ಬೆಳಗ್ಗೆ ದ್ವಿಚಕ್ರ ವಾಹನಕ್ಕೆ ಕಿಕ್‌ಸ್ಟಾರ್ಟ್ ಯಾಕೆ ಬೆಸ್ಟ್ ?
Team Udayavani, Aug 31, 2018, 2:29 PM IST
ನಿಮ್ಮ ಬಳಿ ಮೋಟಾರು ಬೈಕ್ ಅಥವಾ ಸ್ಕೂಟರ್ ಇದ್ದರೆ, ಬೆಳಗ್ಗೆ ಕಿಕ್‌ಸ್ಟಾರ್ಟ್ ಮಾಡಿ ಎಂದು ಕೆಲವರು ಸಲಹೆ ನೀಡಿರುವುದನ್ನು ಕೇಳಿರಬಹುದು. ಬೆಳಗ್ಗೆ ಸೆಲ್ಫ್ ಸ್ಟಾರ್ಟ್ ಬಳಕೆ ಬದಲು ಇದೇ ಬೆಸ್ಟ್ ಎಂದು ಹೇಳಿರಬಹುದು. ಅದಕ್ಕೆ ಕಾರಣವಿದೆ.
ಕಿಕ್‌ಸ್ಟಾರ್ಟ್‌ನಲ್ಲಿ ಏನಾಗುತ್ತೆ?
ಕಿಕ್‌ಸ್ಟಾರ್ಟ್‌ನಲ್ಲಿ ಮೂಲತಃ ಎಂಜಿನ್‌ನ ಹೃದಯಕ್ಕೆ ಕೆಲಸ ಸಿಗುತ್ತದೆ. ಹಲವು ದಿನಗಳ ಕಾಲ ನಿಂತಿದ್ದ ದ್ವಿಚಕ್ರ ವಾಹನ ಅಥವಾ ಎಂಜಿನ್ 7- 8 ಗಂಟೆ ಕಾಲ ನಿಂತೇ ಇದ್ದ ಸ್ಥಿತಿಯಲ್ಲಿದ್ದಾಗ ಎಂಜಿನ್ ಸಾಕಷ್ಟು ತಂಪಾಗಿರುತ್ತದೆ. ಇದನ್ನು ಮತ್ತೆ ಸರಿಪಡಿಸಲು ಕಿಕ್‌ಸ್ಟಾರ್ಟ್ ಅನುಕೂಲಕರ. ಕಿಕ್‌ಸ್ಟಾರ್ಟ್ ವೇಳ ಕ್ರಾಂಕ್‌ಶಾಫ್ಟ್ ತಿರುಗಿ ಪಿಸ್ಟನ್ ಅನ್ನು ಪಿಸ್ಟನ್ ಹೆಡ್ ಭಾಗಕ್ಕೆ ಹೋಗುವಂತೆ ಮಾಡುತ್ತದೆ. ಇದರಿಂದಾಗಿ ಹೆಚ್ಚಿನ ಒತ್ತಡ ನಿರ್ಮಾಣವಾಗಿ ಸುಲಭವಾಗಿ ಸ್ಪಾರ್ಕ್ ಆಗಲು ನೆರವಾಗುತ್ತದೆ. ನಿರಂತರ ಪಿಸ್ಟನ್ ಚಾಲನೆಗೊಂಡು ಸುಲಭವಾಗಿ ಎಂಜಿನ್ ಸ್ಟಾರ್ಟ್ ಆಗಲು ನೆರವಾಗುತ್ತವೆ. ಕಿಕ್‌ಸ್ಟಾಟ್‌ನಿಂದಾಗಿ ವೇಗವಾಗಿ ಗಾಳಿ-ಪೆಟ್ರೋಲ್ ಮಿಶ್ರವಾಗಲೂ ನೆರವಾಗುತ್ತದೆ.
ಬೆಳಗ್ಗೆ ಯಾಕೆ ?
ಎಂಜಿನ್ ಅತ್ಯಂತ ತಂಪಾಗಿದ್ದು, ಆಯಿಲ್ ಎಲ್ಲವೂ ತಳದಲ್ಲಿರುತ್ತದೆ. ಈ ಸಂದರ್ಭ ಬ್ಯಾಟರಿ ಕೂಡ ತಂಪಾಗಿರುತ್ತದೆ. ಅದರ ರಾಸಾಯನಿಕಗಳು ಚಾಲನೆಯಲ್ಲಿ ಇಲ್ಲದೇ ಇರುವುದರಿಂದ ಅದರ ಶಕ್ತಿಯೂ ಅಲ್ಪ ಕುಂದಿರುತ್ತದೆ. ಈ ವೇಳೆ ಸೆಲ್ಫ್ ಸ್ಟಾರ್ಟ್ ಮಾಡುವುದರಿಂದ ಬ್ಯಾಟರಿ ಮೇಲೆ ಹೆಚ್ಚಿನ ಒತ್ತಡ ಹೇರುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಬೆಳಗ್ಗೆ ಕಿಕ್ ಸ್ಟಾರ್ಟ್ ಮಾಡಿ ಬಳಿಕ ಎಂಜಿನ್ ಬಿಸಿಯಾದ/ ಚಾಲನೆ ಬಳಿಕ ಬೇಕೆಂದಾಗ ಸೆಲ್ಫ್ ಸ್ಟಾರ್ಟ್ ಬಳಸುವುದು ಉತ್ತಮ.
ಆಧುನಿಕ ಬೈಕ್‌ಗಳಲ್ಲಿ ಬೇಡ?
ಆಧುನಿಕ ಬೈಕ್‌ಗಳಲ್ಲಿ ಕಿಕ್‌ಗಳೇ ಇರುವುದಿಲ್ಲ. ಇಂತಹುವುಗಳಲ್ಲಿ ಏನು ಮಾಡುವುದು ಎಂಬ ಪ್ರಶ್ನೆ ಇರಬಹುದು. ಆಧುನಿಕ ಬೈಕ್‌ಗಳಲ್ಲಿ ಎಂಜಿನ್ ವಿನ್ಯಾಸ ಬೇರೆ ರೀತಿ ಇರುತ್ತದೆ. ಜತೆಗೆ ಬ್ಯಾಟರಿ ‘ಸುಪ್ತಾವಸ್ಥೆಗೆ’ ಹೋಗದ ರೀತಿ ವಿನ್ಯಾಸ ಮಾಡಲಾಗಿರುತ್ತದೆ. ಈ ಕಾರಣದಿಂದ ಇಂತಹ ಬೈಕ್‌ಗಳು ಹೆಚ್ಚು ದುಬಾರಿಯೂ ಹೌದು.
ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.