ಮಿಜಾರು ಮೋಹನ ಶೆಟ್ಟಿಗಾರರಿಗೆ ಬ್ರಾಮರೀ ಯಕ್ಷಮಣಿ ಪ್ರಶಸ್ತಿ 


Team Udayavani, Aug 31, 2018, 6:00 AM IST

7.jpg

ಬ್ರಾಮರೀ ಯಕ್ಷಮಿತ್ರರು(ರಿ.) ಮಂಗಳೂರು ವಾಟ್ಸಪ್‌ ಬಳಗ ಪ್ರತೀವರ್ಷ ವಾರ್ಷಿಕೋತ್ಸವ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಸಾಧಕರೊಬ್ಬರಿಗೆ ಬ್ರಾಮರಿ ಯಕ್ಷಮಣಿ ಪ್ರಶಸ್ತಿ ಹಾಗೂ ಗೌರವ ಸಂಮಾನ ನೀಡುವ ಮೂಲಕ ಯಕ್ಷಗಾನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ . ತೃತೀಯ ವಾರ್ಷಿಕೋತ್ಸವ ಸೆ.1ರಂದು ಜರಗಲಿದ್ದು, ಮದ್ದಲೆ – ಚೆಂಡೆ ವಾದಕರಾದ ಮಿಜಾರು ಮೋಹನ ಶೆಟ್ಟಿಗಾರ್‌ ಇವರಿಗೆ ಬ್ರಾಮರೀ ಯಕ್ಷಮಣಿ ಪ್ರಶಸ್ತಿ ಪ್ರದಾನಿಸಲಾಗುವುದು ಹಾಗೂ ನೇಪಥ್ಯ ಕಲಾವಿದರಾದ ಬಿ. ಐತಪ್ಪ ಟೈಲರ್‌ ಮತ್ತು ರಘು ಶೆಟ್ಟಿ ನಾಳ ಅವರನ್ನು ಸಮ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಪ್ರತಿಷ್ಠಾನದ ಅಧ್ಯಕ್ಷ,ಭಾಗವತ ಪಟ್ಲ ಸತೀಶ ಶೆಟ್ಟಿಯವರಿಗೆ ಗೌರವ ಸಮ್ಮಾನ ನೀಡಲಾಗುವುದು.

ಮಿಜಾರು ಮೋಹನ ಶೆಟ್ಟಿಗಾರ 
ಶೆಟ್ಟಿಗಾರರು ತೆಂಕುತಿಟ್ಟಿನ ಪ್ರಸಿದ್ಧ ಮದ್ದಲೆ ಚೆಂಡೆ ವಾದಕರು. 15ನೇ ಪ್ರಾಯದಲ್ಲೇ ಗುರುಪುರ ಅಣ್ಣಿಭಟ್‌ ರವರಲ್ಲಿ ಚೆಂಡೆ – ಮದ್ದಲೆ ವಾದನ ಕಲಿತುಕೊಂಡು ಪರಿಣತರಾದರು.1982ರಲ್ಲಿ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರಿಂದ ಆಹ್ವಾನ ಬಂದಾಗ ಅದರಲ್ಲಿ ಸೇರಿದರು . ಆಗ ಭಾಗವತರಾಗಿದ್ದವರು ಕುರಿಯ ಗಣಪತಿ ಶಾಸ್ತ್ರಿ ಹಾಗೂ ಮುಖ್ಯ ಮದ್ದಲೆಗಾರರಾಗಿದ್ದವರು ನೆಡ್ಲೆ ನರಸಿಂಹ ಭಟ್ಟರು . ಇವರಿಬ್ಬರ ಸಾಂಗತ್ಯದಲ್ಲಿ ಶೆಟ್ಟಿಗಾರರಿಗೆ ಅಪೂರ್ವವಾದ ಅನುಭವ ದೊರಕಿತು . ಮೇಳದಲ್ಲಿದ್ದ ಕಲಾವಿದರೂ ದಿಗ್ಗಜರೇ ಆಗಿದ್ದ ಕಾರಣ ಶೆಟ್ಟಿಗಾರು ಹಿಮ್ಮೇಳ ವಾದನದಲ್ಲಿ ನೈಪುಣ್ಯತೆ ಗಳಿಸಿದರು. ಚೌಕಿಪೂಜೆಗೆ ಮದ್ದಲೆ ಹಿಡಿದರೆ , ಮುಂಜಾವು ಮಂಗಲಕ್ಕೇ ಮದ್ದಲೆ ಕೆಳಗಿಡುವುದು . ಅನಂತರ ಕರ್ಣಾಟಕ ಮೇಳಕ್ಕೆ ಹೋಗಿ ದಾಮೋದರ ಮಂಡೆಚ್ಚ, ಕಾಂಚನ ನಾರಾಯಣ ಭಟ್ಟ , ದಿನೇಶ ಅಮ್ಮಣ್ಣಾಯ , ಬೊಟ್ಟಿಕೆರೆ ಪುರುಷೋತ್ತಮ ಪೂಂಜರಂಥ ಭಾಗವತ ದಿಗ್ಗಜರಿಗೆ ಸಾಥಿಯಾಗಿ ಮೆರೆದರು. ಈಗ ಕಟೀಲು ಮೂರನೇ ಮೇಳದಲ್ಲಿ ವೃತ್ತಿ ನಿರತರಾಗಿರುವ ಮೋಹನ ಶೆಟ್ಟಿಗಾರರು 35 ವರ್ಷಗಳ ತಿರುಗಾಟದ ಅನುಭವ ಹೊಂದಿದ್ದಾರೆ. ರಾಕ್ಷಸ ಪಾತ್ರಗಳ ತೆರೆಪೊರಪ್ಪಾಟು , ಹನುಮಂತನ ಪ್ರವೇಶ , ಕಿರಾತನ ಪ್ರವೇಶ , ಶ್ರೀರಾಮನ ಒಡ್ಡೋಲಗ, ಶ್ರೀಕೃಷ್ಣನ ಒಡ್ಡೋಲಗ ಮುಂತಾದ ಅಪೂರ್ವ ಸನ್ನಿವೇಶಗಳ ಹಿಮ್ಮೇಳ ವಾದನ ಅರಿತವರಲ್ಲಿ ಶೆಟ್ಟಿಗಾರರೂ ಓರ್ವರು. 

