ಸಮಾನತೆಗೆ ಶ್ರಮಿಸಿದ ಶರಣ ಹಡಪದ ಅಪ್ಪಣ್ಣ: ಸ್ವಾಮೀಜಿ
Team Udayavani, Aug 28, 2018, 3:53 PM IST
ಆಲಮೇಲ: ಕಲ್ಯಾಣ ಕ್ರಾಂತಿಗೆ, ಸಮಾನತೆಗೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡ ಮಹಾನ್ ಶರಣ ಹಡಪದ ಅಪ್ಪಣ ಎಂದು ಗೋಕಾಕ ತಾಲೂಕಿನ ಕುಂದರ್ಗಿಯ ಅಡವಿ ಸಿದ್ಧೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಹಡಪದ ಅಪ್ಪಣನವರ 884ನೇ ಜಯಂತ್ಯುತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡ ಜನಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾನತೆ ಸಮಾಜ ನಿರ್ಮಾಣಕ್ಕೆ ಬಸವಣ್ಣವರ ಜೊತೆಯಾಗಿ ಹೋರಾಡಿದ ಮಹಾನ್ ಶರಣ ಅಪ್ಪಣನವರು. ಬಸವಣ್ಣನವರ ಸಮಾನಾಂತರ ಶರಣರಲ್ಲಿ ಹಡಪದ ಅಪ್ಪಣನವರು ಒಬ್ಬರು ಎಂದ ಅವರು, ಸಮಾಜದ ಜನರು ಶೈಕ್ಷಣಿಕವಾಗಿ ಮುಂದೆ ಬಂದರೆ ಮಾತ್ರ ಎಲ್ಲ ರಂಗದಲ್ಲಿ ಅಭಿವೃದ್ಧಿ ಸಾಧ್ಯ ಎಂದರು.
ಮಕ್ಕಳಿಗೆ ಸಂಸ್ಕಾರ, ನೈತಿಕ ಮೌಲ್ಯ ಮುಖ್ಯವೆಂದು ಅವರು, ತಂದೆ-ತಾಯಿ, ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ರೈತರ ಒಳಿತನ್ನು ಬಯಸಿದರೆ ನಾವೆಲ್ಲ ನೆಮ್ಮದಿಯಿಂದ ಬಾಳುತ್ತವೆ ಎಂದು ಹೇಳಿದರು.
ವಿರಕ್ತ ಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಜಿ ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಇರಬೇಕು. ಹಡಪದ ಅಪ್ಪಣನವರ ಕಾಯಕ ಮೆಚ್ಚಿ ಬಸವಣ್ಣನವರು ಅವರನ್ನು ಆಪ್ತರನ್ನಾಗಿಸಿಕೊಂಡರು. ಎಲ್ಲರೂ ಒಂದಾಗಿ ಶರಣರ ತತ್ವದಲ್ಲಿ ಮುನ್ನಡೆಯುವಂತೆ ಸಲಹೆ ನೀಡಿದರು.
ತಂಗಡಗಿ ಹಡಪದ ಅಪ್ಪಣ್ಣನವರ ಮಹಾಸಂಸ್ಥಾನ ಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಹಡಪದ ಸಮಾಜ ಎಲ್ಲ ರಂಗದಲ್ಲಿ ಹಿಂದುಳಿದ್ದು ನಾವೆಲ್ಲ ಮುಂದೆ ಬರಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ನಮ್ಮ ಸಮಾಜ ಲಿಂಗಾಯತ ಹಡಪದ ಸಮಾಜವಾಗಿಯೇ ಇರಬೇಕಾದರೆ ಈ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಮಾಜಿ ಶಾಸಕರ ರಮೇಶ ಭೂಸನೂರ ಮಾತನಾಡಿ, ಸಣ್ಣ ಸಣ್ಣ ಸಮಾಜಗಳು ಸೂಚಿತ ಅನ್ಯಾಯಕ್ಕೆ ಒಳಗಾಗಿರುವ ಸಮಾಜಗಳಲ್ಲಿ ಒಗ್ಗಟ್ಟಾಗಿ ಜಾಗೃತರಾಗುತ್ತಿದ್ದು, ಅವರಿಗೆ ಪ್ರೋತ್ಸಾಹಿಸಬೇಕು. ನನ್ನ ಅವಧಿಯಲ್ಲಿ ಸಮಾಜಕ್ಕೆ ಸಾಕಷ್ಟು ಸಹಾಯ ಮಾಡಿರುವುದಾಗಿ ತಿಳಿಸಿದ ಅವರು, ಕೆಂದ್ರ ಸಚಿವ ರಮೇಶ ಜಿಗಜಿಣಗಿ ತಮ್ಮ ಸಂಸದರ ಅನುದಾನದಲ್ಲಿ 3 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಡಪದ ಸಮಾಜಕ್ಕೆ 10 ಲಕ್ಷ ಅನುದಾನವನ್ನು ಸಚಿವರ ಅನುದಾನದಿಂದ ಕೊಡಿಸುವುದಾಗಿ ಭರವಸೆ ನೀಡಿದರು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು,
ಪ್ರಜಾಪಿತ ಬ್ರಹ್ಮಕುಮಾರಿ ರೇಣುಕಾ ಅಕ್ಕನವರು, ಶಿವುಕುಮಾರ ಗುಂದಗಿ, ರಮೇಶ ಬಂಟನೂರ ಮುಂತಾದವರು ಮಾತನಾಡಿದರು. ಬಸವರಾಜ ಧನಶ್ರೀ, ಪಿಎಸ್‌ಐ ಸಿ.ಬಿ. ಚಿಕ್ಕೋಡಿ, ಮಲ್ಲಪ್ಪ ತೋಡಕರ, ದೇವಪ್ಪ ಗುಣಾರಿ, ನಾನಾಗೌಡ ಪಾಟೀಲ, ಡಾ| ಶ್ರೀಶೈಲ ಪಾಟೀಲ, ಮಹಿಬೂಬ ಮಸಳಿ, ಅಶೋಕ ಕೋಳಾರಿ, ಪ್ರಭು ವಾಲೀಕಾರ, ಬಸವರಾಜ ತೆಲ್ಲೂರ, ಮಲ್ಲು ಅಚಲೇರಿ, ಹನುಮಂತ ಹೂಗಾರ, ಶ್ರೀಶೈಲ ಅಗಸರ, ಹಿರಗಪ್ಪ ಕಟ್ಟಿಮನಿ, ಸಮಾಜ ಅಧ್ಯಕ್ಷ ಶಂಕರ ಹಡಪದ, ಕಾರ್ಯದರ್ಶಿ ಸತೀಶ ಹಪಡದ, ತಾಲೂಕಾಧ್ಯಕ್ಷ ಮಹಾಂತೇಶ ಮೇಲಿನಮನಿ, ಸಿಂದಗಿ ಪುರಸಭೆ ಸದಸ್ಯ ಚಂದ್ರಶೇಖರ ಅಮಲಿಹಾಳ, ಶಿವಾನಂದ ಹಡಪದ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.