ಮಗನ ಜಯ; ಅಪ್ಪನ ಹಾದಿ

Team Udayavani, Aug 31, 2018, 6:00 AM IST

21.jpg

ಕನ್ನಡದಲ್ಲಿ ಕಿರುಚಿತ್ರಗಳ ಕಲರವ ಕೊಂಚ ಜಾಸ್ತಿಯೇ ಇದೆ. ಸಿನಿಮಾ ನಿರ್ದೇಶಿಸುವ ಕನಸು ಹೊತ್ತು ಬರುವ ಪ್ರತಿಭಾವಂತರು, ಮೊದಲು ಕಿರುಚಿತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಆ ನಂತರ ಚಿತ್ರ ನಿರ್ದೇಶಕನಕ್ಕೆ ಕೈಹಾಕುತ್ತಿದ್ದಾರೆ. “ವಿದಾತೃ’ ಕಿರುಚಿತ್ರ ನಿರ್ದೇಶಿಸಿರುವ ಸಂತು ಕೂಡ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಇತ್ತೀಚೆಗೆ ಕಿರುಚಿತ್ರ ಪ್ರದರ್ಶನ ಏರ್ಪಡಿಸಿದ್ದ ಸಂತು, ತಮ್ಮ ಮೊದಲ ಪ್ರಯತ್ನ ಕುರಿತು ಹೇಳಿದ್ದಿಷ್ಟು.
“ಇದು 27 ನಿಮಿಷದ ಕಿರುಚಿತ್ರ. ನನ್ನ ಕನಸಿಗೆ ಬಣ್ಣ ತುಂಬಿದ್ದು ನಾಯಕ ವಿವೇಕ್‌ ಸಿಂಹ. ನಾನು ರಂಗಭೂಮಿಯಲ್ಲಿ ಕೆಲಸ ಮಾಡಿಕೊಂಡಿದ್ದೆ. ಎಲ್ಲೋ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವನು ಆ ಕೆಲಸ ಬಿಟ್ಟು ಬಂದೆ. ನನ್ನ ಮುಂದೆ ಸಿನಿಮಾ ಕಾಣುತ್ತಿತ್ತು. ಒಂದು ಚಿತ್ರ ಮಾಡಬೇಕು ಎಂಬ ಆಸೆ ಚಿಗುರಿತು. ಒಮ್ಮೆ ವಿವೇಕ್‌ ಸಿಂಹ ಅವರನ್ನು ರಿಯಾಲಿಟಿ ಶೋ ಒಂದರಲ್ಲಿ ಭೇಟಿಯಾದೆ. ಆಗಲೇ ನನಗೆ, ಕಥೆ ಬರೆಯಬೇಕು ಎಂಬ ಯೋಚನೆ ಬಂತು. ಹಾಗೊಂದು ಕಥೆ ಮಾಡಿಕೊಂಡು ವಿವೇಕ್‌ ಬಳಿ ಹೋದೆ. ಹಿಂದೆ ಮುಂದೆ ನೋಡದೆ, ಒಪ್ಪಿ ಪ್ರೋತ್ಸಾಹಿಸಿದ್ದಕ್ಕೆ “ವಿದಾತೃ’ ಕಿರುಚಿತ್ರವಾಗಿದೆ’ ಎಂದು ವಿವರ ಕೊಟ್ಟರು ಸಂತು. “ಇದು ಅಪ್ಪ-ಮಗನ ಸಂಬಂಧವಿರುವ ಚಿತ್ರ. ಮಗನಿಗೆ ನಿರ್ದೇಶಕನಾಗುವ ಆಸೆ. ಆದರೆ, ಅದು ಸಾಧ್ಯವಾಗಲ್ಲ. ಮನೆಯಲ್ಲಿ ಹೇಳಿಕೊಳ್ಳುವ ಸ್ಥಿತಿ ಇರಲ್ಲ. ಆದರೂ, ಅವನಿಗೆ ನಿರ್ದೇಶಕ ಆಗುವ ಕನಸು. ಅಪ್ಪನ ಅನಾರೋಗ್ಯ ಒಂದು ಕಡೆ, ಕೆಲಸವಿಲ್ಲದೆ ಅಲೆದದಾಡುವ ಮಗ ಇನ್ನೊಂದು ಕಡೆ, ಓದುವ ತಂಗಿ ಮತ್ತೂಂದು ಕಡೆ. ಸದಾ ಯಾವುದಾದರೊಂದು ಕೆಲಸ ಮಾಡೋ ಎಂದು ಹೇಳುವ ಅಮ್ಮ ಮಗದೊಂದು ಕಡೆ. ಇವಿಷ್ಟು ಅಂಶ ಇಟ್ಟುಕೊಂಡು ಕಥೆ ಬರೆದು ಮಾಡಿದ ಚಿತ್ರವಿದು. ಎಲ್ಲರ ಸಹಕಾರ ಇದ್ದುದರಿಂದಲೇ “ವಿದಾತ್ರು’ ನಿಮ್ಮ ಮುಂದೆ ಬರಲು ಸಾಧ್ಯವಾಯ್ತು’ ಅಂದರು ನಿರ್ದೇಶಕ ಸಂತು.

