ವನಿತಾ ಸ್ಕ್ವಾಷ್: ಫೈನಲ್‌ಗೆ ನೆಗೆದ ಭಾರತ
Team Udayavani, Sep 1, 2018, 6:00 AM IST
ಜಕಾರ್ತಾ: ಹಾಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಮಲೇಶ್ಯಕ್ಕೆ 2-0 ಆಘಾತವಿಕ್ಕಿದ ಭಾರತದ ವನಿತಾ ತಂಡ ಫೈನಲ್‌ಗೆ ಲಗ್ಗೆ ಇರಿಸಿದೆ. ಈ ಮೂಲಕ ಜೋಶ್ನಾ ಚಿನ್ನಪ್ಪ, ದೀಪಿಕಾ ಪಳ್ಳಿಕಲ್ ಕಾರ್ತಿಕ್, ಸುನಯನಾ ಕುರುವಿಲ್ಲ ಮತ್ತು ತನ್ವಿ ಖನ್ನಾ ಅವರನ್ನೊಳಗೊಂಡ ಸ್ಕ್ವಾಷ್ ತಂಡ ದೊಡ್ಡ ಪದಕವೊಂದನ್ನು ಖಾತ್ರಿಗೊಳಿಸಿದೆ.
ಶುಕ್ರವಾರ ಮಲೇಶ್ಯ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದ ವಿಶೇಷವೆಂದರೆ, ವಿಶ್ವದ 16ನೇ ರ್‍ಯಾಂಕಿಂಗ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ 8 ಬಾರಿಯ ವಿಶ್ವ ಚಾಂಪಿಯನ್ ನಿಕೋಲ್ ಡೇವಿಡ್ ಅವರಿಗೆ ಸೋಲುಣಿಸಿದ್ದು. ಹಾಂಕಾಂಗ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಆ್ಯನಿ ಯು ವಿರುದ್ಧ ಆಘಾತಕಾರಿ ಸೋಲುಂಡಿದ್ದ ಜೋಶ್ನಾ, ಶುಕ್ರವಾರದ ದೊಡ್ಡ ಬೇಟೆಯೊಂದಿಗೆ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದರು. ಹಾಂಕಾಂಗ್ ಎದುರಿನ ಪಂದ್ಯವನ್ನು ಭಾರತ 1-2ರಿಂದ ಕಳೆದುಕೊಂಡಿತ್ತು. ಹೀಗಾಗಿ ಗ್ರೂಪ್ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿ ಬಲಾಡ್ಯ ಮಲೇಶ್ಯ ವಿರುದ್ಧ ಆಡುವ ಅವಕಾಶ ಪಡೆದಿತ್ತು.
5 ಸಲ ಏಶ್ಯನ್ ಗೇಮ್ಸ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನಿಕೋಲ್ ಡೇವಿಡ್ ಅವರನ್ನು ಜೋಶ್ನಾ ಚಿನ್ನಪ್ಪ 12-10, 11-9, 6-11, 10-12, 11-9 ಅಂತರದಿಂದ ಮಣಿಸಿದರು. ಬಳಿಕ ಅವರಿಂದ ಶಾಭಾಸ್‌ಗಿರಿಯನ್ನೂ ಪಡೆದರು. “ಜೋಶ್ನಾ ನಿಜಕ್ಕೂ ಅಮೋಘ ಪ್ರದರ್ಶನ ನೀಡಿದರು. ಇದೊಂದು ಅತ್ಯುತ್ತಮ ಪಂದ್ಯವಾಗಿತ್ತು. ಆದರೆ ನನ್ನಿಂದ ಎ ದರ್ಜೆಯ ಪಂದ್ಯವನ್ನು ಆಡಲಾಗಲಿಲ್ಲ’ ಎಂದು ನಿಕೋಲ್ ಡೇವಿಡ್ ಹೇಳಿದರು.
