ಕೇರಳ ಪ್ರಕೃತಿ ವಿಕೋಪಕ್ಕೆ ಪರಿಸರ ನಾಶವೇ ಕಾರಣ
Team Udayavani, Aug 28, 2018, 12:02 PM IST
ಹುಮನಾಬಾದ: ಕೇರಳದ ಪ್ರಕೃತಿ ವಿಕೋಪ ಘಟನೆಗೆ ಪರಿಸರ ನಾಶವೇ ಕಾರಣ. ಏನೆಲ್ಲ ಅವಘಡ ಸಂಭಿಸಿದ ನಂತರವೂ ಮನುಷ್ಯ ಎತ್ತೆಚ್ಚಿಕೊಳ್ಳದಿದ್ದರೆ ಭವಿಷ್ಯದಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾ ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿ ಹೇಳಿದರು.
ಮೀನಕೇರಾದಲ್ಲಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಪರಿಸರ ವಾಹಿನಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗು, ಮಂಡ್ಯದಲ್ಲಿ ಅರಣ್ಯ ನಾಶದಿಂದ ತಾಪಮಾನ ಹೆಚ್ಚಳವಾಗಿ, ಮನುಷ್ಯ ಸೇರಿದಂತೆ ಸಕಲ ಜೀವರಾಶಿ
ಬದುಕುವುದು ಕಷ್ಟಸಾಧ್ಯವಾಗಿದೆ. ಪ್ರಸ್ತುತ ನಮ್ಮ ರಾಜ್ಯದ ಹಲವೆಡೆ ಸಂಭವಿಸಿರುವ ಅವಘಡಕ್ಕೂ ಪರೋಕ್ಷವಾಗಿ ಮನುಷ್ಯನ ಸ್ವಾರ್ಥವೇ ಕಾರಣ ಎಂದರು.
ಮದುವೆ, ಜನ್ಮದಿನ, ಸಭೆ-ಸಮಾರಂಭಗಳಲ್ಲಿ ವ್ಯರ್ಥವಾಗುವ ಹಣದ ಬದಲಿಗೆ ಅವರ ಮನೆ, ತೋಟಗಳಲ್ಲಿ ನೆಡುವುದಕ್ಕಾಗಿ ಸಸಿಗಳನ್ನೇ ಕಾಣಿಯಾಗಿ ನೀಡಲು ಎಲ್ಲರಿಗೂ ಸಲಹೆ ನೀಡಬೇಕು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಅಣ್ಯಪ್ಪ ರೊಡ್ಡಾ, ವಲಯ ಅರಣ್ಯ ಅಧಿಕಾರಿ ಸಂಗೀತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಪಾವತಿ ಕಾಂಬ್ಳೆ, ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಬುಳ್ಳಾ, ಗ್ರಾಪಂ ಸದಸ್ಯರಾದ ಸಂಜಯ್ ಕಲ್ಮೂಡ್, ಪ್ರಭುಶಟ್ಟಿ ಪರೀಟ್, ಬಸವತೀರ್ಥ ವಿದ್ಯಾಪೀಠದ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಗುಂಡಪ್ಪ ಮೂಲಗಿ, ಸರ್ಕಾರಿ ಶಾಲೆಯ
ಮುಖ್ಯಶಿಕ್ಷಕಿ ರಾಜೇಶ್ವರಿ, ಅರಣ್ಯ ರಕ್ಷಕ ಗುಂಡುರಾವ್ ಮೊದಲಾದವರು ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸರ್ಕಾರಿ ಶಾಲೆ ಮತ್ತು ಬಸವತೀರ್ಥ ವಿದ್ಯಾಪೀಠ ಶಾಲೆಯ ಮಕ್ಕಳು ಗ್ರಾಮದಲ್ಲಿ ಜನಜಾಗೃತಿ ರ್ಯಾಲಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.