ಮಾರುತಕ್ಕೆ ರೋವರ್ ಬಲಿ? ಸಂಪರ್ಕ ಕಡಿದುಕೊಂಡ ಮಂಗಳದಲ್ಲಿರುವ ನೌಕೆ
Team Udayavani, Aug 30, 2018, 10:15 AM IST
ವಾಷಿಂಗ್ಟನ್: ಮಂಗಳದ ನೆಲದಲ್ಲಿ ಓಡಾಡುತ್ತಾ ಗ್ರಹದ ಸಂಶೋಧನೆ ನಡೆಸುತ್ತಿದ್ದ ನಾಸಾದ ಆಪರ್ಚುನಿಟಿ ರೋವರ್ ಅಲ್ಲಿನ ಭಾರೀ ಚಂಡಮಾರುತಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.
15 ವರ್ಷಗಳ ಹಿಂದೆ, 2003ರ ಜೂನ್‌ನಲ್ಲಿ ಗಾಲ್ಫ್ ಕಾರ್ಟ್ ಗಾತ್ರದ ರೋಬೋ ಆಪರ್ಚುನಿಟಿಯನ್ನು ನಾಸಾ ಉಡಾಯಿಸಿತ್ತು. 2004ರ ಜನವರಿಯಲ್ಲಿ ಅದು ಮಂಗಳದಲ್ಲಿ ಇಳಿದಿತ್ತು. ಸೌರಶಕ್ತಿಯನ್ನು ಉಪಯೋಗಿಸಿಕೊಂಡು ಮಂಗಳ ಗ್ರಹದ ಮೇಲ್ಮೆ„ನಲ್ಲಿ ಓಡಾಡುತ್ತಾ ಈ ರೋಬೋ ನಾಸಾಕ್ಕೆ ಮಾಹಿತಿ ರವಾನಿಸುತ್ತಿತ್ತು.
ಎರಡು ತಿಂಗಳ ಹಿಂದೆ ಬೀಸಿದ ಧೂಳಿನ ಚಂಡಮಾರುತದಿಂದಾಗಿ ಈ ರೋವರ್ ಕೆಟ್ಟು ಹೋಗಿರುವ ಸಾಧ್ಯತೆಯಿದೆ. ಜೂ.10ರ ಅನಂತರ ಆಪರ್ಚುನಿಟಿ ನಾಸಾದೊಂದಿಗೆ ಸಂಪರ್ಕ ಸಾಧಿಸಿಲ್ಲ. ಎರಡು ವರ್ಷಗಳಿ ಗೊಮ್ಮೆ ಧೂಳಿನ ಚಂಡಮಾರುತ ಮಂಗಳ ಗ್ರಹದಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ ಈ ಬಾರಿ ಹಿಂದೆಂದೂ ಆಗಿರದಷ್ಟು ತೀವ್ರ ಸ್ವರೂಪದಲ್ಲಿತ್ತು. ನಾವು ರೋವರ್‌ನೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿಜ್ಞಾನಿ ಸ್ಟೀವ್ ಸ್ಕ್ವೇರೆಸ್ ಹೇಳಿದ್ದಾರೆ.
ಮಂಗಳದಲ್ಲಿನ ತಾಪಮಾನ -100 ಡಿಗ್ರಿ ಫ್ಯಾ. ತನಕ ಹೋಗುತ್ತದೆ. ಕಡಿಮೆ ತಾಪಮಾನದಲ್ಲಿ ಎಲೆಕ್ಟ್ರಿಕ್ ಸರ್ಕ್ನೂಟ್‌ನಲ್ಲಿನ ಲೋಹಗಳು ಸಂಕುಚಿತಗೊಳ್ಳುತ್ತವೆ. ಆದರೆ ಚಂಡಮಾರುತದಿಂದಾಗಿ ರೋವರ್‌ನ ಸೌರ ಫಲಕದ ಮೇಲೆ ಧೂಳು ಕುಳಿತು ಬೆಳಕಿನ ಕಿರಣವನ್ನು ಅಡ್ಡಿಪಡಿ ಸುತ್ತಿರಬಹುದು, ಇದರಿಂದಾಗಿ ರೋವರ್ ಹಾನಿಗೀಡಾಗಿರಬಹುದು ಎಂದು ಅವರು ಅಂದಾಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.