ಸ್ಮಾರ್ಟ್ ರೋಡ್ ಕಾಮಗಾರಿ ಆರಂಭ
Team Udayavani, Sep 1, 2018, 10:49 AM IST
ಮಹಾನಗರ : ಸ್ಮಾರ್ಟ್ ಸಿಟಿ ಯೋಜನೆಯಡಿ ಮಹತ್ವದ ಕಾಮಗಾರಿಗಳಿಗೆ ನಗರದಲ್ಲಿ ಚಾಲನೆ ದೊರೆತಿದ್ದು, ಈಗ ಸ್ಟೇಟ್‌ಬ್ಯಾಂಕ್‌ನ ಎ.ಬಿ. ಶೆಟ್ಟಿ ವೃತ್ತದಿಂದ ಮಿನಿ ವಿಧಾನಸೌಧದ ಮುಂಭಾಗದ ವರೆಗಿನ (ಕ್ಲಾಕ್ ಟವರ್) ರಸ್ತೆಯನ್ನು ‘ಸ್ಮಾರ್ಟ್ ರಸ್ತೆ’ಯಾಗಿ ಪರಿವರ್ತಿಸುವ ಕೆಲಸ ಗುರುವಾರದಿಂದ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಒಂಬತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಈ ಪೈಕಿ ಕ್ಲಾಕ್‌ಟವರ್ ವೃತ್ತದಿಂದ ಎ.ಬಿ. ಶೆಟ್ಟಿ ವೃತ್ತದವರೆಗೆ ಸ್ಮಾರ್ಟ್‌ರೋಡ್ ನಿರ್ಮಾಣಕ್ಕೂ ಶಿಲಾನ್ಯಾಸ ನೆರವೇರಿತ್ತು. 7.56 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಎ.ಬಿ. ಶೆಟ್ಟಿ ವೃತ್ತದಿಂದ ಕ್ಲಾಕ್‌ಟವರ್‌ಗೆ ಬರುವ ರಸ್ತೆಯ ಎಡಭಾಗದಲ್ಲಿ (ನೆಹರೂ ಮೈದಾನ ಬದಿ) ಈಗಾಗಲೇ ಹಾಕಿರುವ ಇಂಟರ್‌ಲಾಕ್ ತೆಗೆದು ಅಲ್ಲಿ ಸ್ಮಾರ್ಟ್ ರಸ್ತೆಯ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಜನಸ್ನೇಹಿಯಾಗಿ ಸ್ಮಾರ್ಟ್‌ರೋಡ್ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ರಸ್ತೆಯ ಪಕ್ಕ ಅಲಂಕಾರಿಕವಾಗಿ ಹೂವುಗಳ ಜೋಡಣೆಗೆ ನಿರ್ಧರಿಸಲಾಗಿದೆ. ವಿಶೇಷವಾಗಿ ಈ ರಸ್ತೆಯ ಎರಡೂ ಭಾಗದಲ್ಲಿ ಸುಸಜ್ಜಿತ ಶೈಲಿಯಲ್ಲಿ ಫುಟ್‌ಪಾತ್ ನಿರ್ಮಾಣವಾಗಲಿದೆ. ಈಗ ನೆಹರೂ ಮೈದಾನ ಭಾಗದಲ್ಲಿ ಎ.ಬಿ. ಶೆಟ್ಟಿ ವೃತ್ತದಿಂದ ಪುರಭವನದವರೆಗೆ ರಸ್ತೆ ಬದಿ ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಮುಂದೆ ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತದೆ.
