ಮಾಡರ್ನ್ ಮ್ಯೂಸಿಕ್‌ನ ಮಾಂತ್ರಿಕ
Team Udayavani, Aug 29, 2018, 12:53 PM IST
ಮಾಡರ್ನ್ ಟೈಮ್ಸ್‌ನಲ್ಲಿ ಎಲ್ ಇಡಿ ಪ್ಯಾನಲ್, ಲೇಸರ್ ಲೈಟ್, ಅಲ್ಲಲ್ಲಿ ನೂರಾರು ಸೌಂಡ್ ಸ್ಪೀಕರ್‌ಗಳು, ವೇದಿಕೆ ಮುಂದೆ ನೆರದ ಸಾವಿರಾರು ಜನರು ಹುಚ್ಚೆದ್ದು ಕುಣಿಯುವಂತೆ ಮಾಡುವ ಸಂಗೀತ ಮಾಂತ್ರಿಕ ಕಿವಿಗೆ ದೊಡ್ಡ ಹೆಡ್‌ಫೋನ್ ಇಟ್ಟುಕೊಂಡು ಕೈಯಲ್ಲಿ ಡಿಸ್ಕ್ ಅನ್ನು ಮನಸ್ಸೋ ಇಚ್ಛೆ ತಿರುಗಿಸಿ ಕಿಕ್ ಕೊಡುವಾತನೇ ಡಿಜೆ.
ಮಾಡರ್ನ್ ಮ್ಯೂಸಿಕ್
ಈ ಡಿಜೆಗಳ ಕೆಲಸ ಆರಂಭವಾದದ್ದು ಇತ್ತೀಚೆಗೆ. ವೆಸ್ಟರ್ನ್ ಮ್ಯೂಸಿಕ್‌ಗಳು ಹವಾ ಪ್ರಾರಂಭ ವಾದ ಅನಂತರ ಆರ್ಕೆಸ್ಟ್ರಾ, ದೊಡ್ಡ ಸಂಗೀತ ಕಛೇರಿ, ಪಬ್, ಬಾರ್, ಸಿನೆಮಾ ಸಂಗೀತ ಹೀಗೆ ಎಲ್ಲೆಡೆ ಹರಡಿಕೊಂಡಿದೆ. ಸಂಗೀತದ ಬದಲಾದ ಜಮಾನವನ್ನು ವೆಸ್ಟರ್ನ್, ಫೋಕ್ ಮ್ಯೂಸಿಕ್‌ಗಳು ಪಡೆದುಕೊಂಡಿವೆ. ದೊಡ್ಡ ದೊಡ್ಡ ಸೌಂಡ್ ಬಾಕ್ಸ್‌ಗಳು, ನಾನಾ ರೀತಿ ಇನ್‌ಸ್ಟ್ರೆಮೆಂಟ್ ಗಳಿಂದ ನೆರೆದವರ ಮೈ-ಮನ ನವಿರೇಳಿಸುವಂತೆ ಮಾಡುತ್ತವೆ.
ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್
ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ (ಇಡಿಎಂ) ದೇಶಾದ್ಯಂತ ಯುವಕರನ್ನು ಆಕರ್ಷಿಸುತ್ತಿದೆ. ಇವುಗಳಲ್ಲಿ ಹೌಸ್, ಟ್ರಾನ್ಸ್, ಡಬ್‌ಸ್ಟೆಪ್ ಹಾಗೂ ಡ್ರಮ್ ಆ್ಯಂಡ್ ಬಾಸ್ ಹೀಗೆ ಹಲವು ವರ್ಗಗಳ ಮೂಲಕ ಇಂದು ಯುವಕರು ಬೀಟ್‌ಗೆ ತಕ್ಕಂತೆ ಡ್ಯಾನ್ಸ್ ಮಾಡುತ್ತಾ ಸಂಗೀತವನ್ನು ಆಸ್ವಾದಿಸುತ್ತಿದ್ದಾರೆ. ಹಾಗಾಗಿ ಸಂಗೀತ ಆಸಕ್ತಿ ಜತೆ ಈ ಮಿಕ್ಸಿಂಗ್ ಕಲೆ ಕಲಿತರೆ ಒಳ್ಳೆ ಹೆಸರು ಗಳಿಸುವುದರ ಜತೆ ಸಂಪಾದನೆಯನ್ನು ಮಾಡಬಹುದು.
ಡಿಸ್ಕ್ ಜಾಕಿ
ಡಿಜೆ ಕಂಪ್ಯೂಟರ್ ಸಿಸ್ಟಂ ಹಾಗೂ ಇತರೆ ಮ್ಯೂಸಿಕ್ ಮಿಕ್ಸಿಂಗ್, ಸೌಂಡ್ ಕಂಟ್ರೋಲಿಂಗ್ ಹೀಗೆ ಎಲೆಕ್ಟ್ರಾನಿಕ್ಸ್ ವಸ್ತುವನ್ನು ಹೊಂದಿರುತ್ತಾನೆ. ಅದರ ಮೂಲಕ ಸಂಗೀತಕ್ಕೇ ಈತ ತನ್ನ ಟ್ಯೂನ್ ಅನ್ನು ನೀಡುತ್ತಾನೆ. ಇದರಿಂದ ಬಾಸ್, ರೀಮಿಕ್ಸ್, ಫೋಕ್ ಹೀಗೆ ನಾನಾ ರೀತಿಯ ವೆಸ್ಟರ್ನ್ ಮ್ಯೂಸಿಕ್‌ನ ಟಚ್ ಅನ್ನು ನೀಡುತ್ತಾನೆ. ತನ್ನ ಡಿಸ್ಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳ ಮೂಲಕ, ರಿಮಿಕ್ಸ್ ಇನ್ನಿತರ ಗಿಮಿಕ್‌ಗಳನ್ನು ಮಾಡುವ ಮೂಲಕ ಮತ್ತಷ್ಟು ಕಾರ್ಯಕ್ರಮವನ್ನು ರಂಜಿಸುವುದು ಈತನ ಕೆಲಸ. ಇದನ್ನು ವೃತ್ತಿಯಾಗಿಯೇ ಮಾಡಬೇಕಿಲ್ಲ. ಪಾರ್ಟ್ ಟೈಮ್ ಆಗಿ, ಹವ್ಯಾಸವನ್ನು ಉಳಿಸುವ ಸಲುವಾಗಿಯೂ ಮಾಡಬಹುದು.
ತರಬೇತಿ
ಡಿಸ್ಕ್ ಜಾಕಿ ಅಥವಾ ಡಿಜೆ ಟ್ರೈನಿಂಗ್ ಕೋರ್ಸ್, ಡಿಜೆ ಅಕಾಡೆಮಿ, ಸೌಂಡ್ ಮಿಕ್ಸಿಂಗ್ ಮ್ಯೂಸಿಕ್ ಸ್ಕೂಲ್‌ಗಳು ತರಬೇತಿ ನೀಡುತ್ತವೆ. ಮಾತ್ರವಲ್ಲದೆ ಇವುಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳೂ ಇವೆ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.