ಪೆರ್ಡೂರು: ಕಸದ ರಾಶಿಗೆ ಮುಕ್ತಿ, ಚರಂಡಿ ದುರಸ್ತಿ
Team Udayavani, Sep 1, 2018, 2:20 AM IST
ಹಿರಿಯಡ್ಕ: ಉಡುಪಿಯಿಂದ ಪೆರ್ಡೂರು ಪ್ರವೇಶಿಸುವಾಗ ನಮಗೆ ಮೊದಲ ದರ್ಶನವಾಗುವುದು ರಾಶಿಬಿದ್ದ ಕಸಗಳು ಹಾಗೂ ಅದನ್ನು ತಿನ್ನಲು ಬಂದ ದನಗಳ ಸಾಲು. ಈ ಬಗ್ಗೆ ಹಲವು ಬಾರಿ ಪಂಚಾಯತ್ ಗಮನಕ್ಕೆ ತಂದು, ಪತ್ರಿಕೆಯ ಮೂಲಕ ಸಮಸ್ಯೆ ಬಗ್ಗೆ ತಿಳಿಸಿ ಕೊನೆಗೂ ಪೆರ್ಡೂರು ಗ್ರಾ. ಪಂ. ಎಚ್ಚೆತ್ತುಕೊಂಡು ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ ನೀಡಿದೆ. ಪೆರ್ಡೂರು ಗ್ರಾ. ಪಂ. ಅಧ್ಯಕ್ಷರು ಹಾಗೂ ಪಿಡಿಒ ಅವರ ವಿಶೇಷ ಮುತುವರ್ಜಿಯಲ್ಲಿ ಅನಂತಪದ್ಮನಾಭ ದೇವಸ್ಥಾನ ಬಳಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಎಲ್ಲೆಂದಲ್ಲಿಯೂ ಕಸದ ರಾಶಿ ಹಾಗೂ ಪೆರ್ಡೂರು ಹೆಸ್ಕೂಲ್ ಬಳಿ ಇರುವ ತ್ಯಾಜ್ಯದ ರಾಶಿಯನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಪ್ರಮುಖ ಬೀದಿಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು ಈ ಬಗ್ಗೆ ಪಂಚಾಯತ್ ಎಚ್ಚೆತ್ತುಕೊಂಡು ಪ್ರಮುಖ ಬೀದಿಯ ಎರಡು ಬದಿಯ ಚರಂಡಿಯನ್ನು ದುರಸ್ತಿಗೊಳಿಸಿದ್ದಾರೆ. ಹೊಂಡಬಿದ್ದ ರಸ್ತೆಗೆ ಜಲ್ಲಿ ಪುಡಿ ಹಾಕಿದ್ದು ಹಾಗೂ ರಸ್ತೆ ಬದಿ ಮಳೆಯ ನೀರಿನಿಂದ ಸಂಪೂರ್ಣ ಕೊಚ್ಚಿಹೋಗಿದ್ದ ಪ್ರದೇಶಗಳಿಗೆ ಕ್ರಶರ್ ಪುಡಿಗಳನ್ನು ಹಾಕಿ ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿದೆ.
ಕಟ್ಟುನಿಟ್ಟಿನ ಕ್ರಮ ಪೆರ್ಡೂರಿನ ಕಸದ ಸಮಸ್ಯೆ
ಇಂದು ನಿನ್ನೆಯದಲ್ಲ. ಪೆರ್ಡೂರು ದೇವಸ್ಥಾನದ ಬಳಿ ಕಸತಂದು ರಾಶಿ ಹಾಕುತ್ತಾರೆ.ಇದನ್ನು ಪಂಚಾಯತ್ ವತಿಯಿಂದ ತೆರವುಗೊಳಿಸಿದರೂ ಮತ್ತೆ ತಂದು ಹಾಕುತ್ತಾರೆ. ಯಾರೇ ಕಸತಂದು ಹಾಕಿದರೂ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮದೊಂದಿಗೆ ದಂಡವನ್ನು ವಿಧಿಸಲಾಗುವುದು.
– ಶಾಂಭವಿ ಕುಲಾಲ್, ಅಧ್ಯಕ್ಷರು, ಗ್ರಾ.ಪಂ. ಪೆರ್ಡೂರು.
ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಈಗಾಗಲೇ ಚರಂಡಿ
ದುರಸ್ತಿ, ತ್ಯಾಜ್ಯ ವಿಲೇವಾರಿ ಸಮಸ್ಯೆ ಸೇರಿದಂತೆ ಶಾಶ್ವತ ಮುಕ್ತಿಗೆ ಪಂಚಾಯತ್‌ನಿಂದ ವ್ಯವಸ್ಥೆ ಮಾಡಲಾಗಿದ್ದು ತ್ಯಾಜ್ಯ ಸಂಗ್ರಹಣೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ.ಅಲ್ಲದೆ ತ್ಯಾಜ್ಯವನ್ನು ಸಂಪನ್ಮೂಲವಾಗಿ ಬಳಸುವ ನಿಟ್ಟಿನಲ್ಲಿ ತ್ಯಾಜ್ಯವಿಲೇವಾರಿ ಘಟಕದ ಕೆಲಸ ಪ್ರಗತಿಯಲ್ಲಿದೆ.
– ಸುರೇಶ್, ಪಂ. ಅ. ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.