ಎರಡೂ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಇರುವುದರಿಂದ ಅದನ್ನು ಕಾಮಗಾರಿಗಾಗಿ ಬಳಸುವುದಿಲ್ಲ. ಬದಲಾಗಿ ಫುಟ್‌ಪಾತ್, ಜನಸ್ನೇಹಿ ಸೌಕರ್ಯ, ಸ್ಮಾರ್ಟ್ ಬಸ್ ಶೆಲ್ಟರ್ ಕಲ್ಪಿಸಲು ಮಾತ್ರ ಉದ್ದೇಶಿಸಲಾಗಿದೆ. ಸ್ಮಾರ್ಟ್ ರೋಡ್ ಕಾಮಗಾರಿ ಅಂತಿಮಗೊಳ್ಳುವ ಸಂದರ್ಭ ಆರ್‌ಟಿಒ ಭಾಗದಲ್ಲಿರುವ ಎಲ್ಲ ಬಸ್ ನಿಲ್ದಾಣಗಳನ್ನು ತೆಗೆದು ಅಲ್ಲಿ ಸ್ಮಾರ್ಟ್ ಬಸ್ ಶೆಲ್ಟರ್ ನಿರ್ಮಾಣವಾಗಲಿದೆ. ಇದರಲ್ಲಿ ಕೆಲವು ಬಸ್‌ಶೆಲ್ಟರ್ ನಲ್ಲಿ ಶೌಚಾಲಯ ವ್ಯವಸ್ಥೆಯೂ ಇರಲಿದೆ.
ರಸ್ತೆ ಮತ್ತೆ ವಿಸ್ತರಿಸುವುದಿಲ್ಲ
ಎ.ಬಿ. ಶೆಟ್ಟಿಯಿಂದ ಕ್ಲಾಕ್ ಟವರ್ ರಸ್ತೆ ಈಗಲೇ ವಿಸ್ತ ರಣೆಗೊಂಡಿರುವ ಹಿನ್ನೆಲೆಯಲ್ಲಿ ಈ ರಸ್ತೆ ಮತ್ತೆ ವಿಸ್ತರಿಸುವ ಉದ್ದೇಶ ಇಲ್ಲ. ರಸ್ತೆಯ ಮಧ್ಯ ಭಾಗದಲ್ಲಿ ಆಕರ್ಷಕ ಗಾರ್ಡನಿಂಗ್ ಮಾಡಲಾಗುತ್ತದೆ. ನಗರದಲ್ಲಿ ಎಲ್ಲೆಂದರಲ್ಲಿ ನೇತಾಡುವ ಕೇಬಲ್‌ಗಳಿಗೆ ಇನ್ನು ಮುಕ್ತಿ ಸಿಗಲಿವೆ. ಇದರಂತೆ ಎ.ಬಿ. ಶೆಟ್ಟಿ ರಸ್ತೆಯ ಕೇಬಲ್‌ಗಳೆಲ್ಲ ಫುಟ್‌ಪಾತ್‌ನ ಕೆಳಭಾಗದಲ್ಲಿ ಸಾಗಲಿದೆ. ಎಲ್ಲ ವಯರ್ ಗಳು ಅಂಡರ್‌ಗ್ರೌಂಡ್‌ನಲ್ಲಿರಲಿದೆ. ಎಲ್ಲೂ ಕೂಡ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲು ಸುಸಜ್ಜಿತ ‘ಸೆಂಟ್ರಲ್ ಕಮಾಂಡ್ ಸೆಂಟರ್’ ಕಾರ್ಯಾಚರಿಸಲಿದೆ. ಸ್ಮಾರ್ಟ್ ರೋಡ್‌ನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಅಳವಡಿಸಿ ಕಸದ ತೊಟ್ಟಿ, ಸ್ವಯಂಚಾಲಿತ ತ್ಯಾಜ್ಯ ನಿರ್ವಹಣಾ ವಾಹನ, ಇ-ಟಾಯ್ಲೆಟ್, ಸಿಸಿ ಕೆಮರಾ ಅಳವಡಿಸಿದ ಟ್ರಾಫಿಕ್ ವ್ಯವಸ್ಥೆ, ಬಸ್ ಟ್ರ್ಯಾಕಿಂಗ್ ವ್ಯವಸ್ಥೆ, ವೈಫೈ ಕೇಂದ್ರ, ಮಾಹಿತಿ ಬೋರ್ಡ್, ವಾಕ್ ವೇ ವ್ಯವಸ್ಥೆ ಇರಲಿದೆ. ರಸ್ತೆ ಅಕ್ಕ ಪಕ್ಕ ಹಸಿರ ಹೊದಿಕೆ, ಎಲ್ ಇಡಿ, ಸ್ಮಾರ್ಟ್ ಬಸ್ ನಿಲ್ದಾಣ, ಕಿಯೋಸ್ಕ್ ಸೆಂಟರ್‌ಗಳು, ಬಸ್, ವಿಮಾನ, ರೈಲಿನ ಸಮಯದ ವಿವರ ಎಲ್ಲವೂ ಹೈಫೈ ರೀತಿಯಲ್ಲಿ ದೊರೆಯಲಿದೆ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳು.
