮಹಾಯುದ್ಧದಲ್ಲಿ ಸಿಡಿಯದೇ ಬಿದ್ದಿದ್ದ, ಬರೋಬ್ಬರಿ ಐದು ಟನ್ ತೂಕದ ಸಜೀವ ಬಾಂಬ್ ಒಂದನ್ನು ಜರ್ಮನಿಯ ಬಾಂಬ್ ನಿಷ್ಕ್ರಿಯ ದಳ ಮಣ್ಣಿನಿಂದ ಹೊರತೆಗೆದಿದೆ. ಇಲ್ಲಿನ ಲಡ್ವಿಗ್‌ಶಾಫೆನ್ ನಗರದ ಬಳಿ ಈ ಬಾಂಬ್ ಪತ್ತೆಯಾಗಿದ್ದು, ಇದಕ್ಕಾಗಿ ಅಂದಾಜು 18,500 ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಇದೀಗ ಎಲ್ಲರೂ ತಮ್ಮ ತಮ್ಮ ಮನೆ ಸೇರಿಕೊಂಡಿದ್ದಾರೆ. ಅಷ್ಟಕ್ಕೂ ಇದು ವೈಮಾನಿಕ ಬಾಂಬ್ ಎಂದು ಹೇಳಿರುವ ಅಧ್ಯಯನ ತಂಡ, ಅಮೆರಿಕ ಸೇನೆ ಇದನ್ನು ಎಸೆದಿತ್ತು ಎಂದು ಅಂದಾಜಿಸಿದೆ. ಲಡ್ವಿನ್‌ಶಾಫೆನ್‌ನಲ್ಲಿ ಕಟ್ಟಡವೊಂದರ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಬಾಂಬ್ ಇರುವುದು ಪತ್ತೆಯಾಗಿತ್ತು. ಆ ಕ್ಷಣದಲ್ಲೇ ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಲಾಗಿತ್ತು. 70 ವರ್ಷಗಳಷ್ಟು ಹಳೆಯ ಬಾಂಬ್ ಇದಾಗಿದ್ದು, ಕಳೆದ ವರ್ಷವೂ ಫ್ರಾಂಕ್‌ಫರ್ಟ್‌ನಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು.
ನಿವಾಸಿಗಳ ಸ್ಥಳಾಂತರ: ಬಾಂಬ್ ಹೊರಕ್ಕೆತ್ತುವ ಹಿನ್ನೆಲೆಯಲ್ಲಿ ಇಲ್ಲಿನ ಭದ್ರತಾ ಸಿಬ್ಬಂದಿ, ಭಾನುವಾರ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ನಿವಾಸಿಗಳಿಗೂ 1000 ಮೀಟರ್ ದೂರ ಹೋಗುವಂತೆ ಆದೇಶಿಸಿತ್ತು. ಅಂತೆಯೇ ನಿವಾಸಿಗಳೆಲ್ಲ ಬೆಳಗ್ಗೆ 8 ಗಂಟೆಗೆಲ್ಲಾ ಕಾಲ್ಕಿತ್ತಿದ್ದರು. ಮಧ್ಯಾಹ್ನ 2 ಗಂಟೆಯ ಹೊತ್ತಿಗೆಲ್ಲಾ ತಂಡ ಬಾಂಬ್ ಹೊರಕ್ಕೆ ತೆಗೆದು ನಿಷ್ಕ್ರಿಯಗೊಳಿಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.