ಧಾರವಾಡ ಸಂಗೀತ ವಿದ್ಯಾಕಾಶಿ ಎಂದಾಗಲಿ: ಪಂ| ಗುರವ
Team Udayavani, Aug 31, 2018, 5:21 PM IST
ಧಾರವಾಡ: ವಿದ್ಯಾಕಾಶಿ ಎಂಬ ಖ್ಯಾತಿ ಹೊಂದಿರುವ ಧಾರವಾಡವು ಸಂಗೀತ ವಿದ್ಯಾಕಾಶಿ ಎಂಬುದಾಗಿ ಹೆಸರಿಸಿ ಈ ನಗರಕ್ಕೆ ನಾಮಕರಣ ಆಗುವಂತೆ ಸಂಗೀತಾಸಕ್ತರೆಲ್ಲ ಪ್ರಯತ್ನಿಸಬೇಕು ಎಂದು ಸಂಗೀತ ವಿದ್ವಾಂಸ ಪಂ| ಕೈವಲ್ಯಕುಮಾರ ಗುರವ ಹೇಳಿದರು.
ನಗರದ ಕವಿಸಂನಲ್ಲಿ ಕಲಾ ಮಂಟಪವು ಆಯೋಜಿಸಿದ್ದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧಾರವಾಡವು ಜಗತ್ತಿನಲ್ಲಿಯೇ ಖ್ಯಾತಿ ಹೊಂದಿದ ಶ್ರೇಷ್ಠ ಸಂಗೀತಗಾರರನ್ನು ನೀಡಿದೆ. ಅಲ್ಲದೆ, ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಮೂಲಕ ಹೊಸ ಹೊಸ ಸಂಗೀತ ಕಲಾ ಪ್ರತಿಭೆಯನ್ನು ಬೆಳೆಸುತ್ತಿದೆ. ಇಂತಹ ಧಾರವಾಡಕ್ಕೆ ಬರುವ ಹೊರರಾಜ್ಯದ ಬಂಧುಗಳಿಗೆ ಸಂಗೀತ ದಿಗ್ಗಜರ ನೆನಪನ್ನು ಕೊಡಲು ನಗರದ ಮುಖ್ಯ ದ್ವಾರಗಳಲ್ಲಿ ಸಂಗೀತ ವಿದ್ಯಾಕಾಶಿ ಧಾರವಾಡಕ್ಕೆ ಸ್ವಾಗತ ಎಂಬ ಸುಂದರ ನಾಮಫಲಕ ಅಳವಡಿಸಬೇಕು ಎಂದರು.
ಡಾ| ಅರಣ್ಯಕುಮಾರ ಮುನೆನ್ನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಸಂಗೀತ ಕಲಿಯುವತ್ತ ಒಲವು ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಅವರು ತಮ್ಮ ಅಭ್ಯಾಸದ ಸಾಧನೆಯ ಜೊತೆಗೆ ಮತ್ತೊಬ್ಬರ ಸಂಗೀತ ಕೇಳುವ ರೂಢಿ ಬೆಳೆಸಿಕೊಳ್ಳಬೇಕು. ಇದು ಅವರ ಅಧ್ಯಯನಕ್ಕೆ ಪೂರಕವಾಗಿರುತ್ತದೆ ಎಂದು ಹೇಳಿದರು.
ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಇದ್ದರು. ಮೇಘಾ ಹುಕ್ಕೇರಿ ಪ್ರಾರ್ಥಿಸಿದರು. ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ಸ್ವಾಗತಿಸಿದರು. ಕೆ.ಎಚ್. ನಾಯಕ ನಿರೂಪಿಸಿದರು. ಎಸ್.ಸಿ. ನೀರಾವರಿ ವಂದಿಸಿದರು. ನಂತರ ಮೈಸೂರಿನ ಗಾಯಕ ರಮೇಶಕುಮಾರ ಕೋಲಕುಂದ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಿತು. ಸಂವಾದಿನಿಯಲ್ಲಿ ಡಾ| ಅರ್ಜುನ ವಠಾರ ಹಾಗೂ ತಬಲಾದಲ್ಲಿ ಅಲ್ಲಮಪ್ರಭು ಕಡಕೋಳ ಸಾಥ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.