ಪ್ರಜ್ವಲಿಸಲಿದೆ ಆಲಂಕಾರಿಕ ದೀಪಗಳು!
ಎ.ಬಿ. ಶೆಟ್ಟಿ ವೃತ್ತದಿಂದ ಮಿನಿ ವಿಧಾನಸೌಧದ ಮುಂಭಾಗದವರೆಗೆ (ಹಿಂದಿನ ಕ್ಲಾಕ್ ಟವರ್)ರಸ್ತೆ ಸ್ಮಾರ್ಟ್ ರಸ್ತೆಯಾಗಿ ಬದಲಾಗುವ ಜತೆಗೆ ಇಲ್ಲಿ ಆಲಂಕಾರಿಕ ದೀಪಗಳು ಕಂಗೊಳಿಸಲಿವೆ. ಎರಡೂ ಬದಿಯಲ್ಲಿ ಅಲಂಕಾರಿಕ ಬಲ್ಬ್ ಗಳನ್ನು ಸುಂದರ ಶೈಲಿಯಲ್ಲಿ ಜೋಡಿಸಲಾಗುತ್ತದೆ. ಜತೆಗೆ ನೆಹರೂ ಮೈದಾನ ಭಾಗದ ರಸ್ತೆಯಲ್ಲಿ ಮರಗಳಿರುವುದರಿಂದ ಅದರ ಮಧ್ಯೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಕರ್ಷಕ ಕುರ್ಚಿಯ ವ್ಯವಸ್ಥೆ ಇರಲಿದೆ. ಮುಂಜಾನೆ, ಸಂಜೆ ಇಲ್ಲಿ ವಿಶ್ರಾಂತಿ ಪಡೆಯಲು ಅವಕಾಶವಿದೆ.
ಕ್ಲಾಕ್ ಟವರ್; ಶೀಘ್ರ ಬರಲಿದೆ ಗಡಿಯಾರ
ಸ್ಮಾರ್ಟ್‌ಸಿಟಿ ಯೋಜನೆಯಡಿ ಈಗಾಗಲೇ ಕ್ಲಾಕ್ ಟವರ್ ಕಾಮಗಾರಿ ಯನ್ನು ಕೈಗೆತ್ತಿಕೊಂಡಿದ್ದು, ಟವರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನದಲ್ಲಿ ಗಡಿಯಾರ ಜೋಡಣೆ ನಡೆಯಲಿದೆ.
ಫುಟ್‌ಪಾತ್‌ಗೆ ವಿಶೇಷ ಆದ್ಯತೆ
ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ಮಾರ್ಟ್‌ರೋಡ್ ಕಾಮಗಾರಿಯನ್ನು ಈಗಾಗಲೇ ಆರಂಬಿಸಲಾಗಿದೆ. ಸುವ್ಯವಸ್ಥಿತ ರೀತಿಯಲ್ಲಿ ಫುಟ್‌ಪಾತ್ ವ್ಯವಸ್ಥೆಯನ್ನು ಕೈಗೊಳ್ಳಲು ಇಲ್ಲಿ ನಿರ್ಧರಿಸಲಾಗಿದೆ. ಮಂಗಳೂರಿನಲ್ಲಿಯೇ ಮಾದರಿ ರೂಪದಲ್ಲಿ ಸ್ಮಾರ್ಟ್‌ಸಿಟಿಗೆ ಬೆಳಕಾಗುವ ನಿಟ್ಟಿನಲ್ಲಿ ಸ್ಮಾರ್ಟ್‌ರೋಡ್ ಸಿದ್ಧಗೊಳ್ಳಲಿದೆ.
– ಮೊಹಮ್ಮದ್ ನಝೀರ್, ವ್ಯವಸ್ಥಾಪಕ ನಿರ್ದೆಶಕರು,
ಸ್ಮಾರ್ಟ್‌ಸಿಟಿ ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.