ಎಪಿಎಂಸಿಯಲ್ಲಿ ಎತ್ತುಗಳ ಸಂತೆ ಆರಂಭಿಸಿ
Team Udayavani, Aug 30, 2018, 2:09 PM IST
ಹರಪನಹಳ್ಳಿ: ಎತ್ತುಗಳ ಸಂತೆ ಜಿಲ್ಲಾ ಕೇಂದ್ರ ದಾವಣಗೆರೆ ಹೊರತುಪಡಿಸಿದರೆ ಯಾವ ತಾಲೂಕು ಕೇಂದ್ರದಲ್ಲಿಯೂ ಇಲ್ಲ. ಹಾಗಾಗಿ ಪಟ್ಟಣದಲ್ಲಿ ಎತ್ತುಗಳ ಸಂತೆ ಆರಂಭಿಸುವಂತೆ ಜಿ.ಪಂ ಸದಸ್ಯ ಎಚ್.ಬಿ. ಪರಶುರಾಮಪ್ಪ ಎಪಿಎಂಸಿ ಆಡಳಿತ ಮಂಡಳಿಗೆ ಸಲಹೆ ನೀಡಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ 2017-18ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿಯಲ್ಲಿ ಸಮಿತಿ ಆಡಳಿತ ಕಚೇರಿಗೆ 1ನೇ ಮಹಡಿ ನಿರ್ಮಾಣ ಕಾಮಗಾರಿಗೆ ಹಾಗೂ 2015-16ನೇ ಸಾಲಿನ ಆರ್‌ಕೆವಿವೈ ಯೋಜನೆಯಲ್ಲಿ ನಿರ್ಮಿಸಲಾದ ಕುರಿ ಮತ್ತು ಮೇಕೆ ಮಾರುಕಟ್ಟೆ ಉದ್ಘಾಟನೆ ನೆರವೇರಿಸಿ ಅವರು
ಮಾತನಾಡಿದರು.
ಪಟ್ಟಣದಲ್ಲಿ ಕುರಿ ಸಂತೆ ಇರಲಿಲ್ಲ, ಹರಿಹರ, ಹಗರಿಬೊಮ್ಮನಹಳ್ಳಿಗೆ ಹೋದರೆ ಹೆದರಿಸಿ ವ್ಯವಹಾರದಲ್ಲಿ ಅನ್ಯಾಯ ಮಾಡುತ್ತಿದ್ದರು. ಕುರಿ ಮಾರಾಟಗಾರರ ಸಂಘ ರಚಿಸಿಕೊಂಡು ಮಾಜಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಅವಧಿಯಲ್ಲಿ ಪುರಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದಾಗ ಹಿಂದಿನ ಶಾಸಕ ಪರಮೇಶ್ವರನಾಯ್ಕ ಸಹಕಾರದಿಂದ ಎಪಿಎಂಸಿ
ಆವರಣದಲ್ಲಿ ಪ್ರತಿ ಸೋಮವಾರ ಕುರಿ ಸಂತೆ ನಡೆಸುವಂತೆ ಅನುಮತಿ ನೀಡಲಾಗಿತ್ತು. ನಂತರ ಎಂ.ಪಿ.ರವೀಂದ್ರ ಅವರು 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕುರಿ ಸಂತೆ ಮಾರುಕಟ್ಟೆ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಎಪಿಎಂಸಿಯಲ್ಲಿನ ಸೌಲಭ್ಯಗಳನ್ನು ರೈತರು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಟಿ.ಎಚ್.ಎಂ. ವಿರುಪಾಕ್ಷಯ್ಯ ಮಾತನಾಡಿ, ಎಂ.ಪಿ. ಪ್ರಕಾಶ್ ಅವರು ಹರಪನಹಳ್ಳಿಗೆ ಮಾರುಕಟ್ಟೆ ಮಂಜೂರು ಮಾಡಿದ್ದರು. ನಂತರ ಎಂ.ಪಿ.ರವೀಂದ್ರ ಅವರು ಎಪಿಎಂಸಿಯಲ್ಲಿ 20 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಶೇಖರಣೆ ಗೋದಾಮು, ಪ್ರಾಂಗಣದಲ್ಲಿ ಕಾಂಕ್ರಿಟ್ ರಸ್ತೆ, ಬಾಡಿಗೆ ಮಳಿಗೆಗಳು, ಕಾಂಪೌಂಡ್ ವಾಲ್, ಕುರಿ ಸಂತೆ ಸೇರಿದಂತೆ ಅಭಿವೃದ್ಧಿ ಮಾಡಿದರು ಎಂದು ಸ್ಮರಿಸಿದರು. ನಿರ್ದೇಶಕ ಬಿ.ಎನ್. ಉಮೇಶ್ ಪ್ರಸ್ತಾವಿಕ ಮಾತನಾಡಿದರು. ಮಾಜಿ ಅಧ್ಯಕ್ಷ ಕೆ.ಎಂ. ಬಸವರಾಜಯ್ಯ, ಎಪಿಎಂಸಿ ಅಧ್ಯಕ್ಷ ಡಿ.ಜಂಬಣ್ಣ, ಉಪಾಧ್ಯಕ್ಷ ಬೆನಕಶೆಟ್ಟಿ ಅಜ್ಜಪ್ಪ, ನಿರ್ದೇಶಕರಾದ ಪಿ.ಸುರೇಶ್, ಎಚ್.ಅಶೋಕಗೌಡ, ಎಚ್.ಭೀರಪ್ಪ, ಬಿ.ಆರ್. ನಳಿನಿ ರಾಮನಗೌಡ, ಎಂ.ಎ.ಅನ್ನಪೂರ್ಣಮ್ಮ, ಕೆ.ಬಸವರಾಜರೆಡ್ಡಿ, ತಾವರ್ಯನಾಯ್ಕ, ಬಿ. ಚಂದ್ರಶೇಖರ್, ಎಂ. ಗುರುನಾಥ್, ಬಿ.ರಾಮಪ್ಪ, ಪಿ. ಮಂಜುಳಾದೇವಿ, ಕಾರ್ಯದರ್ಶಿ ಕೆ.ಶಿಲ್ಪಶ್ರೀ, ತಾ.ಪಂ ಸದಸ್ಯ ನಾಗರಾಜ್, ಹಿರಿಯ ವರ್ತಕ ಧನರಾಜ್, ಎಇಇ ಎಂ.ಬಿ. ರವಿ, ಮುಖಂಡರಾದ ಅಬ್ದುಲ್ ರಹಿಮಾನಸಾಬ್, ಗೊಂಗಡಿ ನಾಗರಾಜ್, ಬೆನ್ನೂರು ಶಶಿಧರ್ ಮತ್ತಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.