ವಿವೇಕ್‌ ಸಿಂಹ ಅವರಿಗೆ ಎಲ್ಲರ ಪ್ರೋತ್ಸಾಹದಿಂದ ಇಂಥದ್ದೊಂದು ಕಿರುಚಿತ್ರ ಮಾಡಲು ಸಾಧ್ಯವಾಯ್ತಂತೆ. ಯಾವುದೇ ಸಿನಿಮಾಗೆ ಕಡಿಮೆ ಇಲ್ಲದಂತೆ, “ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಚಿತ್ರ ಮಾಡಬೇಕು ಅಂತ ಹೊರಟಾಗ, ಮಧ್ಯೆ ಒಂದು ಕಡೆ ಹಣದ ಸಮಸ್ಯೆ ಎದುರಾಯ್ತು. ಕೊನೆಗೆ, ನವೀನ್‌ ಎಂಬುವವರು ಸಾಥ್‌ ನೀಡಿ ಪ್ರೋತ್ಸಾಹಿಸಿದರು. ಈ ಚಿತ್ರಕ್ಕೆ ರಾಘವೇಂದ್ರ, ಮಧು, ಗೌತಮ್‌, ಗೋವಿಂದ್‌, ಹೃಷಿಕೇಶ್‌, ರಕ್ಷಿತ್‌, ಸುನೀಲ್‌ ಕುಲಕರ್ಣಿ,ನಿಸರ್ಗ ಎಲ್ಲರ ಶ್ರಮ ಚಿತ್ರಕ್ಕಿದೆ’ ಎಂದರು ವಿವೇಕ್‌. 

ತೇಜಸ್ವಿನಿ ಶೇಖರ್‌ ನಾಯಕಿಯಾಗಿ ನಟಿಸಿದರೆ, ನಾಗೇಂದ್ರ ಶಾ ಮತ್ತು ಪದ್ಮಕಲಾ ಅಪ್ಪ-ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ನಿಸರ್ಗ, ಗಿರೀಶ್‌, ವಿನೋದ್‌, ಜ್ಯೋತಿ ನಗರ್‌ ಪುರುಷೋತ್ತಮ್‌, ರಾಘವೇಂದ್ರ, ಸುನೀಲ್‌ಕುಲಕರ್ಣಿ ಅಭಿನಯವಿದೆ. ಚಿತ್ರಕ್ಕೆ ಕಾರ್ತಿಕ್‌ ಶರ್ಮ ಅವರು “ಅಪ್ಪ ಎಂಬ ಆಕಾಶ’ ಎಂಬ ಹಾಡಿಗೆ ಸಂಗೀತ ನೀಡಿದ್ದಾರೆ. ಆಶ್ಲೇ ಮೆಂಡೋಂಸಾ ಹಿನ್ನೆಲೆ ಸಂಗೀತವಿದೆ. ವಿಶ್ವಾಸ್‌ ಕೌಂಡಿನ್ಯ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.