ರೇವಣಸಿದ್ದೇಶ್ವರ ರಥೋತ್ಸವ
Team Udayavani, Aug 28, 2018, 3:58 PM IST
ಇಂಚಗೇರಿ: ಹೊರ್ತಿ ಗ್ರಾಮದಲ್ಲಿ ರೇವಣಸಿದ್ದೇಶ್ವರ ಜಾತ್ರಾ ನಿಮಿತ್ತ ಜರುಗಿದ ರಥೋತ್ಸವಕ್ಕೆ ಕೇಂದ್ರ ಸಚಿವ ರಮೇಶ
ಜಿಗಜಿಣಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಂಬಿದ ಭಕ್ತರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ. ದೇವರಲ್ಲಿ ನಂಬಿಕೆ, ಹಿರಿಯರಿಗೆ ಹಾಗೂ ಮಹಿಳೆಯರಿಗೆ ಪೂಜ್ಯ ಭಾವನೆ, ಗೌರವದಿಂದ ಕಾಣುವವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಹೇಳಿದರು.
ಪ್ರತಿ ವರ್ಷ ಶ್ರಾವಣ ಮಾಸದ ಮೂರನೇ ಸೋಮವಾರ ರೇವಣಸಿದ್ದೇಶ್ವರ ದೇವಸ್ಥಾನದಿಂದ ಪುರಾಣ ಮೆರವಣಿಗೆ,
ಕಳಸ ಹಾಗೂ ಕುಂಭಮೇಳ ಜೊತೆಗೆ ಭವ್ಯ ಮೆರವಣಿಗೆ ಮೂಲಕ ಹರಳಯ್ಯ ದೇವಸ್ಥಾನಕ್ಕೆ ತಲುಪಿತು. ನಂತರ ಮಧ್ಯಾಹ್ನ ಪಲ್ಲಕ್ಕಿ, ನಂದಿಕೋಲು ಉತ್ಸವದೊಂದಿಗೆ ದೇವರ ಗುಡ್ಡ ಏರಿ ಮಾಳಮ್ಮ ಹಾಗೂ ಹಂಚನಾಳ ಬಸಮ್ಮನ
ದರ್ಶನ ಪಡೆಯಲಾಯಿತು.
ಸಾಯಂಕಾಲ ವಿವಿಧ ವಾದ್ಯಗಳೊಂದಿಗೆ ಜರುಗಿದ ರಥೋತ್ಸವದ ಭವ್ಯ ಮೆರವಣಿಗೆ ನಡೆಯಿತು. ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ ಭಕ್ತರು ರಥಕ್ಕೆ ಖಾರಿಕಾ, ಮನೂಕಿ, ಬಾಳೆ ಹಣ್ಣು, ಉತ್ತತ್ತಿ ಹಾರಿಸಿ ಭಕ್ತಿ ಸಮರ್ಪಿಸಿದರು. ಜಾತ್ರಾ ಕಮಿಟಿ ಅಧ್ಯಕ್ಷ ಅಣ್ಣಪ್ಪ ಸಾಹುಕಾರ ಖೈನೂರ ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಶೀಲವಂತ ಉಮರಾಣಿ, ಆರ್.ಜಿ. ಪಾಟೀಲ, ಮಲ್ಲಿಕಾರ್ಜುನ ಮೆಂಡೇಗಾರ, ಸುರೇಶ ಬೇನೂರ, ಸುರೇಶ ರೂಗಿ, ಶ್ರೀಶೈಲ ಶಿವೂರ, ಶಿವಾನಂದ ಮೆಂಡೇಗಾರ, ರಾಮು ಲಮಾಣಿ, ಸಂಗು ವೂರ, ಶ್ರೀನಿವಾಸ ಕಂದಗಲ್ಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.