ನವೆಂಬರ್ನಲ್ಲಿ ಯುಕೆ ಮಾರುಕಟ್ಟೆಗೆ ವೂಟ್, 18 ವೆಬ್ ಸಿರೀಸ್
Team Udayavani, Aug 31, 2018, 5:13 PM IST
ಮುಂಬಯಿ : ವಯಾಕಾಮ್ 18 ರ ಜಾಹೀರಾತು ಸಂಚಾಲಿತ ವಿಡಿಯೋ ಆನ್ ಡಿಮ್ಯಾಂಡ್ ಪ್ಲಾಟ್ ಫಾರ್ಮ್ ಎಂದೇ ಖ್ಯಾತವಾಗಿರುವ ವೂಟ್ ಅಂತಾರಾಷ್ಟ್ರೀಯ ವಿತರಣೆಯನ್ನು ಆರಂಭಿಸಲಿದ್ದು ಇದೇ ನವೆಂಬರ್ನಲ್ಲಿ ಯುನೈಟೆಡ್ ಕಿಂಗ್ಡಮ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಕಂಪೆನಿಯ ಹೇಳಿಕೆಯ ಪ್ರಕಾರ 18 ಬಹು ಭಾಷೀಯ ಪ್ರಮುಖ ವೆಬ್ ಸಿರೀಸ್ ಗಳನ್ನು ಆರಂಭಿಸಲಾಗುವುದಲ್ಲದೆ ತನ್ನ ಹೂರಣದೊಂದಿಗೆ ಸುದ್ದಿಯನ್ನು ಕೂಡ ಒದಗಿಸಲಾಗುವುದು ಎಂದು ತಿಳಿದು ಬಂದಿದೆ.
ಗಮನಾರ್ಹ ಸಂಖ್ಯೆಯ ಭಾರತೀಯ ಮೂಲದವರು ಇರುವ ಯುನೈಟೆಡ್ ಕಿಂಗ್ಡಮ್ ಮಾರುಕಟ್ಟೆ ಪ್ರವೇಶದಿಂದ ತನ್ನ ಉದ್ಯಮ ವ್ಯಾಪ್ತಿ ಅಂತಾರಾಷ್ಟ್ರೀಯ ಉದ್ದಗಲದಲ್ಲಿ ಚಾಚಿಕೊಳ್ಳಲಿದೆ ಎಂದು ವೂಟ್ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.