ಇನ್ನೊಂದು ಪಂದ್ಯದಲ್ಲಿ ವಿಶ್ವದ 19ನೇ ರ್‍ಯಾಂಕಿಂಗ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ವಿಶ್ವದ ಮಾಜಿ ನಂ.5 ಆಟಕಾರ್ತಿ ಲೋ ವೀ ವೆರ್ನ್ ವಿರುದ್ಧ 11-2, 11-9, 11-7 ನೇರ ಗೇಮ್‌ಗಳ ಜಯ ಸಾಧಿಸಿದರು. ಹಿಂದಿನ ಪಂದ್ಯದಲ್ಲಿ ಹಾಂಕಾಂಗ್‌ನ ಜೋಯ್ ಚಾನ್ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ದೀಪಿಕಾ, ವೀ ವೆರ್ನ್ ವಿರುದ್ಧ ತಮ್ಮ ಸಾಮರ್ಥ್ಯವನ್ನೆಲ್ಲ ತೆರೆದಿಟ್ಟರು.
ಇಂದು ಹಾಂಕಾಂಗ್ ಎದುರಾಳಿ
ಭಾರತ ಶನಿವಾರದ ಫೈನಲ್‌ನಲ್ಲಿ ಮತ್ತೆ ಹಾಂಕಾಂಗ್ ವಿರುದ್ಧ ಆಡಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಅದು ಜಪಾನ್ ವಿರುದ್ಧ 2-0 ಜಯ ಸಾಧಿಸಿತು.
“ಹಾಂಕಾಂಗ್ ಮಲೇಶ್ಯದಷ್ಟೇ ಕಠಿನ ಎದುರಾಳಿ. ಅದು ಬಲಿಷ್ಠ ಆಟಗಾರರನ್ನು ಹೊಂದಿದೆ. ಸೋಲಿಸುವುದು ಬಹಳ ಕಷ್ಟ. ಆದರೆ ನಾವು ತುಂಬು ಆತ್ಮವಿಶ್ವಾಸದಲ್ಲಿದ್ದೇವೆ’ ಎಂದಿದ್ದಾರೆ ದೀಪಿಕಾ. ಭಾರತ ಕಳೆದ ಏಶ್ಯಾಡ್‌ನಲ್ಲಿ ಬೆಳ್ಳಿ ಪದಕ ಗೆದ್ದಿತ್ತು. ಇದು ವನಿತಾ ಸ್ಕ್ವಾಷ್ ತಂಡದ ಅತ್ಯುತ್ತಮ ಸಾಧನೆಯಾಗಿದೆ.
ಪುರುಷರಿಗೆ ಕಂಚಿನ ಪದಕ
ಕಳೆದ ಬಾರಿಯ ಚಾಂಪಿಯನ್ ಆಗಿರುವ ಭಾರತದ ಪುರುಷರ ಸ್ಕ್ವಾಷ್ ತಂಡ ಈ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಶುಕ್ರವಾರದ ಸೆಮಿಫೈನಲ್‌ನಲ್ಲಿ ಹಾಂಕಾಂಗ್ ವಿರುದ್ಧ ಭಾರತ 0-2 ಅಂತರದ ಸೋಲನುಭವಿಸಿ ತೃತೀಯ ಸ್ಥಾನಿಯಾಯಿತು.
ಭಾರತ ತಂಡ ಸೌರವ್ ಘೋಷಾಲ್, ಹರೀಂದರ್ ಪಾಲ್ ಸಿಂಗ್ ಸಂಧು, ರಮಿತ್ ಟಂಡನ್ ಮತ್ತು ಮಹೇಶ್ ಮಂಗಾಂವ್ಕರ್ ಅವರನ್ನೊಳಗೊಂಡಿತ್ತು. ಸೆಮಿಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಘೋಷಾಲ್ ಮತ್ತು ಸಂಧು ಸೋಲನುಭವಿಸಿದರು.
ವೀ ವೆರ್ನ್ ಓರ್ವ ಅಗ್ರಮಾನ್ಯ ಆಟಗಾರ್ತಿ. ಹೀಗಾಗಿ ನನ್ನ ಸಾಮರ್ಥ್ಯವನ್ನೆಲ್ಲ ಪಣಕ್ಕಿಡ ಬೇಕಿತ್ತು. ಇದರಲ್ಲಿ ನಾನು ಯಶಸ್ವಿಯಾದೆ.
ದೀಪಿಕಾ ಪಳ್ಳಿಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.