ಐತಪ್ಪ ಟೈಲರ್‌ 
ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಬೇತದವರಾದ ಐತಪ್ಪ ಟೈಲರ್‌ ಎರಡನೇ ತರಗತಿ ಮುಗಿಸಿ ಕುರಿಯ ವಿಠಲ ಶಾಸ್ತ್ರಿಗಳ ಪ್ರೇರಣೆಯಿಂದ ಧರ್ಮಸ್ಥಳ ಮೇಳದಲ್ಲಿ ನಿತ್ಯವೇಷಕ್ಕೆ ಸೇರಿದರು.10 ವರ್ಷಗಳ ಕಾಲ ತಿರುಗಾಟ ನಡೆಸಿ ಮೇಳ ಬಿಟ್ಟ ಬಳಿಕ ಒಲಿದದ್ದು ಟೈಲರ್‌ ಕೆಲಸ . ಯಕ್ಷಗಾನದ ಎಲ್ಲಾ ಪಾತ್ರಗಳ ಅನುಭವ ಹಾಗೂ ಮಾಹಿತಿಯಿರುವ ಕಾರಣ ಯಕ್ಷಗಾನದ ವೇಷಭೂಷಣಗಳ ತಯಾರಿಯಲ್ಲಿ ತೊಡಗಿಸಿಕೊಂಡ‌ರು.ತೆಂಕು – ಬಡಗು ಎರಡೂ ತಿಟ್ಟುಗಳ ಪೌರಾಣಿಕ, ಐತಿಹಾಸಿಕ, ಸಾಂಪ್ರದಾಯಿಕ ಹಾಗೂ ನಾಟಕೀಯ ವೇಷಭೂಷಣಗಳ ತಯಾರಿಯಲ್ಲಿ ವಿಶೇಷ ಪರಿಣತಿ ಹೊಂದಿರುವ ಅನುಭವಿಗಳು.

 ರಘು ಶೆಟ್ಟಿ ನಾಳ 
ನಲವತ್ತು ವರ್ಷಗಳಿಂದ ಕಟೀಲು ಮೇಳದಲ್ಲಿ ನೇಪಥ್ಯ ಕಲಾವಿದರಾಗಿದ್ದಾರೆ ನಾಳ ರಘು ಶೆಟ್ಟಿ. ಚೌಕಿಯಲ್ಲಿ ರಂಗ ಸಹಾಯಕರಾಗಿ ಕಲಾವಿದರ ಪಾತ್ರ ಪೋಷಣೆಗೆ ಸಹಕಾರಿಯಾಗುವ ಕೆಲಸಗಳನ್ನು ಮಾಡುವ ಹಿರಿಯ ವ್ಯಕ್ತಿ . ಎಲ್ಲಾ ವೇಷಗಳು ಸಿದ್ಧವಾಗಬೇಕಾದರೆ ಹಿನ್ನೆಲೆಯಲ್ಲಿ ರಘುರವರ ಸಹಾಯ ಅಗತ್ಯ . ಚುರುಕಿನಿಂದ ಚೌಕಿಯಲ್ಲಿ ಓಡಾಡುವ ರಘುಶೆಟ್ಟರೆಂದರೆ , ಕಲಾವಿದರಿಗೂ ಪ್ರೀತಿ , ಅಭಿಮಾನ. ಎಲ್ಲಾ ಪ್ರಸಂಗಗಳ ರಂಗ ಮಾಹಿತಿ ಹೊಂದಿರುವ ರಘುರವರು ಪ್ರಸಂಗದ ಓಟಕ್ಕೆ ಬೇಕಾಗುವ ಪರಿಕರಗಳ , ಪಾತ್ರಗಳ ವೇಷಭೂಷಣ , ಮಣಿ ಆಭರಣಗಳ , ಆಯುಧಗಳ ಖಚಿತವಾದ ಜ್ಞಾನ ಹೊಂದಿದ್ದು ಅದನ್ನು ಮೊದಲೇ ಸಿದ್ಧಪಡಿಸುವಲ್ಲಿ ನಿಷ್ಣಾತರು. 
 
 ಎಂ.ಶಾಂತರಾಮ ಕುಡ್ವ 

ಟಾಪ್ ನ್ಯೂಸ್

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.