ಯುವತಿಯ ಆಯ್ಕೆಗೆ “ಸುಪ್ರೀಂ’ ಸಮ್ಮತಿ
Team Udayavani, Aug 28, 2018, 6:00 AM IST
ನವದೆಹಲಿ: ತನ್ನನ್ನು ವರಿಸಲೆಂದೇ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ತನ್ನ ಪತಿಯೊಂದಿಗೆ ತಾನು ಜೀವಿಸಲು ಇಷ್ಟವಿಲ್ಲವೆಂದು ಹೇಳಿದ್ದ ಛತ್ತೀಸ್ಗಡದ ಜೈನ ಯುವತಿಯೊಬ್ಬಳ ವಾದಕ್ಕೆ ಮನ್ನಣೆ ನೀಡಿರುವ ಸುಪ್ರೀಂ ಕೋರ್ಟ್, ಆಕೆಯ ಇಷ್ಟದಂತೆ
ಹೆತ್ತವರೊಂದಿಗೆ ಹೋಗಲು ಅನುಮತಿ ನೀಡಿದೆ. ತನ್ನೊಂದಿಗೆ ವಾಸ ಮಾಡಲು ಇಚ್ಛಿಸದೇ ತನ್ನ ತವರು ಮನೆ ಸೇರಿಕೊಂಡಿದ್ದ ಪತ್ನಿಯನ್ನು ಹೆತ್ತವರ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಮೊಹಮ್ಮದ್ ಇಬ್ರಾಹಿಂ ಸಿದ್ದಿಕಿ ಅಲಿಯಾಸ್ ಆರ್ಯನ್ ಆರ್ಯ ಹೈಕೋರ್ಟ್ ಮೆಟ್ಟಿಲೇರಿದ್ದ. ನ್ಯಾಯಾಲಯ, ವಾಸ ಸ್ಥಳದ ಆಯ್ಕೆಯನ್ನು ಯುವತಿಯೇ ನಿರ್ಧರಿಸಲಿ ಎಂದು ತೀರ್ಪಿತ್ತಿತ್ತು. ಈ ತೀರ್ಪಿನ ವಿರುದ್ಧ ವ್ಯಕ್ತಿ, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಈ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಸೋಮವಾರ ತೀರ್ಪು ಪ್ರಕಟಿಸಿದ್ದು, ಯುವತಿಯ ಆಯ್ಕೆಯಂತೆ ಆಕೆ ತವರು ಮನೆಯಲ್ಲೇ ಉಳಿಯಲೆಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Tennis: ಏಷ್ಯಾಡ್ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ನಿವೃತ್ತಿ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.