ಇಂದು ಮುದ್ದೇಬಿಹಾಳ ಪುರಸಭೆಗೆ ಮತದಾನ
Team Udayavani, Aug 31, 2018, 2:25 PM IST
ಮುದ್ದೇಬಿಹಾಳ: ಇಲ್ಲಿನ ಪುರಸಭೆಯ 22 ವಾರ್ಡ್‌ಗಳಿಗೆ ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಇದಕ್ಕಾಗಿ ಒಟ್ಟು 24 ಮತಗಟ್ಟೆಗಳನ್ನು ರಚಿಸಲಾಗಿದೆ. ಗುರುವಾರ ಮಸ್ಟ್‌ರಿಂಗ್ ಕೇಂದ್ರ ಎಂಜಿವಿಸಿ ಕಾಲೇಜಿನಿಂದ ಮತದಾನ ಸಿಬ್ಬಂದಿ ಸಾಮಗ್ರಿ ಪಡೆದುಕೊಂಡು ತಮಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ
ತೆರಳಿ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.
12,397 ಪುರುಷ, 12,336 ಮಹಿಳೆ, 10 ಇತರರು ಸೇರಿ ಒಟ್ಟು 24,743 ಮತದಾರರು ಮತ ಚಲಾಯಿಸುವ ಹಕ್ಕು ಪಡೆದುಕೊಂಡಿದ್ದಾರೆ. 22 ವಾರ್ಡ್ ಪೈಕಿ 15 ವಾರ್ಡ್‌ಗಳನ್ನು ಸಾಧಾರಣ, 11, 13, 14, 20 ಸೇರಿ 4 ವಾರ್ಡ್‌ಗಳನ್ನು
ಸೂಕ್ಷ್ಮ ಹಾಗೂ 5, 10, 21 (2 ಮತಗಟ್ಟೆಗಳು), 22 ಸೇರಿ 5 ವಾರ್ಡ್‌ಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ.
ಇಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮತದಾನ ಕರ್ತವ್ಯ ನಿರ್ವಹಿಸಲು 104 ಮತದಾನ ಸಿಬ್ಬಂದಿ ನಿಯೋಜಿಸಲಾಗಿದೆ. ಮತಗಟ್ಟೆಗಳಿಗೆ ಭದ್ರತೆ ಒದಗಿಸಲು
ಮತ್ತು ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಒಬ್ಬ ಸಿಪಿಐ, 5 ಪಿಎಸೈ, 13 ಎಸೈ, 26 ಹೆಡ್‌ಕಾನ್ಸಟೇಬಲ್, 48 ಕಾನ್ಸಟೇಬಲ್, 3 ಡಿಎಆರ್ ಹಾಗೂ 1 ಐಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಮತದಾನ ಮುಗಿದ ಮೇಲೆ ಎಂಜಿವಿಸಿ ಕಾಲೇಜಿನಲ್ಲೇ ಡಿಮಸ್ಟರಿಂಗ್ ಕೇಂದ್ರ ಆರಂಭಿಸಿದ್ದು, ಇಲ್ಲೇ ಮತದಾನ ಸಾಮಗ್ರಿ ಸ್ವೀಕರಿಸುವ ಮತ್ತು ಮತಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಭದ್ರಪಡಿಸಲು ಕ್ರಮ ಕೈಕೊಳ್ಳಲಾಗಿದೆ. ಮತದಾನ ಸಾಮಗ್ರಿ ಸಾಗಿಸುವ ವೇಳೆ ಚುನಾವಣಾ ವೀಕ್ಷಕರೂ ಆಗಿರುವ ಆಲಮಟ್ಟಿ ಕೆಬಿಜೆಎನ್ನೆಲ್ ನ ವಿಶೇಷ ಭೂಸ್ವಾಧೀನಾಧಿ ಕಾರಿ ಸೋಮಲಿಂಗ ಗೆಣ್ಣೂರ, ತಹಶೀಲ್ದಾರ್ ಎಂ.ಎನ್. ಚೋರಗಸ್ತಿ, ಪ್ರೊಬೇಶನರಿ ಗ್ರೇಡ್ -2 ತಹಶೀಲ್ದಾರ್ ಡಾ.ಎಚ್.ಎಸ್.ಸಜ್ಜನ, ತಾಳಿಕೋಟೆ ತಹಶೀಲ್ದಾರ್ ಸುಭಾಶ ಅರಕೇರಿ, ಚುನಾವಣಾಧಿ ಕಾರಿಗಳು, ಸೆಕ್ಟರ್ ಅಧಿಕಾರಿಗಳು, ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.
ಹಣಾಹಣಿ ತೀವ್ರ: ಅವಿರೋಧ ಆಯ್ಕೆಗೊಂಡಿರುವ 18ನೇ ವಾರ್ಡ್ ಹೊರತುಪಡಿಸಿ ಉಳಿದ 22 ವಾರ್ಡ್‌ಗಳಲ್ಲಿ ಬಿಜೆಪಿಯ 20, ಕಾಂಗ್ರೆಸ್‌ನ 19, ಜೆಡಿಎಸ್‌ನ 15 ಹಾಗೂ ಪಕ್ಷೇತರರು 21 ಸೇರಿ ಒಟ್ಟು 75 ಅಭ್ಯರ್ಥಿಗಳ ಭವಿಷ್ಯ
ಮತಯಂತ್ರದಲ್ಲಿ ಭದ್ರಗೊಳ್ಳಲಿದೆ. 2, 8, 14ನೇ ವಾರ್ಡನಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ, 17ನೇ ವಾರ್ಡ್‌ನಲ್ಲಿ
ಬಿಜೆಪಿ ಪಕ್ಷೇತರ ನಡುವೆ ನೇರ ಹಣಾಹಣಿ ಇದೆ. 3, 7, 13, 15, 23ನೇ ವಾರ್ಡ್‌ನಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ 4,
22ನೇ ವಾರ್ಡ್‌ನಲ್ಲಿ ಬಿಜೆಪಿ, ಜೆಡಿಎಸ್, ಪಕ್ಷೇತರ ಮತ್ತು 5, 6, 19ನೇ ವಾರ್ಡ್‌ನಲ್ಲಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರರ
ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇನ್ನುಳಿದ 1, 9, 10, 11, 12, 16, 20, 21ನೇ ವಾರ್ಡ್‌ಗಳಲ್ಲಿ 3ಕ್ಕಿಂತ ಹೆಚ್ಚು
ಅಭ್ಯರ್ಥಿಗಳಿದ್ದು ಬಹುಮುಖ ಸ್ಪರ್ಧೆ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.