ಕುತುಬ್ ಮೀರಿಸುವ ತ್ಯಾಜ್ಯ
Team Udayavani, Sep 1, 2018, 6:00 AM IST
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 73 ಮೀಟರ್ ಎತ್ತರವಿರುವ ಐತಿಹಾಸಿಕ ಕುತುಬ್ ಮಿನಾರ್ ಅನ್ನು ಮೀರಿಸುವ ಆಕೃತಿ ಏನಾದರೂ ಇದೆಯೇ? ಖಂಡಿತಾ ಇದೆ. ಅದೇನೆಂದರೆ, ದೆಹಲಿ ಹೊರವಲಯದ ಗಾಜಿಪುರದಲ್ಲಿರುವ ಕಸದ ರಾಶಿ. ಅದೀಗ 65 ಮೀಟರ್ ಎತ್ತರಕ್ಕೆ ಏರಿದೆ. ಈ ಕಸದ ಪ್ರಮಾಣ ಇನ್ನು ಎಂಟು ಮೀಟರ್‌ಗಳಷ್ಟು ಎತ್ತರಕ್ಕೇರಿದರೆ ಐತಿಹಾಸಿಕ ಕಟ್ಟಡದ ಎತ್ತರಕ್ಕೆ ಸರಿಸಮನಾಗುತ್ತದೆ.
ಅಂದ ಹಾಗೆ ಪೂರ್ವ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ (ಇಡಿಎಂಸಿ)ಬಳಿಯೇ ಕಸದ ಎತ್ತರದ ಕುರಿತ ಸಾಂಖೀಕ ಮಾಹಿತಿಗಳಿವೆ ಎಂದು “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ಕಳೆದ ವರ್ಷ ಸೆ.1ರಂದು ಗಾಜಿಪುರದ ಕಸದ ರಾಶಿ ಕುಸಿದು ಬಿದ್ದು, ಇಬ್ಬರು ಅಸುನೀಗಿದ್ದರು. ಮಾರ್ಚ್‌ನಲ್ಲಿ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ಗಾಜಿಪುರದಲ್ಲಿನ ಕಸದ ರಾಶಿ ಕುತುಬ್‌ಮಿನಾರ್ ಮೀರಿಸುವ ದಿನಗಳು ದೂರವಿಲ್ಲ ಎಂದು ಟೀಕಿಸಿತ್ತು.
ಪೂರ್ವ ದೆಹಲಿ ವ್ಯಾಪ್ತಿಯಲ್ಲಿ ಉಂಟಾಗು ತ್ತಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಬದಲಿ ವ್ಯವಸ್ಥೆ ಇಲ್ಲ. ಜತೆಗೆ ಹಣಕಾಸಿನ ಮುಗ್ಗಟ್ಟೂ ಇದೆ ಎಂದು ಇ.ಡಿ.ಎಂ.ಸಿ. ಪರಿಸರ ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್ ಪ್ರದೀಪ್ ಖಂಡೇಲ್ವಾಲ್ ತಿಳಿಸಿದ್ದಾರೆ. ಗಮನಾರ್ಹ ಅಂಶವೆಂದರೆ, 15 ವರ್ಷಗಳ ಹಿಂದೆಯೇ ಗಾಜಿಪುರಕ್ಕೆ ಕಸ ಸಾಗಣೆ ನಿಷೇಧಿಸಲಾಗಿತ್ತು. ಹೀಗಿದ್ದರೂ, ಪೂರ್ವ ದೆಹಲಿ ವ್ಯಾಪ್ತಿಯ ಶೇ.55-70ರಷ್ಟು ತ್ಯಾಜ್ಯಗಳನ್ನು ಅಲ್ಲಿಗೇ ಸಾಗಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.