ಸಂತ್ರಸ್ತ ಕುಟುಂಬಗಳಿಗೆ ಸ್ಥಳಾಂತರದ ಸಂಕಟ
Team Udayavani, Aug 29, 2018, 10:24 AM IST
ಸುಳ್ಯ: ಭೂ ಕುಸಿತದ ಸ್ಥಳದಿಂದ ಪಾರಾಗಿ ಪರಿಹಾರ ಕೇಂದ್ರಕ್ಕೆ ಬಂದಿರುವ ಕುಟುಂಬಗಳಿಗೆ ಈಗ ಅತ್ತ ದರಿ, ಇತ್ತ ಪುಲಿ ಎಂಬ ಸ್ಥಿತಿ! ಪರಿಹಾರ ಕೇಂದ್ರಗಳಲ್ಲಿ ಬದುಕು ಕಟ್ಟಿ ಕೊಂಡಿರುವ ಸಂತ್ರಸ್ತ ಕುಟುಂಬಗಳು ಪದೇ-ಪದೇ ಕೇಂದ್ರ ಬದಲಾಯಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈಗಿರುವ ಕೇಂದ್ರ ಶಾಶ್ವತ ಅಲ್ಲ. ತಾತ್ಕಾಲಿಕ ವ್ಯವಸ್ಥೆ. ಶಾಲೆ, ಸಭಾಭವನದೊಳನ ವಸತಿ ವ್ಯವಸ್ಥೆಯನ್ನು ದೀರ್ಘ ಕಾಲಕ್ಕೆ ವಿಸ್ತರಿಸು ವುದು ಅಸಾಧ್ಯ. ಹಾಗಾಗಿ ದಿನ ಕಳೆದಂತೆ ಸಂತ್ರಸ್ತರಿಗೆ ಆವಾಸ ಸ್ಥಾನದ ಬಗೆಗಿನ ಅಭದ್ರತೆಯ ಆತಂಕ ಹೆಚ್ಚಾಗುತ್ತಿದೆ.
ಮೂರು ಕೇಂದ್ರಗಳು
ಆ. 17ರಂದು ಜೋಡುಪಾಲ ಪರಿಸರದಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ವಿಕೋಪ ದಿಂದ ದಿಕ್ಕೆಟ್ಟ 300ಕ್ಕೂ ಅಧಿಕ ಕುಟುಂಬಗಳಿಗೆ ತತ್‌ಕ್ಷಣಕ್ಕೆ ಆಸರೆ ಒದಗಿಸಿದ್ದು ದ.ಕ. ಗಡಿ ಭಾಗದ ಮೂರು ಪರಿಹಾರ ಕೇಂದ್ರಗಳು. ಅರಂತೋಡು ತೆಕ್ಕಿಲ ಸಭಾಭವನ, ಕೊಡಗು ಸಂಪಾಜೆ ಶಾಲೆ ಕಟ್ಟಡ, ಕಲ್ಲುಗುಂಡಿ ಶಾಲೆ ಕಟ್ಟಡದಲ್ಲಿ ವಸತಿ, ದಾನಿಗಳ ನೆರವಿನಿಂದ ಊಟ ಉಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂತ್ರಸ್ತರಿಗೆ ಸ್ಪಂದನೆ ರೂಪದಲ್ಲಿ ನೆರವಿನ ಮಹಾಪೂರವೇ ಹರಿದು ಬಂದಿತ್ತು.
ಸ್ಥಳಾಂತರ ಸಂಕಟ
ಜೋಡುಪಾಲ, ಮೊಣ್ಣಂಗೇರಿ, ಮದೆನಾಡು ಸಂತ್ರಸ್ತರು ಆರಂಭದಲ್ಲಿ ಕೊಯನಾಡು, ಮದೆನಾಡು ಶಾಲಾ ಕೇಂದ್ರಕ್ಕೆ ಸೇರಿದ್ದರು. ಅಲ್ಲಿ ಪರಿಸ್ಥಿತಿ ಕಠಿನವೆನಿಸಿ ಅರಂತೋಡು ಖಾಸಗಿ ಸಭಾ ಭವನ, ಕಲ್ಲುಗುಂಡಿ ಶಾಲೆ, ಸಂಪಾಜೆ ಶಾಲೆಗೆ ಸ್ಥಳಾಂತರಿಸಲಾಯಿತು. ಈಗ 12 ದಿನ ಕಳೆದಿದೆ. ಅರಂತೋಡು, ಕೊಡಗು ಸಂಪಾಜೆ ಕೇಂದ್ರದ ಕುಟುಂಬಗಳನ್ನು ಹೊಸ ಇನ್ನೊಂದು ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪರಿಹಾರ ಕೇಂದ್ರದಲ್ಲಿ ಉಳಿದಿರುವ ಸಂತ್ರಸ್ತರು ಆಗಲೇ 3ರಿಂದ 4 ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಮನೆಗೆ ಮರಳಿಲ್ಲ
ಮೂರು ಕೇಂದ್ರಗಳಲ್ಲಿ 200ಕ್ಕೂ ಅಧಿಕ ಕುಟುಂಬಗಳು ಉಳಿದುಕೊಂಡರೆ, ಅಷ್ಟೇ ಸಂಖ್ಯೆಯ ಕುಟುಂಬಗಳು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿವೆ. ಪ್ರಾಕೃತಿಕ ವಿಕೋಪ ತಹಬದಿಗೆ ಬಂದು ದೇವರಕೊಲ್ಲಿ, ಅರೆಕ್ಕಳ, ಸಂಪಾಜೆ ಪರಿಸರದ ನಿವಾಸಿಗಳು ಮನೆಗೆ ಮರಳಿದ್ದಾರೆ. ಮದೆನಾಡು, ಜೋಡುಪಾಲ, ಮೊಣ್ಣಂಗೇರಿ ಪರಿಸರದಲ್ಲಿ ವಾತಾವರಣ ದಿನೇ-ದಿನೇ ಬಿಗಡಾಯಿಸುತ್ತಿರುವ ಕಾರಣ ಪರಿಹಾರ ಕೇಂದ್ರ ತೊರೆದಿಲ್ಲ.
ಇನ್ನೆಷ್ಟು ದಿನ ಇರಬೇಕೋ?
ಮದೆನಾಡು ಕೇಂದ್ರದಲ್ಲಿದ್ದೆ. ಅಲ್ಲಿಂದ ಸಂಪಾಜೆ ಕೇಂದ್ರಕ್ಕೆ ಸೇರಿದ್ದೆ. ಈಗ ಮತ್ತೆ ಸಂಪಾಜೆ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರವಾಗಿದೆ. ಮದೆನಾಡಿನಲ್ಲಿ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಹಾಗಾಗಿ ಪರಿಹಾರ ಕೇಂದ್ರದಲ್ಲಿ ಇನ್ನೆಷ್ಟೂ ದಿನ ಇರಬೇಕು ಏನು.
– ರತ್ನಾಕರ ಮದನಾಡು, ಸಂತ್ರಸ್ತ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.